ಮಠದಕುರುಬರ ಹಟ್ಟಿ ಗ್ರಾ.ಪಂನಿಂದ ಅಸಮರ್ಪಕ ಕಸ ನಿರ್ವಹಣೆ; ಆರೋಪ

ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಜೂ.೧೭: ಮಠದಕುರುಬರ ಹಟ್ಟಿ ಸುತ್ತಮುತ್ತ ಇರುವ ರಸ್ತೆ ಬದಿಯ ಜಾಗದಲ್ಲೆಲ್ಲಾ ಕಸ ತುಂಬಿ ತುಳುಕುತ್ತಿದ್ದು, ರಸ್ತೆಯ ಮೇಲೆಲ್ಲ ಹರಡಿಕೊಂಡಿದ್ದರು ಸಹ, ಗ್ರಾಮ ಪಂಚಾಯಿತಿಯವರು ಇತ್ತಕಡೆ ಗಮನಹರಿಸದೆ ಇರುವುದು ಶೋಚನೀಯ. ಆಂಜನೇಯ ದೇವಾಸ್ಥಾನದ ಪಕ್ಕ ಕಸ ಗುಡ್ಡೆಯಾಗಿ ಕುಳಿತಿದೆ. ಇಲ್ಲಿ ಕಸ ಹೆಚ್ಚಾಗುತ್ತಿದೆ ಅದನ್ನ ವಿಧೇವಾರಿ ಮಾಡಿ, ಸಮರ್ಪಕವಾಗಿ ನಿರ್ವಹಿಸಿ ಎಂದು ಗ್ರಾಮ ಪಂಚಾಯಿತಿಯ ಗಮನಕ್ಕೆ ಗ್ರಾಮಸ್ಶರು ತಂದರು ಸಹ ಇದರ ಬಗ್ಗೆ ನಿರ್ಲಕ್ಷ÷್ಯ ಭಾವನೆಯನ್ನು ಹೊಂದಿರುವುದು ಆಶ್ಚರ್ಯ ತಂದಿದೆ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಮತ್ತು ಕರ್ನಾಟಕ ಸರ್ವೋದಯ ಮಂಡಳಿಯ ಚಿತ್ರದುರ್ಗ ಜಿಲ್ಲಾ ಅಧ್ಯಕ್ಷರಾದ ಎಚ್ ಕೆ ಎಸ್ ಸ್ವಾಮಿ ಅವರು ಆಪಾದಿಸಿದ್ದಾರೆ. ಮಠದ ಕುರುಬರಟ್ಟಿ ಕೆಳಸೇತುವೆಯ ಕಟ್ಟೆಯ ಮೇಲೆ ಸಹ ಅಕ್ಕಪಕ್ಕ ಕಸದ ಚೀಲಗಳನ್ನು ತಂದು ಸುರಿದಿದ್ದಾರೆ, ಕೆರೆಯ ಅಂಚಿನಲ್ಲೂ ಸಹ ಕಸ ಸಂಗ್ರಹವಾಗಿ ಅದಕ್ಕೆ ದಿನನಿತ್ಯ ಬೆಂಕಿ ಇಡುವ ದೃಶ್ಯವೂ ಸಹ ಎದ್ದು ಕಾಣುತ್ತದೆ. ಕೆರೆ ಪಕ್ಕನೇ ಬೆಂಕಿ ಹಾಕಿಕೊಂಡು ವಾಯುಮಾಲಿನ್ಯಕ್ಕೆ ಕಾರಣವಾಗಿರುವಂತಹ ಗ್ರಾಮ ಪಂಚಾಯಿತಿ ಇನ್ನು ಮುಂದಾದರೂ ಕಸವನ್ನ ಸಮರ್ಪಕವಾಗಿ ಎಲೆವಾರಿ ಮಾಡುವಂತಹ ವ್ಯವಸ್ಥೆ ಕಲ್ಪಿಸಬೇಕು ಎಂದು ವಿನಂತಿಸಿಕೊAಡಿದ್ದಾರೆ.ಗ್ರಾಮ ಪಂಚಾಯಿತಿಗಳು ಕಸವಿಲೇವಾರಿಯಲ್ಲಿ ಸಮರ್ಪಕವಾಗಿ ಕೆಲಸ ನಿರ್ವಹಿಸದೆ, ಗ್ರಾಮಗಳೆಲ್ಲಾ ಕಸದ ತೊಟ್ಟಿಗಳಾಗಿ ಮಾರ್ಪಾಡಾಗುತ್ತಿವೆ. ಗ್ರಾಮ ಪಂಚಾಯತಿಗಳು ಕಸದ ರಾಶಿಯನ್ನು ಇಟ್ಟುಕೊಂಡು ಬದುಕುತ್ತಿವೆ. ಜನರು ಸಹ ಎಲ್ಲಿಂದರಲ್ಲಿ ಕಸ ಎಸೆಯುತ್ತಿರುವುದರಿಂದ ಗ್ರಾಮ ಪಂಚಾಯಿತಿಯವರು ದಿನನಿತ್ಯ ಕಸ ಸಂಗ್ರಹಿಸುವAತಹ ವ್ಯವಸ್ಥೆ ಮಾಡಿಕೊಳ್ಳುವವರೆಗೂ ಈ ಅವ್ಯವಸ್ಥೆ ಮುಂದುವರಿಯುತ್ತಿರುತ್ತದೆ ಎಂದರು ನಗರಸಭೆಯಲ್ಲಿರುವಂತೆ ಗ್ರಾಮ ಪಂಚಾಯತಿಗಳು ಸಹ ದಿನನಿತ್ಯ ಕಸ ಸಂಗ್ರಹಿಸುವAತಹ ಗಾಡಿಗಳ ಏರ್ಪಾಡು ಮಾಡಬೇಕು, ತಿಂಗಳಿಗೊಮ್ಮೆ ಅಥವಾ ಎರಡು ತಿಂಗಳಿಗೊಮ್ಮೆ ಟ್ರಾ÷್ಯಕ್ಟರ್ ಬಳಸಿ ಕಸ ಎತ್ತುತ್ತಿರುವುದರಿಂದ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲೂ ಸಹ ಕಸದ ರಾಶಿ ಎದ್ದು ಕಾಣುತ್ತಿದೆ. ಜಿಲ್ಲಾ ಪಂಚಾಯತ್‌ನವರು ಗ್ರಾಮ ಪಂಚಾಯಿತಿಗಳಿಗೆ ದಿನನಿತ್ಯ ಕಸ ಸಂಗ್ರಹಿಸುವAತಹ ವಾಹನ ನೀಡಿ, ಸಣ್ಣ ಗ್ರಾಮಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಗ್ರಾಮಸ್ಥರಿಗೆ ಜಾಗೃತಿ ಮೂಡಿಸಬೇಕು ಎಂದು ವಿನಂತಿಸಿಕೊAಡಿದ್ದಾರೆ.