ರಸ್ತೆ ಅಪಘಾತಗಳಾಗುವ ಸ್ಥಳಗಳ ಗುರುತಿಸುವಲ್ಲಿ ನಾವು ವಿಫಲರಾಗುತ್ತಿದ್ದೇವೆ

ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಜೂ.೧೭.: ಚಿತ್ರದುರ್ಗದ ಜೆಸಿಆರ್ ಬಡಾವಣೆಯಲ್ಲಿ ಮೈಯೆಲ್ಲಾ ಕಣ್ಣಾಗಿಸಿ ಗಾಡಿ ಚಲಾಯಿಸಬೇಕು, ಸ್ವಲ್ಪ ಎಚ್ಚರ ತಪ್ಪಿಸಿದರೆ ಗುಂಡಿಗಳಿಗೆ ಗಾಡಿ ಇಳಿಸಿ, ಮುಗ್ಗರಿಸಿ, ಕೈಕಾಲು ಮುರಿದ ಕೊಳ್ಳುವುದು ನೂರರಷ್ಟು ಗ್ಯಾರಂಟಿ. ರಸ್ತೆ ಅಪಘಾತಗಳ ಆಗುವ ಗುಂಡಿಗಳ ನಿರ್ವಹಣೆಯಲ್ಲಿ ನಾವು ವಿಫಲರಾಗುತ್ತಿದ್ದೇವೆ. ದಿನನಿತ್ಯ ನಡೆಯುತ್ತಿರುವ ರಸ್ತೆ ಅಪಘಾತಗಳನ್ನ ಗಮನಿಸಿದರೆ, ಸಣ್ಣ ಸಣ್ಣ ಗುಂಡಿಗಳು ಸಹ, ದೊಡ್ಡ ದೊಡ್ಡ ಅಪಘಾತಗಳನ್ನೇ ಮಾಡಿಬಿಡುತ್ತವೆ. ಜನರ ಜೀವ ತೆಗೆಯಲು ಕಾದು ಕುಳಿತಿರುವಂತಹ ಗುಂಡಿಗಳನ್ನ ಸರಿಪಡಿಸುವಂತಹ, ಮುಂಜಾಗ್ರತ ಕ್ರಮಗಳನ್ನು ನಗರಸಭೆಯವರು, ಗ್ರಾಮ ಪಂಚಾಯಿತಿಯವರು, ಜಿಲ್ಲಾಡಳಿತದವರು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಬೇಕು ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಮತ್ತು ಕರ್ನಾಟಕ ಸರ್ವೋದಯ ಮಂಡಳಿಯ ಚಿತ್ರದುರ್ಗ ಜಿಲ್ಲಾ ಅಧ್ಯಕ್ಷರಾದ ಡಾ. ಹೆಚ್.ಕೆ. ಎಸ್. ಸ್ವಾಮಿ ಅವರು ತಿಳಿಸಿದ್ದಾರೆಜೆ.ಸಿ.ಆರ್. ಬಡಾವಣೆ ರಸ್ತೆಯಲ್ಲಿ ಎರಡು ಅಪಘಾತಕ್ಕಾಗಿ ತೆರೆದಿಟ್ಟಂತೆ ಗುಂಡಿಗಳು ನಿರ್ಮಾಣವಾಗಿದೆ, ಅವೆರಡು ಸಹ ಸ್ವಾಭಾವಿಕವಾಗಿ ಆದಂತ ಗುಂಡಿಗಳಲ್ಲ, ಮಾನವ ನಿರ್ಮಿತ ಅಪಘಾತ ಸ್ಥಳಗಳಾಗಿವೆ, ಒಂದು ಬಿಎಸ್‌ಎನ್‌ಎಲ್ ಕೇಬಲ್ ಹಾದುಹೋಗುವ ಗುಂಡಿಯನ್ನು ಲೋಹದ ಮುಚ್ಚಳದಿಂದ ಮುಚ್ಚಲಾಗಿದೆ, ಅದರ ಮೇಲೆ ಭಾರವಾದ ವಾಹನಗಳು ಚಲಿಸಿದ್ದರಿಂದ, ಅದು ಕುಸಿದು ಕುಳಿತಿದೆ. ಈಗ ಯಾರಾದರೂ ವೇಗವಾಗಿ ಗಾಡಿಯಲ್ಲಿ ಬಂದರೆ, ಮೂರು ಚಕ್ರ ವಾಹನಗಳು, ದ್ವಿಚಕ್ರ ವಾಹನಗಳು, ಪಲ್ಟಿ ಹೊಡೆಯುವ ಸಂಭವಗಳಿವೆ. ಅದರಲ್ಲೂ ಸೂಕ್ಷ÷್ಮವಾಗಿ ಗಾಡಿಚಲಾಯಿಸುವ ಮಹಿಳೆಯರು ಈ ಗುಂಡಿಯ ಬಳಿ ಅಪಘಾತಕ್ಕಿಳಾಗುವ ಸಂಭವಗಳಿವೆ. ಗುಂಡಿಯನ್ನು