ಸಿರಿಧಾನ್ಯಗಳ ಕ್ಷೇತ್ರೋತ್ಸವದಲ್ಲಿ “ಅನ್ನದಾತರ ಅನುಭವದ ನುಡಿ”
ಕಲಬುರಗಿ:ಸೆ.25:ಸಿರಿಧಾನ್ಯಗಳ ಕ್ಷೇತ್ರೋತ್ಸವವನ್ನು ಕೃಷಿ ವಿಜ್ಞಾನ ಕೇಂದ್ರ, ರದ್ದೇವಾಡ್ಗಿಯಲ್ಲಿ ರೈತ ಉತ್ಪಾದಕರ ಸಂಘ. ಜೆ.ಟಿ.ಎಮ್.ಎಫ್.ಪಿ.ಸಿ. ಜೇರಟಗಿ ಇವರ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಅತಿಥಿ ಗಣ್ಯರಿಂದ ಹಾಗೂ ರೈತರಿಂದ ಗಿಡಕ್ಕೆ ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ಪಿ. ವಾಸುದೇವ ನಾಯ್ಕ., ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು, ಕೃಷಿ ವಿಜ್ಞಾನ ಕೇಂದ್ರ, ರದ್ದೇವಾಡ್ಗಿ (ಕಲಬುರಗಿ-2) ರವರು ವಹಿಸಿದರು ಮತ್ತು ಈ ಕಾರ್ಯಕ್ರಮದ ಉದ್ಘಾಟಕರಾಗಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರಾದ, ಮಾನ್ಯ ಶ್ರೀ. ಸೋಮನಾಥರೆಡ್ಡಿ ಪೂರ್ಮಾ, ಮತ್ತು ಮುಖ್ಯ ಅಥಿತಿಗಳಾಗಿ ಶ್ರೀ ಸುಭಾಷ ಪಾಟೀಲ್ ರವರು ಭಾಗವಹಿಸಿದ್ದರು.
ಕೇಂದ್ರದ ಮುಖ್ಯಸ್ಥರಾದ ಡಾ.ಪಿ. ವಾಸುದೇವ ನಾಯ್ಕರವರು ಕಾರ್ಯಕ್ರಮದ ಪ್ರಾಸ್ತವಿಕ ನುಡಿಯಲ್ಲಿ ಸಿರಿಧಾನ್ಯಗಳ ಮಹತ್ವ ಮತ್ತು ಅದರ ಪ್ರಾಮುಖ್ಯತೆಯನ್ನುದ್ದೇಶಿಸಿ ಸಿರಿಧಾನ್ಯಗಳನ್ನು ನವ ರತ್ನಗಳಿದ್ದಂತೆ ವಿಶ್ಲೇಷಿಸಿದರು.
ಮುಂದುವರೆದು, ಕಾರ್ಯಕ್ರಮದ ವಿಶೇಷ ಅಂಗವಾಗಿ “ಅನ್ನದಾತರ ಅನುಭವದ ನುಡಿ” ಎಂಬ ಶಿರ್ಷಿಕೆಯಡಿಯಲ್ಲಿ ಮಾನ್ಯ ಶ್ರೀ. ಸೋಮನಾಥರೆಡ್ಡಿ ಪೂರ್ಮಾರವರ ಅನುಭವದ ಮಾತುಗಳಿಂದ ಪ್ರಾರಂಭಿಸಲಾಯಿತು. ದೇಶದಲ್ಲಿ ಕೃಷಿ ಸಂಸ್ಕೃತಿಯು ಶರೀರಕ್ಕಾಗಿ ಮತ್ತು ಖುಷಿ ಸಂಸ್ಕೃತಿಯು ಆತ್ಮಕ್ಕಾಗಿ ಎಂಬ ಸಿದ್ಧಾಂತದಿಂದಲ್ಲಿ ಕೃಷಿಕರು ಭೂಮಿತಾಯಿ ಮತ್ತು ಪ್ರಕೃತಿಗೆ ಸೇವೆ ಸಲ್ಲಿಸುವುದೇ ನಮ್ಮ ಕಾಯಕವಾಗಿರಬೇಕು ಆದೇ ಧರ್ಮದ ಮೇಲೆ ನಾವು ಸಾಮೂಹಿಕ ಕೃಷಿಯನ್ನು ಸಿರಿಧಾನ್ಯಗಳ ಮೂಲಕ ಪ್ರಾರಂಭಿಸಬೆಕೇಂಬ ಸಾಮಾಜಿಕ ಕಾಳಜಿಯನ್ನು ಪ್ರಸ್ತಾಪಿಸಿದರು. ಇನ್ನೋರ್ವ ಪ್ರಗತಿಪರ ರೈತ ಮತ್ತು ಸಿರಿಧಾನ್ಯ ಬೆಳೆಗಾರರಾದ ಶ್ರೀ ಸುಭಾಷ ಪಾಟೀಲ್ ತಮ್ಮ ಅನುಭದ ನುಡಿಯಲ್ಲಿ ವಿಜ್ಞಾನಿಗಳಿಂದ ಪಡೆದ ಸಮಯೋಚಿತ ಮಾಹಿತಿಯಿಂದ ಕನಿಷ್ಠ ವೆಚ್ಚ ಮತ್ತು ಸಮಯದಲ್ಲಿ ಸಿರಿಧಾನ್ಯಗಳನ್ನು ಬೆಳೆದು ಅಧಿಕ ಲಾಭ ಪಡೆದಿರುವುದಕ್ಕೆ ನಾನೇ ಸಾಕ್ಷಿಯಂದು ಹೇಳಿದರು.
