ಹೊಗೆಯ ನಿಯಂತ್ರಣದಿಂದ ಪರಿಸರ ಮತ್ತು ಜೀವರಾಶಿಗಳ ಸಂರಕ್ಷಣೆ ಡಾ ಅಬ್ದುಲ್ ಖಾದರ್

ಸಂಜೆವಾಣಿ ವಾರ್ತೆ
ಹರಿಹರದ  ಜೂ 17; ನಗರದ  ಎಂ ಕೆ ಇ ಟಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹವಮಾನ  ಬದಲಾವಣೆ ಮತ್ತು ಮಾನವ ಆರೋಗ್ಯ ಕಾರ್ಯಕ್ರಮದ ಭಾಷಣ ಸ್ಪರ್ಧೆಯನ್ನು  ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿತ್ತು ಈ  ಕಾರ್ಯಕ್ರಮದ ಉದ್ಘಾಟನೆಯನ್ನು ತಾಲ್ಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ  ಇಲಾಖೆಯ ಆಡಳಿತ ವೈದ್ಯಧಿಕಾರಿ   ಅಬ್ದುಲ್ ಖಾದರ್  ನೆರವೇರಿಸಿ ಮಾತನಾಡಿ ಹವಾಮಾನ ಬದಲಾವಣೆಯಿಂದ ಒಬ್ಬ ವ್ಯಕ್ತಿ ಅಥವಾ ಮಗು ಆರೋಗ್ಯವಾಗಿರುವ ಚಿಹ್ನೆಗಳು. ಆರೋಗ್ಯಕರ ಜೀವನ ನಡೆಸಲು ಯಾವ ವಾತಾವರಣ ಬೇಕು.? ನಮ್ಮ ಮನೆಯವರೆಗೆ ಶುದ್ಧವಾದ ಗಾಳಿಯ ಅವಶ್ಯಕತೆ ಇದೆ. ತರಕಾರಿ ಮತ್ತು ಹಣ್ಣುಗಳನ್ನು ತಿನ್ನುವುದು ಉತ್ತಮ ಆರೋಗ್ಯಕ್ಕೆ ದೈಹಿಕ ಚಟುವಟಿಕೆಯ ಪ್ರಾಮುಖ್ಯತೆಯನ್ನು ತಿಳಿದಿರಬೇಕು. ಜೈವಿಕ ಇಂಧನದಿಂದ ಅಡಿಗೆ ಮಾಡುವುದು ಕಸವನ್ನು ಸುಡುವುದು ಮರ ಅಥವಾ ಹುಲ್ಲನ್ನು ಸುಡುವುದು ವಾಹನ ಮಾಲಿನ್ಯ ಕಾರ್ಖಾನೆಗಳಿಂದ ಹೊಗೆ, ಇಟ್ಟಿಗೆ ಗೂಡುಗಳಿಂದ ಹೊಗೆ, ಹೊರ ಹಾಕಲ್ಪಟ್ಟಾಗ ಮಾನವನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದರು ಮನುಷ್ಯನೇ ತಮ್ಮ  ಆರೋಗ್ಯವನ್ನು ತಾವೇ ಕಳೆದುಕೊಳ್ಳುತ್ತಾನೆ. ಆದುದರಿಂದ ಮನೆಗೊಂದು ಮರವನ್ನು ಬೆಳೆಸಿ. ಸುಂದರ ಪರಿಸರದಲ್ಲಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ. ಅವಶ್ಯಕತೆ ಇದ್ದರೆ ಮಾತ್ರ ವಾಹನವನ್ನು ಬಳಸಿ.ವಾಯು ಮಾಲಿನ್ಯ ತಡೆಗಟ್ಟಿ  ಎಂದು ಹೇಳಿದರು. ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ಪ್ರಶಾಂತ್  ಮಾತನಾಡಿ ಮಕ್ಕಳಿಗೆ ಉಸಿರಾಟದ ತೊಂದರೆ ಇದ್ದರೆ ವಾಯು ಮಾಲಿನ್ಯಕ್ಕೆ ಅಥವಾ  ಹೊಗೆಯಿಂದ ಸಂರಕ್ಷಣೆ ಮಾಡಿಕೊಳ್ಳಿ. ಅಥವಾ ಮಾಸ್ಕನ್ನು ಧರಿಸಿ. ಜನರು ವಾಸಿಸುವ ಸುತ್ತಮುತ್ತಲಿನ ಪರಿಸರವನ್ನು ಘನತ್ಯಾಜ್ಯ ವಸ್ತುಗಳ ರಹಿತ ವಾತಾವರಣವನ್ನು ಸೃಷ್ಟಿ ಮಾಡಿಕೊಳ್ಳಬೇಕು. ಪ್ಲಾಸ್ಟಿಕ್ ರಹಿತ ವಸ್ತುಗಳನ್ನು ಬಳಸಬೇಕು. ಕಾಡನ್ನು ಬೆಳೆಸುವುದರಿಂದ. ಆರೋಗ್ಯವಂತ  ನಾಡನ್ನು ಕಟ್ಟಬಹುದು ಎಂದು ಹೇಳಿದರು.ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ  ಶಾಲೆಯ  ಪ್ರಾಂಶುಪಾಲರಾದ  ಮಂಜುನಾಥ್ ಕುಲಕರ್ಣಿ ಮಾತನಾಡಿ ಹವಮಾನ ಬದಲಾವಣೆ ಮತ್ತು ಮಾನವನ ಆರೋಗ್ಯ ಕುರಿತು ಮಾತನಾಡಿದ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು.ಈ  ಭೂಮಿಯ ಪರಿಸರವನ್ನು ಹಾಳು ಮಾಡುವವರು. ಮಾನವರೇ ಹೊರೆತು. ಬೇರೆ ಯಾರು ಅಲ್ಲ. ಆದುದರಿಂದ ಮುಂದಿನ ಪೀಳಿಗೆಗಾಗಿ ಒಬ್ಬೊಬ್ಬ ವಿದ್ಯಾರ್ಥಿಗಳು ಇಂದೇ ಒಂದು ಸಸಿಯನ್ನು ನೆಡಿ. ಪರಿಸರ ಕಾಪಾಡಿಕೊಳ್ಳಿ ಎಂದು ತಿಳಿಸಿದರು   ಕಾರ್ಯಕ್ರಮದಲ್ಲಿ ಹವಮಾನ ಬದಲಾವಣೆ ಮತ್ತು ಮಾನವನ ಆರೋಗ್ಯ ಕುರಿತು ಚರ್ಚಾಸ್ಪರ್ಧೆಯಲ್ಲಿ ಭಾಗವಹಿಸಿ ಮಾತನಾಡಿದವರಲ್ಲಿ ಮೂರು ವಿದ್ಯಾರ್ಥಿಗಳು ವಿಜೇತರಾದರು. ಮೊದಲನೇ ವಿಜೇತರು ಪ್ರಾರ್ಥನಾ ಆರ್ ಡಿ. ಎರಡನೇ ವಿಜೇತರು ಶ್ರೀವಿದ್ಯಾ. ಮೂರನೇಯ ವಿಜೇತರರು  ಪ್ರಜ್ಞಾ.  ಪಡೆದುಕೊಂಡರು.ಈ ಸಂದರ್ಭದಲ್ಲಿ ತಾಲೂಕು ಹಿರಿಯ  ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಉಮ್ಮಣ್ಣ. ತಾಲ್ಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ನಾಗರಾಜ್. ಜಿಲ್ಲಾ ತಂಬಾಕು ಸಲಹೆಗಾರರಾದ ಸತೀಶ್. ಶಿಕ್ಷಕರಾದ ಜಗನ್ನಾಥ್ ರಾವ್ ನಾಗರಾಜ್. ಈ ಕಾರ್ಯಕ್ರಮದ ತೀರ್ಪುಗಾರರಾದ. ಡಾ ಪ್ರಶಾಂತ್ ಕುಮಾರ್. ವಿಜ್ಞಾನ ಶಿಕ್ಷಕರಾದ ಸುಮತ ಜಿಪಿ ಸೇರಿದಂತೆ  ಶಾಲಾ ವಿದ್ಯಾರ್ಥಿಗಳು  ಉಪಸ್ಥಿತರಿದ್ದರು.