ಹಿರಿಯೂರಿನಲ್ಲಿ ಸಂಭ್ರಮದ ಬಕ್ರೀದ್ ಆಚರಣೆ

ಸಂಜೆವಾಣಿ ವಾರ್ತೆ
ಹಿರಿಯೂರು ಜೂ. 17; ಹಿರಿಯೂರು ನಗರದಲ್ಲಿ ಸಮಸ್ತ ಮುಸ್ಲಿಂ ಬಾಂಧವರು ಸಡಗರ ಸಂಭ್ರಮದಿಂದ  ಬಕ್ರೀದ್ ಹಬ್ಬವನ್ನು ಆಚರಿಸಿದರು. ನಗರದ ಜಾಮಿಯಾ ಮಸೀದಿ ಬಳಿ ಸೇರಿದ ಸಮಸ್ತ ಮುಸ್ಲಿಂ ಬಾಂಧವರು ಅಲ್ಲಿಂದ ತೇರುಮಲೇಶ್ವರ ಸ್ವಾಮಿ ದೇವಾಲಯದ ಮುಂಭಾಗದಿಂದ ನೆಹರು ವೃತ್ತ  ಗಾಂಧಿ ವೃತ್ತ ದಮೂಲಕ ತಾಲೂಕು ಕಚೇರಿ  ಬಳಿ ಇರುವ ಪ್ರಾರ್ಥನಾ ಮೈದಾನಕ್ಕೆ ತಲುಪಿ ಉತ್ತಮ ಮಳೆ ಬೆಳೆಯಾಗಲಿ  ಎಂದು ಹಾಗೂ ಸುಖ ಶಾಂತಿ ಗಾಗಿ ಪ್ರಾರ್ಥಿಸಿ  ಪ್ರಾರ್ಥನೆ ಸಲ್ಲಿಸಿದರು