ದಾವಣಗೆರೆ ಜಿಲ್ಲಾ ಬಿಜೆಪಿಯಲ್ಲಿ ಆರದ ಒಳ ಜಗಳ; ಮಾಜಿ ಸಚಿವರು ಸಂಸದರ ವಾಕ್ಸಮರ

ದಾವಣಗೆರೆ. ಜೂ.೧೮; ಚುನಾವಣೆಯಲ್ಲಿ ಸೋಲು ಗೆಲುವು ಸಹಜ.
ನಾಲ್ಕು ಸಲ ಗೆದ್ದು ಒಂದು ಸಲ ಸೋತಿದಕ್ಕೆ ಆತಂಕ  ಪಡುವ. ಅಗತ್ಯವಿಲ್ಲ. ಒಂದಿಷ್ಟು ದಿನ  ಯಾವುದಾದ್ರು ಆಲದ‌ಮರ‌ಕೆಳಗೆ ಶಾಂತವಾಗಿ‌ಕುಳಿತುಕೊಳ್ಳಿ ಎಂದು
ದಾವಣಗೆರೆ ಮಾಜಿ ಸಂಸದ ಜಿಎಂ ಸಿದ್ದೇಶ್ವರಗೆ ಅವರದ್ದೇ ಪಕ್ಷದ ‌ಮಾಜಿ ಸಚಿವ‌ ಎಸ್ ಎ ರವೀಂದ್ರನಾಥ ಸಲಹೆ ನೀಡಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ  ದಾವಣಗೆರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗೆ  ಸೋಲಾಗಿದೆ ಆಗೆಂದ ಮಾತ್ರಕ್ಕೆ ಕಾರ್ಯಕರ್ತರನ್ನು ದೂಷಿಸುವುದು ಸರಿಯಲ್ಲ. ನಾನು‌ ಕೂಡಾ ಐದು ಸಲ ಗೆದ್ದು ಐದು ಸಲ ಸೋತಿದ್ದೇನೆ.
ಹಾಗಂತ   ಸಿಕ್ಕ ಸಿಕ್ಕವರ ಮೇಲೆ ಆರೋಪ ಮಾಡುತ್ತಾ ಸುತ್ತಾಡಿಲ್ಲ.
ಈ ಹಿಂದೆ ಚುನಾವಣಾ ಪ್ರಚಾರಕ್ಕೆ ಹೋದಾಗ ಕಲ್ಲು ಕಣವಿ ತೆಗೆದುಕೊಂಡು ಜನ ಹೊಡೆಯಲು ಬರುತ್ತಿದ್ದರು. ಈಗ ಆ ವಾತಾವಣ ಇಲ್ಲಾ. ಸೋತಿದ್ದೀರಿ.‌ಮತ್ತೆ ಕಾರ್ಯಕರ್ತರ ಬಳಿ ಹೋಗಿ ನಿಮ್ಮನ್ನಲ್ಲದಿದ್ದರೂ ನಿಮ್ಮ ಮಕ್ಕಳನ್ನಾದ್ರು ಜನ ಗೆಲ್ಲಿಸುತ್ತಾರೆ ಎಂದು ಟಾಂಗ್ ನೀಡಿದ್ದಾರೆ ಹಾಗೂ ಮಾಜಿ ಸಂಸದರಿಗೆ
ಸ್ವಲ್ಪ ದಿನ ಶಾಂತವಾಗಿ ಇರಿ ಎಂದು ಸಲಹೆ ನೀಡಿದ್ದಾರೆ.ರಾಷ್ಟ್ರನಾಯಕ  ಎಸ್ ನಿಜಲಿಂಗಪ್ಪ ಅವರನ್ನು ಹೊಸದುರ್ಗದಲ್ಲಿ ಸಾಮಾನ್ಯ  ಸೊಸೈಟಿ ಅಧ್ಯಕ್ಷ ಸೋಲಿಸಿದ್ದರು. ಹರಿಹರ ಹಿರಿಯ  ರಾಜಕಾರಣಿ  ಸಿದ್ದವೀರಪ್ಪ ಅವರನ್ನ ಅದೇ ತಾನೇ ವಕೀಲಿ ವೃತ್ತಿಗೆ ಕಾಲಿಟ್ಟ ಯುವಕ ಸೋಲಿಸಿದ್ದ.ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಯಲ್ಲಿ ಸೋಲು ಗೆಲುವು  ಮಾಮೂಲು ಎಂದರು.
ನಮ್ಮ ಮನೆಗೆ  ಕಾಂಗ್ರೆಸ್ ಅಭ್ಯರ್ಥಿ  ಡಾ.‌ಪ್ರಭಾ ‌ಮಲ್ಲಿಕಾರ್ಜುನ ಬಂದಿದ್ದು ನಿಜ‌. ನಮ್ಮ ಗ್ರಾಮದಲ್ಲಿ ಪ್ರಚಾರಕ್ಕೆ ಬಂದಿದ್ದರು. ನಮ್ಮ ಮನೆಗೂ ಬಂದು ಮತಯಾಚನೆ ಮಾಡಿದ್ದಾರೆ.  ಹಾಗಂತಾ ನಾವು ಕಾಂಗ್ರೆಸ್ ಜೊತೆ ಒಳ ಒಪ್ಪಂದ ಮಾಡಿಕೊಂಡಿದ್ದೇವೆ ಅಂದ್ರೆ ಎನು ಅರ್ಥ ಎಂದು ಜಿಎಂ ಸಿದ್ದೇಶ್ವರ ಗೆ ಮಾಜಿ ಸಚಿವ  ಎಸ್ ಎ ರವೀಂದ್ರನಾಥ ಪ್ರಶ್ನೆ ಮಾಡಿದ್ದಾರೆ.