ಗುಂಡಿನ ದಾಳಿ: ರೌಡಿಶೀಟರ್ ಸಾವು
ವಿಜಯಪುರ,ಜೂ.17: ಜಿಲ್ಲೆಯ ಚಡಚಣ ಪಟ್ಟಣದ ನೀವರಗಿ ರಸ್ತೆ ಬಳಿ
ಗುಂಡಿನ ದಾಳಿಗೆ ಓರ್ವ ರೌಡಿಶೀಟರ್ ಮೃತಪಟ್ಟಿದ್ದಾನೆ.
ಇಲ್ಲಿನ ನಿವಾಸಿ ಅಶೋಕ ಮಲ್ಲಪ್ಪ ಗಂಟಗಲ್ಲಿ ಮೃತ ರೌಡಿಶೀಟರ್.
ಅಶೋಕ ಗಂಟಗಲ್ಲಿ ಮನೆಯಿಂದ ಚಡಚಣ ಪಟ್ಟಣಕ್ಕೆ ಆಗಮಿಸುತ್ತಿದ್ದ ವೇಳೆ ದುಷ್ಕರ್ಮಿಗಳು ಗುಂಡಿನ ದಾಳಿ ಮಾಡಿದ್ದು, ಅಶೋಕನ ಬೆನ್ನಿಗೆ ಮೂರಕ್ಕೂ ಹೆಚ್ಚು ಗುಂಡಿಗಳು ತಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಅಶೋಕ ಗಂಟಗಲ್ಲಿ ಇತ್ತೀಚೆಗೆ ಜೈಲಿನಿಂದ ಪೆರೋಲ್ ಮೇಲೆ ಹೊರ ಬಂದಿದ್ದನು. ಅಶೋಕ ಕೊಲೆ ಹಾಗೂ ಇತರೆ ಕೇಸ್ ಗಳಲ್ಲಿ ಅಪರಾಧಿಯಾಗಿದ್ದನು.
ಈತನ ಮೇಲಿನ ಹಳೆ ದ್ವೇಷದಿಂದ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳಕ್ಕೆ ಚಡಚಣ ಪೆÇಲೀಸರ ದೌಡಾಯಿಸಿದ್ದಾರೆ.
ಚಡಚಣ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.