ಎಸ್.ಆರ್.ಎಸ್ ಪದವಿ ಮಕ್ಕಳಿಗೆ ವೃತ್ತಿ ಮಾರ್ಗದರ್ಶನ ಸಲಹಾ ಕಾರ್ಯಾಗಾರ

ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಜೂ.೧೮; ನಗರದ  ಎಸ್.ಆರ್.ಎಸ್ ಬಿಸಿಎ ಪದವಿ ವಿದ್ಯಾರ್ಥಿಗಳಿಗೆ   ವೃತ್ತಿ ಮಾರ್ಗದರ್ಶನ ಸಲಹೆ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಎಸ್.ಆರ್.ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿಯಾದ ಡಾ. ರವಿ ಟಿ.ಎಸ್. ಹಾಗೂ ಪದವಿ ಪ್ರಾಂಶುಪಾಲರಾದ ಪ್ರೊ, ನಂದನ್ ಜಿ.ಪಿ  ಸಮ್ಮುಖದಲ್ಲಿ ನಡೆಯಿತು. ಈ ಕಾರ್ಯಾಗಾರಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಬೆಂಗಳೂರಿನ ಡಾ. ವಿ. ಪದ್ಮಪ್ರಿಯ  ಆಗಮಿಸಿ ಬಿಸಿಎ ಪದವಿ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಹಾಗೂ ಉದ್ಯೋಗ ಅವಕಾಶಗಳನ್ನು ಕುರಿತು ಉಪನ್ಯಾಸ ನೀಡಿದರು. ಉನ್ನತ ಶಿಕ್ಷಣದಲ್ಲಿ ಯಾವ ಯಾವ ಪ್ರಕಾರಗಳಿಗೆ  ಪ್ರಸ್ತುತ ದಿನಮಾನಗಳಿಗೆ ಹೆಚ್ಚು ಅವಕಾಶಗಳಿವೆ ಎಂದು ಮತ್ತು ಉದ್ಯೋಗವನ್ನು ಹೇಗೆ ಪಡೆದುಕೊಳ್ಳಬೇಕು, ಸ್ವ ಉದ್ಯೋಗಳನ್ನು ಹೇಗೆ ಸೃಷ್ಠಿಸಿಕೊಳ್ಳಬೇಕು ಎಂಬುದರ ಕುರಿತು ಮಹತ್ವದ ಮಾಹಿತಿಗಳನ್ನು ನೀಡಿದರು. ಆಡಳಿತಾಧಿಕಾರಿಯಾದ ಡಾ. ರವಿ ಟಿ.ಎಸ್. ಅವರು ಈ ಕಾರ್ಯಾಗಾರವು ವಿದ್ಯಾರ್ಥಿಗಳಿಗೆ ತುಂಬ ಮಹತ್ವಯುತವಾದದ್ದು ಎಲ್ಲಾ ಮಕ್ಕಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕಾರ್ಯಾಗಾರ ಕುರಿತು ಪ್ರಶಂಸೆಯನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಉದ್ಯೋಗ ಮತ್ತು ತರಬೇತಿ ವಿಭಾಗದ ಮುಖ್ಯಸ್ಥರಾದ ಸುದರ್ಶನ್ ಟಿ.ವಿ, ಹಿರಿಯ ಪ್ರಾಧ್ಯಾಪಕರಾದ ಪ್ರೊ, ಶ್ರೀಕಾಂತ್, ಪ್ರೊ, ಕಲ್ಲಿನಾಥ್, ಪ್ರೊ, ಅನುಷ, ಪ್ರೊ, ಮಾಧುರಿ, ಹಾಗೂ ಪ್ರಾಧ್ಯಾಪಕರುಗಳು ಉಪಸ್ಥಿತರಿದ್ದರು.