ಶ್ರೀ ಶರಣಬಸಪ್ಪ ನಾಗಾವಿ, ಸಿ.ಇ.ಒ, ರೈತ ಉತ್ಪಾದಕರ ಸಂಘ. ಜೆ.ಟಿ.ಎಮ್.ಎಫ್.ಪಿ.ಸಿ. ಜೇರಟಗಿ ರವರು ಸಿರಿಧಾನ್ಯಗಳ ಮೌಲ್ಯವರ್ಧನೆಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಯುವಕರು ಮತ್ತು ಮಹಿಳೆಯರು ಸಿರಿಧಾನ್ಯಗಳತ್ತ ಹೆಚ್ಚಿನ ಒಲವು ತೋರಿಸಬೇಕೆಂದು ವಿನಂತಿಸಿದರು.
ತದನಂತರದಲ್ಲಿ, ಡಾ. ಮಲ್ಲಪ್ಪ, ವಿಜ್ಞಾನಿ (ಬೇಸಾಯಶಾಸ್ತ್ರ) ರವರು ಸಿರಿಧಾನ್ಯ ಬೆಳೆಗಳ ಸಮಗ್ರ ಬೇಸಾಯ ಕ್ರಮಗಳ ಕುರಿತು ತಿಳಿಸಿದರು. ಡಾ. ಚೇತನ್.ಟಿ. ವಿಜ್ಞಾನಿ (ತೋಟಗಾರಿಕೆ) ಸಿರಿಧಾನ್ಯಗಳ ಮಾರುಕಟ್ಟೆ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಿದರು. ತಾಂತ್ರಿಕ ಅಧಿಕಾರಿಯಾದ ಶ್ರೀ ಸಂಜೀವಕುಮಾರ ಪಾಟೀಲರವರು ಕೃಷಿಯಲ್ಲಿ ಮಾಹಿತಿ ಸಂವಹನ ಕುರಿತು ವಿವರಿಸಿದರು ಹಾಗೂ ಕಾರ್ಯಕ್ರಮದ ನಿರೂಪಣೆ ಮಾಡಿದರು. ಶ್ರೀ ಎಮ್.ಸಿ. ಪಾಟೀಲ, ತಾಂತ್ರಿಕ ಅಧಿಕಾರಿ (ಕ್ಷೇತ್ರ ನಿರ್ವಹಣೆ) ರವರು ವಂದನಾರ್ಪಣೆಯನ್ನು ಮಾಡಿದರು. ಕಾರ್ಯಕ್ರಮದ ನಂತರ ಅತಿಥಿಗಣ್ಯರು ಮತ್ತು ರೈತರು ಸಿರಿಧಾನ್ಯಗಳ ಪ್ರಾತ್ಯಕ್ಷಿಕೆ ತಾಕಿಗೆ ಬೇಟಿ ನೀಡಿ ಸಿರಿಧಾನ್ಯಗಳ ಕ್ಷೇತ್ರೋತ್ಸವ ಸದುಪಯೋಗ ಪಡೆದುಕೊಂಡರು.