ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಶ್ವ ರಕ್ತದಾನಿಗಳ ದಿನ ಆಚರಣೆ
ಸಂಜೆವಾಣಿ ವಾರ್ತೆ
ಹರಿಹರ ಜೂ 17; ವಿಶ್ವ ರಕ್ತದಾನಿಗಳ ದಿನ ವನ್ನು ಪ್ರಾಥಮಿಕ ಆರೋಗ್ಯ ಕೇಂದ್ರ ದಾವಣಗೆರೆ ತಾಲೂಕು  ಕಕ್ಕರಗೊಳ್ಳ ಗ್ರಾಮದಲ್ಲಿ  ಆಚರಣೆ ಮಾಡಲಾಯಿತು ಈ ಕುರಿತು  ಹಿರಿಯ ಆಡಳಿತ ವೈದ್ಯಾಧಿಕಾರಿ  ವೆಂಕಟೇಶ್ ಎಲ್ ಡಿ ಮಾತನಾಡಿ ಈ ವರ್ಷದ . ಘೋಷಣೆ ಮಾಡಿರುವ  ಧ್ಯೇಯ ವಾಕ್ಯ ವನ್ನು “ಧನ್ಯವಾದ ರಕ್ತದಾನಿಗಳೆ ನಿಮ್ಮ ಜೀವದಾನದ ಕೊಡುಗೆ ಅತ್ಯಅಮೂಲ್ಯವಾದದು, ರಕ್ತದಾನ ಮಾಡಿ, ಜೀವ ಉಳಿಸಿ.ಯಾರು ರಕ್ತದಾನ ಮಾಡಬಹುದು ಎಂಬುದಾಗಿ ವೈದ್ಯರು ಈ ಕೆಳಗಿನಂತೆ ತಿಳಿಸಿಕೊಟ್ಟರು.18ರಿಂದ 65 ವರ್ಷದೊಳಗಿನ ಎಲ್ಲಾ ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡಬಹುದು.ಕನಿಷ್ಠ 45 ಕೆಜಿ ದೇಹದ ತೂಕ ಇರುವ ವ್ಯಕ್ತಿ.ರಕ್ತದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಕನಿಷ್ಠ 12.5  ಡಿ  ಎಲ್ ಇರುವ ವ್ಯಕ್ತಿ .ವರ್ಷಕ್ಕೆ ಪುರುಷರು 4 ಬಾರಿ ಮಹಿಳೆಯರು 3 ಬಾರಿ ರಕ್ತದಾನ ಮಾಡಬಹುದು.ದಾನಿಯು ನೀಡುವ ಒಂದು ಯೂನಿಟ್ ರಕ್ತ  4 ಜೀವಗಳನ್ನು ಉಳಿಸುತ್ತದೆ. ವಿಶ್ವ ರಕ್ತದಾನಿಗಳ ದಿನದಂದು ರಕ್ತದಾನಿಗಳನ್ನು ಗೌರವಿಸುವುದು. ಸನ್ಮಾನಿಸುವುದು ಪ್ರೋತ್ಸಾಹಿಸುವುದು ನಮ್ಮ ಆದ್ಯತೆ ಎಂದು  ತಿಳಿಸಿದರು.ಈ ಕಾರ್ಯಕ್ರಮದಲ್ಲಿ  ರಾಘವೇಂದ್ರ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರು ಹಾಗೂ ವಿದ್ಯಾರ್ಥಿಗಳು ಆರೋಗ್ಯ ಸಿಬ್ಬಂದಿಯವರು ಗ್ರಾಮಸ್ಥರು  ಸಭೆಯಲ್ಲಿ ಭಾಗವಹಿಸಿದ್ದರು