ಪ್ರತಿಭಾವಂತರು ಸಮಾಜ ಮುಖಿಯಾಗಬೇಕು; ಬಿ.ಪಾಲಾಕ್ಷಿ

ಸಂಜೆವಾಣಿ ವಾರ್ತೆ
ದಾವಣಗೆರೆ.ಜೂ.೧೭: ಪ್ರತಿಭಾವಂತರು ಸಮಾಜ ಮುಖಿಯಾಗಬೇಕು.‌ ಆಗ ಸಮಾಜದ ಆರೋಗ್ಯ ಕಾಪಾಡಲು ಸಾಧ್ಯ ಎಂದು ಉಪನ್ಯಾಸಕ ಬಿ. ಪಾಲಾಕ್ಷಿ ತಿಳಿಸಿದರು.ವೀರಶೈವ ಲಿಂಗಾಯತ ನೌಕರರ ಪತ್ತಿನ ಸಹಕಾರ ಸಂಘದಿಂದ  ಕುವೆಂಪು ಕನ್ನಡ ಭವನದಲ್ಲಿ 2023-24 ನೇ ಸಾಲಿನ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚಿನ ಅಂಕಗಳಿಸಿದ ಷೇರುದಾರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.ವಿದ್ಯಾರ್ಥಿಗಳು ಈಗ ಬ್ರಹ್ಮಚರ್ಯ ಸ್ಥಾನ ದಲ್ಲಿದ್ದಾರೆ. ಅವರು ಶಿಸ್ತು, ಬದ್ಧತೆ, ಗುರಿ ಅತೀ ಮುಖ್ಯ. ಅದರ ಆಧಾರದಲ್ಲಿ ಜೀವನದ ಗುರಿ ಮುಟ್ಟಬೇಕು. ಉನ್ನತ ಸಾಧನೆ ಮಾಡಿದವರು ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.ಸಂಘದ ಅಧ್ಯಕ್ಷ ಲೋಕಣ್ಣ ಮಾಗೋಡ್ರ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಪ್ರತಿಭಾ ಪುರಸ್ಕಾರ ನೆರವೇರಿಸಲಿದ್ದಾರೆ. ಕ.ರಾ.ಸ.ನೌ ಸಂಘದ ಕಾರ್ಯಾಧ್ಯಕ್ಷ ಬಿ.ಪಾಲಾಕ್ಷಿ ಪ್ರಾಸ್ತಾವಿಕ ನುಡಿಗಳಾಡಿದರು. ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕಿ ಡಾ.ಬಿ.ಜಿ.ಸಿದ್ದಲಿಂಗಮ್ಮ ಉಪನ್ಯಾಸ ನೀಡಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಿ.ವಾಮದೇವಪ್ಪ, ವೀರೇಶ್ ಎಸ್. ಒಡೇನಪುರ, ಕೆ.ಶಿವಶಂಕರ್, ರೇವಣಸಿದ್ದಪ್ಪ ಅಂಗಡಿ, ಸಿದ್ದೇಶ್ , ಡಿಡಿಪಿಐ ಜಿ. ಕೊಟ್ರೇಶ್, ರೇವಣಸಿದ್ದನಗೌಡ, ಶಿವಕುಮಾರ್, ಚಂದ್ರಪ್ಪ ಇತರರು ಇದ್ದರು.