ಯೋಗೋತ್ಸವ_2024 ಪೂರ್ವಭಾವಿ ತರಬೇತಿ

ಸಂಜೆವಾಣಿ ವಾರ್ತೆ
ದಾವಣಗೆರೆ. ಜೂ.೧೭; ಜಿಲ್ಲಾ ಪಂಚಾಯತಿ , ಜಿಲ್ಲಾ, ಆಯುಷ್ ಇಲಾಖೆ ಚಿತ್ರದುರ್ಗ ಹಾಗೂ ಭಾರತೀಯ ಯೋಗ ಶಿಕ್ಷಣ ಸಂಸ್ಥೆ (ರಿ.) ಚಿತ್ರದುರ್ಗ  ಸಂಯುಕ್ತವಾಗಿ ಹತ್ತನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಚಿತ್ರದುರ್ಗ ನಗರದ ಸರ್ಕಾರಿ ಕಲಾ ಕಾಲೇಜು ಮುಂಭಾಗದ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಾರಿ ಪದವಿಪೂರ್ವ ಬಾಲಕೀಯರ ವಸತಿ ನಿಲಯದಲ್ಲಿ  ‘ಯೋಗೋತ್ಸವ_2024 ಮಹಿಳಾ ಸಭಲೀಕರಣಕ್ಕಾಗಿ ಯೋಗ ಘೋಷಣೆಯ ಅಡಿಯಲ್ಲಿ ಪೂರ್ವಭಾವಿ ಯೋಗ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಭಾರತೀಯ ಯೋಗ ಶಿಕ್ಷಣ ಸಂಸ್ಥೆಯ ಯೋಗ ಶಿಕ್ಷಕಿ ಶ್ರೀಮತಿ ಮಂಜುಳಾ ,ಪತಂಜಲಿ ಸಂಸ್ಥೆಯ ಶೋಭಾ 10ನೇ ಅಂತರಾಷ್ಟ್ರೀಯ ಯೋಗ ದಿನದಂದು ಅಭ್ಯಾಸಮಾಡಬೇಕಾದ ಶಿಷ್ಟಾಚಾರದ ಯೋಗಾಸನಗಳು, ಪ್ರಾಣಾಯಾಮ ಹಾಗೂ ಧ್ಯಾನದ ತರಬೇತಿ ನೀಡಿದರು. ನೂರಕ್ಕೂ ಅಧಿಕ ವಿಧ್ಯಾರ್ಥಿನಿಯರು ಯೋಗಭ್ಯಾಸದಲ್ಲಿ ಪಾಲ್ಗೊಂಡಿದ್ದರು ಜಿಲ್ಲಾ ಆಯುಷ್ ವೈದ್ಯಾಧಿಕಾರಿಗಳಾದ ಡಾ. ನಾಗರಾಜ್ ನಾಯಕ್ ಹಾಗೂ ಡಾ.ಉದಯಭಾಸ್ಕರ್ ಮಾತನಾಡಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಮಹತ್ವದ ಜೊತೆಗೆ ಮಹಿಳೆಯರು ಆರೋಗ್ಯ ಕಾಪಾಡಿಕೊಳ್ಳಲು ಪ್ರತಿದಿನ ಮಾಡಬೇಕಾದ ಯೋಗಭ್ಯಾಸ ಹಾಗೂ ಅನುಸರಿಸಬೇಕಾದ ಆಹಾರ ಪದ್ಧತಿಯ ಬಗ್ಗೆ ಮಾಹಿತಿ ನೀಡಿದರು. ವಸತಿನಿಲಯದ ನಿಲಯಪಾಲಕಿ ಶ್ರೀಮತಿ ಮಂಜುಳಾ ಅಧ್ಯಕ್ಷತೆ ವಹಿಸಿದ್ದರು. ಭಾರತೀಯ ಯೋಗ ಶಿಕ್ಷಣ ಸಂಸ್ಥೆ ಅಧ್ಯಕ್ಷ ರವಿ ಕೆ.ಅಂಬೇಕರ್ ಕಾರ್ಯಕ್ರಮ ನಿರೂಪಿಸಿದರು