ಹಿರಿಯ ವಿದ್ಯಾರ್ಥಿಗಳಿಂದ ಗುರು ವಂದನಾ ಕಾರ್ಯಕ್ರಮ

ಸಂಜೆವಾಣಿ ವಾರ್ತೆ
ಜಗಳೂರು.ಜೂ.೧೭; ತಾಲೂಕಿನ ತೋರಣಗಟ್ಟೆ ಗ್ರಾಮದ ಸರ್ಕಾರಿ ಪ್ರೌಢಶಾಲೆ 1991-92 ನೇ ಸಾಲಿನ ಹತ್ತನೇ ತರಗತಿಯ ಹಳೆ ವಿದ್ಯಾರ್ಥಿಗಳು  ಪ್ರಾಥಮಿಕ ಮತ್ತು ಪ್ರೌಢಶಾಲೆಯ ಗುರುಗಳಿಗೆ ಗುರುವಂದನಾ ಕಾರ್ಯ ಕ್ರಮವನ್ನು ಏರ್ಪಡಿಸಿದ್ದರು ತೋರಣಗಟ್ಟೆಯ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇದೇ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ ನಿವೃತ್ತ ಜಂಟಿ ನಿರ್ದೇಶಕರಾದ ಡಿ.ಕೆ ಶಿವಕುಮಾರ್ ಅವರು ವಹಿಸಿ ದ್ದರು ನಿರೂಪಣೆ ಮತ್ತು ಪ್ರಾಸ್ತಾವಿಕ ನುಡಿಯನ್ನು ಕೆ.ನಾಗೇಶ್ ಶಿಕ್ಷಕರು ನಿರ್ವಹಿಸಿದರು ಸ್ವಾಗತವನ್ನು ದೇವರಾಜ್ ಜೆ.ಎಸ್ ಶಿಕ್ಷಕರು ನಿರ್ವಹಿಸಿದರು.ಇದೇ ಸಂದರ್ಭದಲ್ಲಿ ಪ್ರೌಢಶಾಲಾ ಶಿಕ್ಷಕರುಗಳಾದ ಎಚ್. ರಾಮಲಿಂಗಪ್ಪ ವಿ.ಜಿ ಹಾಲಪ್ಪ ಶಾರದಮ್ಮ.ಪ್ರಾಥಮಿಕ ಶಾಲಾ ಶಿಕ್ಷಕರುಗಳಾದ ಖಾದರ್ ಸಾಹೇಬ್ ಬಿ.ಎಚ್ ರೇವಣಸಿದ್ದಪ್ಪ ಎಂ.ಬಿ ವೀರಣ್ಣ.ಕಲ್ಲಪ್ಪ.ವೀರಪ್ಪ ಇವರು ಇವರನ್ನು ಹೃತ್ಪೂ ರ್ವಕ ವಾಗಿ ಸನ್ಮಾನವನ್ನು ಸ್ವೀಕರಿಸಿ ನಂತರ ಗುರು ಶಿಷ್ಯ ಸಂಬಂಧದ ಬಗ್ಗೆ ಎಲ್ಲಾ ಶಿಕ್ಷಕರು ತುಂಬಾ ಸಂತೋಷವನ್ನು ವ್ಯಕ್ತಪಡಿಸಿದರು ಈ ಸಮಾರಂಭದ ಅನಿಸಿಕೆಗಳನ್ನು ಸೈನಿಕರಾದ ಎಂ. ಎಚ್ ದೇವರಾಜ್.ವಿರೇಶ್.ಸರಸ್ವತಿ ಶಿಕ್ಷಕರು ಹಂಚಿ ಕೊಂಡರು ನಂತರ ಹಳೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸಂಜೆವರೆಗೂ ಸಂತೋಷವನ್ನು ಹಂಚಿಕೊಂಡರು ಸಂಭ್ರಮಿಸಿದರು .