ಜ್ಯೋತಿ ರಥಯಾತ್ರೆಗೆ ಅದ್ದೂರಿ ಸ್ವಾಗತ
ಧಾರವಾಡ,ಜೂ17: ಕರ್ನಾಟಕ ರಾಜ್ಯಕ್ಕೆ ಕರ್ನಾಟಕ ನಾಮಕರಣಗೊಂಡು 50 ವರ್ಷ ತುಂಬಿದ ನಿಮಿತ್ತ ರಾಜ್ಯ ಸರಕಾರದ ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಹೊರಡಿಸಿರುವ ಕರ್ನಾಟಕ ಸಂಭ್ರಮ-50 ರ ಜ್ಯೋತಿ ರಥ ಯಾತ್ರೆಗೆ ಜಿಲ್ಲಾಡಳಿತ ಹಾಗೂ ಕನ್ನಡ ಸಂಘ, ಸಂಸ್ಥೆ, ಸಾಹಿತ್ಯ ಪರಿಷತ್ತು ವತಿಯಿಂದ ಭವ್ಯವಾದ ಅದ್ದೂರಿ ಸ್ವಾಗತ ಮಾಡಲಾಯಿತು.
ಜಿಲ್ಲಾಡಳಿತದ ಪರವಾಗಿ ಉಪವಿಭಾಗಾಧಿಕಾರಿ ಶಾಲಂ ಹುಸೇನ್ ಹಾಗೂ ಧಾರವಾಡ ತಹಶಿಲ್ದಾರ ಡಾ. ಡಿ.ಎಚ್.ಹೂಗಾರ ಅವರು ಕನ್ನಡ ಜ್ಯೋತಿ ರಥಕ್ಕೆ ಪುμÁ್ಪರ್ಪಣೆ ಮಾಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೆರಿ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಬಿ.ಎಸ್.ಮುಗನೂರಮಠ, ಮುಖ್ಯ ಯೋಜನಾ ನಿರ್ದೇಶಕ ದೀಪಕ ಮಡಿವಾಳರ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸಂಗಪ್ಪ ಗಾಬಿ, ಹಿರಿಯ ಸಾಹಿತಿ ಪೆÇ್ರ. ವೀರಣ್ಣ ರಾಜೂರ, ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಹಿರಿಯ ನ್ಯಾಯವಾದಿ ಉದಯ ದೇಸಾಯಿ, ಸಾಹಿತ್ಯ ಪರಿಷತ್ತು ಜಿಲ್ಲಾ ಗೌರವ ಕಾರ್ಯದರ್ಶಿ ಪೆÇ್ರ. ಕೆ.ಎಸ್. ಕೌಜಲಗಿ, ತಾಲೂಕಾ ಅಧ್ಯಕ್ಷ ಮಹಾಂತೇಶ ನರೆಗಲ್ಲ, ಎಸ್.ಎಸ್.ದೊಡಮನಿ, ಶರಣಪ್ಪ ಕೊಟಗಿ, ಗಂಗಾಧರ ಗಡಾದ, ವಿಶ್ವೇಶ್ವರಿ ಹಿರೇಮಠ, ಸುರೇಶ ಹಾಲಭಾವಿ, ದೀಪಕ ಆಲೂರ, ಎಫ್.ಬಿ.ಕಣವಿ ಸೇರಿದಂತೆ ಅನೇಕ ಕನ್ನಡ ಅಭಿಮಾನಿಗಳು, ಕನ್ನಡ ಸಂಘಟನೆಗಳ ಸದಸ್ಯರು ಭಾಗವಹಿಸಿದ್ದರು.
ರಥ ಜ್ಯೋತಿ ಯಾತ್ರೆಗೆ ಸಾಂಸ್ಕೃತಿಕ ಮೆರಗು: ಕರ್ನಾಟಕ ಸಂಭ್ರಮ-50 ಜ್ಯೋತಿ ರಥ ಯಾತ್ರಗೆ ಡೊಳ್ಳು ಕುಣಿತ, ಕರಡಿ ಮಜಲು, ಕನ್ನಡ ಹಾಡುಗಳಿಗೆ ನೃತ್ಯ, ಕುಣಿತಗಳು ಸಾಂಸ್ಕೃತಿಕ ಮೆರಗು ತಂದವು.
ನೃತ್ಯ ಕಲಾವಿಧರ ಒಕ್ಕೂಟದಿಂದ ಪ್ರಸಿದ್ದ ಕನ್ನಡದ ಹಾಡುಗಳಿಗೆ ಕಲಾವಿದರು ಹೆಜ್ಜೆ ಹಾಕಿದರು. ಭಾಗ್ಯಮ್ಮ ಕಾಳೆನ್ನವರ, ಪ್ರಕಾಶ ಮಲ್ಲಿಗವಾಡ ನೇತೃತ್ವದ ತಂಡಗಳು ರಥಯಾತ್ರೆಯ ಮುಂಭಾಗದಲ್ಲಿ ಸಂಗೀತದೊಂದಿಗೆ ನೃತ್ಯ ಮಾಡಿ, ಸಾರ್ವಜನಿಕರ ಗಮನ ಸೆಳೆದರು. ಜ್ಯೋತಿ ರಥ ಯಾತ್ರೆಯು ಧಾರವಾಡ ನಗರದ ಪ್ರಮುಖ ವೃತ್ತಗಳು, ನಗರ,ಬೀದಿಗಳಲ್ಲಿ ಸಂಚರಿಸಿ, ನಂತರ ಅಳ್ನಾವರ ತಾಲೂಕು ಪ್ರವೇಶ ಮಾಡಿತು.