ಅನಾಧರಕ್ಕೆ ಒಳಗಾದ ವಾಡಿ ಪಟ್ಟಣ:ಮರೀಚಿಕೆಯಾದ ಅಭಿವೃದ್ಧಿ ಕಾರ್ಯ
ರವಿ ರಾಠೋಡ್
ವಾಡಿ,ಜೂ.17-ವಾಡಿ ಪಟ್ಟಣ, ಇದು ವಿಶ್ವದಲ್ಲೆ ಚಿರ ಪರಿಚಯವಿರುವ ಪಟ್ಟಣ. ಏಕೆಂದರೆ ಇಲ್ಲಿ ಏಷಿಯಾದ ದೊಡ್ಡ ಸಿಮೇಂಟ ಕಾರ್ಖಾನೆ ಇದೆ. ಇದರಿಂದ ವಾಡಿ ಎ.ಸಿ.ಸಿ ಸಿಮೇಂಟ್ ಎಂದು ಖ್ಯಾತಿ ಪಡೆದಿದೆ. ಅಲ್ಲದೆ ಇದು ವಾಡಿ ಜಂಕ್ಷನ್ ಕೂಡ ಹೌದು. ಇಲ್ಲಿ ನಿತ್ಯ ಸಾವಿರಾರು ಪ್ರಯಾಣಿಕರು ಇಲಿಂದೆ ಬೆರೆ ರಾಜಯಕ್ಕೆ ಬರುತಾರೆ ಹೋಗುತಾರೆ ಆದರೆ, ವಾಡಿ ಪಟ್ಟಣದ ಅವಸ್ಥೆ ನೋಡಿ, ಇಲಿ ಅಧಿಕಾರಿಗಳು ಇದಾರೋ ಇಲ್ಲವೋ ಗೊತ್ತಾಗುತ್ತಿಲ್ಲ. ಪಟ್ಟಣದ ಮುಖ್ಯ ರಸ್ತೆಯಲಿ ಕಸದ ರಾಸಿ ಹಾಗೂ ಹಂದಿಗಳ ತಾಣವಾದಂತಾಗಿದೆ.
ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಚೌಕ್. ಇದು ಪಟಣದ ಹೃದಯ ಭಾಗದಲ್ಲಿದೆ. ವಾಡಿ ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡ ಬರುತ್ತವೆ. ಜನ ಸಂಖ್ಯೆ ಸುಮಾರು ನಾಲ್ವತ್ತು ಸಾವಿರಕ್ಕಿಂತ್ತು ಹೇಚ್ಚಿದೆ. ಎ.ಸಿ.ಸಿ. ಸಿಮೆಂಟ್ ಕಾರ್ಖಾನೆ, ರೈಲ್ವೆ ಜಂಕ್ಷನ್ ಇದ್ದರೂ ಈ ಪಟ್ಟಣದಲ್ಲಿ ಹೇಳಿಕೊಳ್ಳುವಂತಹ ಅಭಿವೃದ್ಧಿ ಕೆಲಸಗಳು ಆಗಿಲ್ಲ. ಪಟ್ಟಣದಲ್ಲಿ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಅಧಿಕಾರಿಗಳು ಮುಂದಾಗಿಲ್ಲ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಇಲ್ಲಿಂದ ದಿನಾಲು ನುರಾರು ರೈಲುಗಳು ಮುಂಬೈ, ಚೆನ್ನೈ, ಹೈದ್ರಾಬಾದ ಸೇರಿದಂತೆ ದೇಶದ ಪ್ರಮುಖ ನಗರಗಳಿಗೆ ಸಂಚರಿಸುತ್ತವೆ. ಇಲ್ಲಿನ ಅವ್ಯವಸ್ಥೆಯ ಆಗರ ಕಂಡು ಇಲ್ಲಿನ ಜನ ಅದ್ಹೇಗೆ ಬದುಕುತ್ತಾರೆ ಎಂದು ಜನ ಮಾತಾಡಿಕೊಳ್ಳುವಂತಾಗಿದೆ.
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಈ ಪಟ್ಟಣಕ್ಕೆ ಎರಡು ಬಾರಿ ಭೇಟಿ ನೀಡಿದ್ದಾರೆ. ಹಾಗೆ ನೋಡಿದರೆ ಪಟ್ಟಣ ಒಂದು ಪ್ರಮುಖ ಯಾತ್ರಾ ಸ್ಥಳದಂತೆ ಕಂಗೊಳಿಸಬೇಕಿತ್ತು. ಆದರೆ ಅಧಿಕಾರಿಗಳು ಈ ಬಗ್ಗೆ ಗಮನವೇ ಹರಿಸದೆ ಎಲ್ಲಾ ಮರೆತಂತೆ ಕಾಣುತ್ತಿದೆ.
ಪಟ್ಟಣದ ಅನೇಕ ವಾರ್ಡಗಳಲ್ಲಿ ಚರಂಡಿಗಳು ತುಂಬು ತಳುಕುತ್ತಿವೆ. ಇದರಿಂದ ಸೊಳ್ಳೆಗಳ ಕಾಟ ವಿಪರೀತವಾಗಿ ಜನ ಮಲೇರಿಯಾ, ಡೆಂಗ್ಯೂ ಸೇರಿದಂತೆ ಮುಂತಾದ ರೋಗಗಳಿಂದ ಬಳಲುವಂತಾಗಿದೆ. ಇಷ್ಟಾದರೂ ಅಧಿಕಾರಿಗಳು ಪಟ್ಟಣದ ಸ್ವಚ್ಛತೆ ಕಡೆಗೆ ಗಮನ ಹರಿಸುತ್ತಿಲ್ಲ.
ಈಗಲಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಪಟ್ಟಣದ ಸ್ವಚ್ಛತೆಗೆ ಆದ್ಯತೆ ನೀಡಬೇಕಿದೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಈ ಪಟ್ಟಣಕ್ಕೆ ಎರಡು ಬಾರಿ ಭೇಟಿ ನೀಡಿದ್ದಾರೆ. ಹಾಗೆ ನೋಡಿದರೆ ಪಟ್ಟಣ ಒಂದು ಪ್ರಮುಖ ಯಾತ್ರಾ ಸ್ಥಳದಂತೆ ಕಂಗೊಳಿಸಬೇಕಿತ್ತು. ಆದರೆ ಅಧಿಕಾರಿಗಳು ಈ ಬಗ್ಗೆ ಗಮನವೇ ಹರಿಸದೆ ಎಲ್ಲಾ ಮರೆತಂತೆ ಕಾಣುತ್ತಿದೆ.