ಎಸ್. ಎಸ್. ಅಪ್ಪಾಜಿ ಜನುಮದಿನ ಹಬ್ಬದಂತೆ ಆಚರಿಸಿದ ಅಭಿಮಾನಿಗಳು

ಸಂಜೆವಾಣಿ ವಾರ್ತೆ
ದಾವಣಗೆರೆ.ಜೂ.೧೮: ಕಾಂಗ್ರೆಸ್ ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ 94ನೇ ಜನುಮದಿನಾಚರಣೆಯನ್ನು ಅಭಿಮಾನಿಗಳು ಹಬ್ಬದಂತೆ ಆಚರಿಸಿದರು. ಮೂರು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ನಡೆಸಿ ಅರ್ಥಪೂರ್ಣವಾಗಿ ಜನುಮದಿನ ಸೆಲೆಬ್ರೆಟ್ ಮಾಡಿದರು. ಗಿಡ ನೆಡುವುದು, ಬಾಸ್ಕೆಟ್ ಬಾಲ್ ಪಂದ್ಯಾವಳಿ, ಚಿತ್ರಕಲಾ ಸ್ಪರ್ಧೆ, ರಕ್ತದಾನ ಶಿಬಿರ ಮತ್ತು ಶಾಮನೂರು ಶಿವಶಂಕರಪ್ಪರ ಜೀವನಾಗಾಥೆ ಕುರಿತ ಚಿತ್ರ ಬಿಡಿಸುವಸ್ಪರ್ಧೆ ಯಶಸ್ವಿಯಾಗಿ ನಡೆಯಿತು. ದಾವಣಗೆರೆ ಬಾಸ್ಕೆಟ್ ಬಾಲ್ ಕ್ಲಬ್, ಡಾ. ಪ್ರಭಾ ಮಲ್ಲಿಕಾರ್ಜುನ್ ಅಭಿಮಾನಿ ಬಳಗ, ಗಡಿಗುಡಾಳ್ ಮಂಜುನಾಥ್ ಸ್ನೇಹ ಬಳಗದ ಆಶ್ರಯದಲ್ಲಿ ಈ ಕಾರ್ಯಕ್ರಮಗಳು ಜರುಗಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ದಾವಣಗೆರೆ ಬಾಸ್ಕೆಟ್ ಬಾಲ್ ಕ್ಲಬ್ ಆಶ್ರಯದಲ್ಲಿ ಶಾಮನೂರು ಶಿವಶಂಕರಪ್ಪ ಅವರ 94ನೇ ಹುಟ್ಟು ಹಬ್ಬದ ಪ್ರಯುಕ್ತ ಜಿಲ್ಲಾ ಮಟ್ಟದ ಬಾಸ್ಕೆಟ್ ಬಾಲ್ ಪಂದ್ಯಾವಳಿ ಆಯೋಜಿಸಲಾಗಿತ್ತು. 13 ಮತ್ತು 16 ವರ್ಷದ ಬಾಲಕರು ಹಾಗೂ ಪುರುಷರ ಬಾಸ್ಕೆಟ್ ಬಾಲ್ ಪಂದ್ಯಾವಳಿಯು ಯಶಸ್ವಿಯಾಗಿ ನೆರವೇರಿತು. 13 ವಯಸ್ಸಿನ ಬಾಲಕರ ವಿಭಾಗದಲ್ಲಿ 15-10 ಅಂಕಗಳಿಂದ ಟೀಮ್ ವಾರಿಯರ್ಸ್ ಪ್ರಥಮ ಸ್ಥಾನ , ದ್ವಿತೀಯ ಸ್ಥಾನ ಡಿಫೆಂಡರ್ಸ್ ಮತ್ತು ತೃತೀಯ ಸ್ಥಾನ ಟೈಗರ್ ಬುಲ್ಸ್ ಪಡೆದುಕೊಂಡಿತು. 16 ವಯಸ್ಸಿನ ಬಾಲಕರ ದಾವಣಗೆರೆ ಬಾಸ್ಕೆಟ್ ಬಾಲ್ ಕ್ಲಬ್ ನ  ಗೋಲ್ಡನ್ ವಾರಿಯರ್ಸ್ 20-16 ಅಂಕಗಳಿಂದ ಪ್ರಥಮ ಸ್ಥಾನ, ದ್ವಿತೀಯ ಸ್ಥಾನ ಲೇಕರ್ಸ್, ತೃತೀಯ ಸ್ಥಾನ ದಾವನ್ಸ್ ಬ್ಯಾಸ್ಕೆಟ್ಬಾಲ್ ಕ್ಲಬ್ ಪಡೆದುಕೊಂಡಿತು. ಇನ್ನು ಪುರುಷರ ವಿಭಾಗದಲ್ಲಿ 40-37 ಅಂಕಗಳಿಂದ ಪ್ರಥಮ ಸ್ಥಾನ ದಾವಣಗೆರೆ ಬಾಸ್ಕೆಟ್ ಬಾಲ್ ಕ್ಲಬ್ ಪಡೆದಿದ್ದು ದ್ವಿತೀಯ ಸ್ಥಾನ ಎಸ್ ಎಸ್ ಐ ಎಂ ಎಸ್ ಮೆಡಿಕಲ್ ಕಾಲೇಜ್ ಗೆದ್ದುಕೊಂಡಿತು. ಬಹುಮಾನ ಕಾರ್ಯಕ್ರಮಕ್ಕೆ ದಾವಣಗೆರೆ ಬಾಸ್ಕೆಟ್ ಬಾಲ್ ಕ್ಲಬ್ಬಿನ‌ ಗೌರವಾಧ್ಯಕ್ಷ ರಾಮ್ ಮೂರ್ತಿ ಸಿ, ಅಧ್ಯಕ್ಷ ಕಿರಣ್ ಕುಮಾರ್ ಆರ್, ಉಪಾಧ್ಯಕ್ಷ ಗಡಿಗುಡಾಳ್ ಮಂಜುನಾಥ್, ಉಪಾಧ್ಯಕ್ಷ ವಿಜಯಕುಮಾರ್, ಖಜಾಂಚಿ ಪ್ರಸನ್ನ ,ತರಬೇತರಾದ ದರ್ಶನ್ ಆರ್. ಹಾಗೂ ಸಚಿನ್ ಘಾಟ್ಗೆ ಹಾಗೂ ಕ್ಲಬ್ ನ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.