ಭಾರಿ ಮಳೆ: 57 ಮನೆಗಳಿಗೆ ಭಾಗಶ: ಜಖಂ
ವಿಜಯಪುರ,ಸೆ.25: ಸೋಮವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಜಿಲ್ಲೆಯಲ್ಲಿ ಒಟ್ಟು 57 ಮನೆಗಳಿಗೆ ಭಾಗಶ: ಹಾನಿಯಾಗಿದ್ದು, ಅಂದಾಜು 2,000 ಎಕರೆಯಲ್ಲಿ ಬೆಳೆದು ನಿಂತ ಪೈರು ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರು ತಿಳಿಸಿದ್ದಾರೆ.
ಬೆಳೆ ಹಾನಿ ಸಮೀಕ್ಷೆ ಕೈಗೊಂಡಿದ್ದು, ಸಮೀಕ್ಷೆ ಪೂರ್ಣಗೊಂಡ ಬಳಿಕ ಬೆಳೆ ಹಾನಿ ಬಗ್ಗೆ ನಿಖರ ಅಂಕಿ ಸಂಖ್ಯೆ ಲಭ್ಯವಾಗಲಿದೆ. ಸಂಪೂರ್ಣ ಮನೆ ಹಾನಿ ಹಾಗೂ ಯಾವುದೇ ಜನ, ಜಾನುವಾರುಗಳ ಜೀವಹಾನಿಯಾಗಿಲ್ಲ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.