ಕ್ಯಾಂಪ್‍ಬೆಲ್ಸ್ ಶಾಲೆಯ ವಿದ್ಯಾರ್ಥಿಗಳು ವಿಭಾಗ ಮಟ್ಟಕ್ಕೆ ಆಯ್ಕೆ
ಕಲಬುರಗಿ: ಸೆ.25:ಉಪ ನೀರ್ದೆಶಕರ ಕಾರ್ಯಾಲಯ, ಕಲಬುರಗಿ ಶಾಲಾ ಶಿಕ್ಷಣ ಇಲಾಖೆ ರವರಿಂದ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಬಾಲಕ-ಬಾಲಕಿಯರಿಗಾಗಿ ನಗರದ ಚಂದ್ರಶೇಖರ ಪಾಟಿಲ್ ಕ್ರೀಡಾಂಗಣದಲ್ಲಿ ಆಯೋಜಿಸಿದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ನಗರದ ಕ್ಯಾಂಪ್‍ಬೆಲ್ಸ್ ಶಾಲೆಯ ಕ್ರೀಡಾಪಟುಗಳು ಭಾಗವಹಿಸಿ ಪ್ರಾಥಮಿಕ ಶಾಲೆಯ ಬಾಲಕಿಯರು ಥೋ ಬಾಲ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಹಾಗೂ ಪ್ರೌಢ ಶಾಲೆಯ ಬಾಲಕಿಯರು ಥೋ ಬಾಲ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ, ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಹಂತದಲ್ಲಿ ಪ್ರಥಮ ಮತ್ತು ದ್ವೀತಿಯ ಸ್ಥಾನ ಪಡೆದ ಬಾಲಕೀಯರು ವಿಭಾಗ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ ಯಾಗಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಜಿಲ್ಲಾ ದೈಹಿಕ ಶಿಕ್ಷಣಾಧಿಕಾಗಳಾದ ರಾಜಶೇಖರ ಗೋನಾಯಕ, ತಾಲೂಕ ಕ್ಷೇತ್ರ ಶಿಕ್ಷಣಾಧಿಕಾಗಳ ಕಾರ್ಯಾಲಯದ ದೈಹಿಕ ಶಿಕ್ಷಣ ಪರಿವಿಕ್ಷಕರಾದ ಬಸವರಾಜ ರಟ್ಕಲ, ದಶರಥ ಎಸ್, ಅಶೋಕ, ಚಾರ್ಲೀ, ಸಂತೋಷ ಕೋಬಾಳ, ಶಿವಪುತ್ರ ಹೂಗಾರ, ಶಾಲೆಯ ಆಡಳಿತ ಅಧಿಕಾರಿ ಇಮ್ಮಾನ್ಮೂಲ್ ಜಯವಂತ, ಮುಖ್ಯ ಗುರುಗಳಾದ ಸೂರ್ಯಕಾಂತ ಪವಾರ, ದೈಹಿಕ ಶಿಕ್ಷಕರಾದ ದತ್ತಾತ್ರೇಯ ಜೇವರ್ಗಿ, ಶೀಲಾದೇವಿ ತಂಡದ ವ್ಯವಸ್ಥಾಪಕರಾದ ಹಾಗೂ ದಿವ್ಯಾರಾಣಿ ರವರು ಶುಭ ಹಾರೈಸಿದ್ದಾರೆ.