ಸರಿಯಾಗಿ ಮುಚ್ಚದೆ, ಹಾಗೆ ರಸ್ತೆ ಮಧ್ಯ ಭಾಗದಲ್ಲಿ ತೆರೆದಿಟ್ಟಿರುವುದರಿಂದ, ಅಲ್ಲಿ ಅಪಘಾತ ಆಗುವÀ ಸ್ಥಳವಾಗಿದೆ. ಇಂತಹವು ನಗರದಲ್ಲಿ ನೂರಾರು ಇವೆ. ಅವುಗಳನ್ನು ಗುರುತಿಸಿ, ಮಂಜಾಗ್ರತೆ ಕ್ರಮ ವಹಿಸಿದರೆ ಮಾತ್ರ, ಅಮೂಲ್ಯವಾದ ಜೀವ ರಕ್ಷಣೆಯಲ್ಲಿ ನಾವು ಯಶಸ್ವಿಯಾಗುತ್ತೇವೆ ಎಂದಿದ್ದಾರೆ.ಗಾಡಿ ಚಲಾಯಿಸುವರು ಮೈಯೆಲ್ಲಾ ಕಣ್ಣಾಗಿಸಿಕೊಂಡು, ಗಾಡಿ ಚಲಾಯಿಸಬೇಕಾಗಿದೆ. ಇದರ ಬಗ್ಗೆ ಸಾರ್ವಜನಿಕರು ಸಹ ಜಾಗೃತರಾಗಿ, ಅಧಿಕಾರಿಗಳ ಗಮನಕ್ಕೆ ತರಬೇಕಾದ್ದು ಅವರ ಕರ್ತವ್ಯವಾಗಿದೆ. ಹಾಗೆ ನಿರ್ಲಕ್ಷದಿಂದ ಗಾಡಿ ಚಲಾಯಿಸುತ್ತಿರುವುದರಿಂದ, ಏಕಾಏಕಿ ಅಪಘಾತವಾದಾಗ, ರಸ್ತೆಗೆ ಇಳಿದು, ಉಗ್ರಹೋರಾಟ ಮಾಡಿ, ಕಲ್ಲುತೂರಾಟ ಮಾಡಿ, ಗಲಾಟೆ ಎಬ್ಬಿಸುವುದಕ್ಕಿಂತ, ಶಾಂತವಾದ ಸಮಯದಲ್ಲಿ ನಾವು ಇವುಗಳ ಬಗ್ಗೆ ಮುಂಜಾಗ್ರತೆ ವಹಿಸಬೇಕಾಗಿದೆ ಎಂದಿದ್ದಾರೆ.ಯಾವುದಾದರೂ ಒಂದು ಸ್ಥಳದಲ್ಲಿ ಅಪಘಾತವಾದ ನಂತರ ಅಲ್ಲಿಯ ಸಾವು ನೋವುಗಳನ್ನು ಲೆಕ್ಕ ತೆಗೆದುಕೊಂಡು, ನಾವು ರಿಪೇರಿ ಕೆಲಸ ಹಚ್ಚಿಕೊಳ್ಳುತ್ತೇವೆ. ಅದಕ್ಕಿಂತ ಮುಂಚೆ ನಾವು ಜಾಗ್ರತರಾಗುವುದೇ ಇಲ್ಲ, ಬೆಂಕಿ ಬಿದ್ದಾಗ ಬಾವಿಗಳ ತೋಡುವಂತೆ. ಹಾಗಾಗಿ ಅಧಿಕಾರಿಗಳು ತಮ್ಮ ವಾಹನ ಚಲಾಯಿಸುವಾಗ ಅವರ ದೃಷ್ಟಿಯನ್ನು ರೋಡಿನÀ ಮೇಲೆ, ಗುಂಡಿಗಳ ಮೇಲೆ ಆವರಿಸಿದರೆ ಇಂಥಹ ಗುಂಡಿಗಳನ್ನ ಕಂಡುಹಿಡಿದು, ಸೂಕ್ತ ಸಮಯದಲ್ಲಿ ಮುಚ್ಚಬಹುದು. ಕಡಿಮೆ ವೆಚ್ಚದಲ್ಲಿ ಆಗುವ ಕೆಲಸಗಳನ್ನ ದೊಡ್ಡ ಮಟ್ಟದಲ್ಲಿ ಅಪಘಾತವಾದಾಗ, ಪರಿಹಾರ ಕೊಡಬೇಕಾದಾಗ ಖರ್ಚು ಮಾಡುವುದಕ್ಕಿಂತ ಹೆಚ್ಚು ಜಾಣತನ ಕೆಲಸವಾಗುತ್ತದೆ. ಅಧಿಕಾರಿಗಳು ಸೂಕ್ಷ÷್ಮವಾಗಿ ಗಮನಿಸಿದರೆ ಇಂಥವೆಲ್ಲವೂ ಸರಿಪಡಿಸಲು ಸಾಧ್ಯವಾಗುತ್ತದೆ. ಇಂತಹ ಗುಂಡಿಗಳ ಬಗ್ಗೆ, ರಸ್ತೆ ನಿಯಮಗಳ ಅನುಷ್ಟಾನದ ಬಗ್ಗೆ, ಸಂಚಾರ ನಿಯಮಗಳ ಪಾಲನೆಯಲ್ಲಿ ನಾವು ಹಿಂದುಳಿಯುತ್ತಿದ್ದೇವೆ, ಇದರ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ ಎಂದಿದ್ದಾರೆ.