ಪೆಟ್ರೋಲ್ ಡಿಸೇಲ್ ಬೆಲೆಏರಿಕೆಗೆ ರೈತಮುಖಂಡ ಬಲ್ಲೂರು ರವಿಕುಮಾರ್ ಖಂಡನೆ
ಸಂಜೆವಾಣಿ ವಾರ್ತೆ
ದಾವಣಗೆರೆ. ಜೂ.೧೭; ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಸಾರ್ವಜನಿಕರ ಬದುಕಿನಲ್ಲಿ ಹೊರೆಯಾಗುವಂತಾಗಿದೆ  ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗೆ ಹಣ ಸರಿದೂಗಿಸಲು ಜನರಿಗೆ ಹೊರೆ ಮಾಡಿದೆ ಎಂದು ರಾಜ್ಯ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಲ್ಲೂರು ರವಿಕುಮಾರ್ ಅಸಮಾಧಾನ ವ್ಯಕ್ತಪಡಿಸಿದರುಮುಖ್ಯಮಂತ್ರಿಗಳ ಸಲಹೆಗಾರರು ಸಾಮಾನ್ಯ ಜನರ ಕಷ್ಟದ ಬಗ್ಗೆ ಮಾಹಿತಿ ನೀಡುತ್ತಿಲ್ಲ ಅವರ ಸಲಹೆಗಾರರು ಶ್ರೀಮಂತರು ಬದುಕುವ ದಾರಿಯನ್ನು ತೋರಿಸುತ್ತಾ  ಕಣ್ಣಿಗೆ ಬಟ್ಟೆಯನ್ನು ಕಟ್ಟಿ ಕುರುಡ ನಾಟಕವನ್ನು ಆಡಿಸುತ್ತಿದ್ದಾರೆ ಆದ್ದರಿಂದ ಮುಖ್ಯಮಂತ್ರಿಗಳು ಚುನಾವಣೆ ಪ್ರಣಾಳಿಕೆಯಲ್ಲಿ ಸಾರ್ವಜನಿಕರಿಗೆ ಚುನಾವಣೆಯಲ್ಲಿ ನಮ್ಮ ಪಕ್ಷ ಬಂದರೆ ಐರಾವತವನ್ನು ತೋರಿಸುತ್ತೇನೆ ಎಂದು ಹೇಳುತ್ತಾ ಬಡವರ ಬದುಕಿನ ಬಗ್ಗೆ ಗಾಯದ ಮೇಲೆ ಬರೆ ಎಳೆದಂತೆ ನಡೆದುಕೊಳ್ಳುತ್ತಿದ್ದಾರೆ.ಕೇಂದ್ರದ ಆಡಳಿತ ರೂಢ ಬಿಜೆಪಿ ಹಾಗೂ ವಿರೋಧ ಪಕ್ಷ ಕಾಂಗ್ರೆಸ್ ಜನರಿಗೆ ಕುರುಡರ ನಾಟಕವನ್ನು ಆಡುತ್ತಿದ್ದಾರೆ. ನಿಮ್ಮ ನಾಟಕದ ಬಣ್ಣ ಬಯಲಾಗುವ ಸಮಯ ಹತ್ತಿರ ಬಂದಿದೆ ಕಾರಣ ಒಬ್ಬರು ಹಿಂದುತ್ವದ ಮೇಲೆ ಹೋರಾಟ ಮಾಡುತ್ತೀರಿ ಕೆಲವರು ಜಾತ್ಯಾತೀತ ಮೇಲೆ ಹೋರಾಟ ಮಾಡಿ ಜನರಿಗೆ ಕಣ್ಣಿಗೆ ಮಣ್ಣೆರೆಚುತ್ತ ನಿಮ್ಮ ರಂಗಿನಾಟವನ್ನು ಜನರಿಗೆ ತೋರಿಸುತ್ತಾ ಜನರನ್ನು ಮರಳು ಮಾಡುತ್ತಿದ್ದೀರಿ ಒಂದಲ್ಲ ಒಂದು ದಿನ ತಾವುಗಳು ಮಾಡಿದ ಕೃತ್ಯಗಳು ಜನಸಾಮಾನ್ಯರಿಗೆ ತಿಳಿದು ನಿಮ್ಮನ್ನು ಮೂಲೆಗುಂಪು ಮಾಡಲು ಬಹಳ ಸಮಯವಿಲ್ಲ ಆದ್ದರಿಂದ ತಾವುಗಳು ಎಚ್ಚೆತ್ತುಕೊಂಡರೆ ಸೂಕ್ತ ಇಲ್ಲವಾದರೆ ಅಧಿಕಾರ ತ್ಯಾಗ ಮಾಡಿ ಸಾಮಾನ್ಯರನ್ನು ನೋಡಿಕೊಳ್ಳಲು ಸಾಧ್ಯವಿಲ್ಲವೆಂದು ತಾವುಗಳು ತಮ್ಮ ತಮ್ಮ ಮನೆಗೆ ಹೋಗಬಹುದು ಎಂದಿದ್ದಾರೆ.