‘ಬಕುಲ ಪುಷ್ಪ’ ಗ್ರಂಥ ಲೋಕಾರ್ಪಣೆ
ವಿಜಯಪುರ,ಜೂ.17: ಎನ್.ಆರ್. ಕುಲಕರ್ಣಿ ಅವರ “ಬಕುಲ ಪುಷ್ಪ” ಅಭಿನಂದನ ಗ್ರಂಥ ಬಿಡುಗಡೆ ಹಾಗೂ ಗ್ರಂಥ ತುಲಾಭಾರ ಸಮಾರಂಭವು ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಜರುಗಿತು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಶ್ರೀ ಗುರು ಬಮ್ಮಲಿಂಗೇಶ್ವರ ಬೃಹನ್ಮಠ, ನಾಗಣಸೂರ ಪೂಜ್ಯ ಶ್ರೀ ಷ.ಬ್ರ.ಶ್ರೀಕಂಠ ಶಿವಾಚಾರ್ಯ ಮಹಾಸ್ವಾಮೀಜಿಗಳು ಮಾತನಾಡುತ್ತ, ವಸುದೇವ ಕುಟುಂಬಕಂ ಎನ್ನುವ ನಾನ್ನುಡಿಯ ಸಾರ್ಥಕ ಭಾವಕ್ಕೆ ಹೋಲುವ ಎನ್.ಆರ್. ಕುಲಕರ್ಣಿ ಅವರು ಒಬ್ಬ ಸದ್ಗುಣ, ಸಹೃದಯಿ ವ್ಯಕ್ತಿಗಳಾಗಿದ್ದಾರೆ. ಅವರ “ಬಕುಲ ಪುಷ್ಪ” ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭಕ್ಕೆ ಬಂದಿರುವದು ನಮ್ಮ ಸುದೈವ. ಎನ್.ಆರ್. ಕುಲಕರ್ಣೀ ಅವರ ಕೈಯಲ್ಲಿ ನಾನು ವಿದ್ಯಾಭ್ಯಾಸ ಮಾಡಿದ್ದೇನೆ. ಎನ್.ಆರ್. ಕುಲಕರ್ಣಿ ಅವರು ಎಂತಹ ವ್ಯಕ್ತಿ ಎಂದರೆ ಎಲ್ಲರನ್ನು ಪ್ರೀತಿ ಭಾವದಿಂದ ಸ್ನೇಹ ಭಾವ ನೋಡುವ ವ್ಯಕ್ತಿ ಆಗಿದ್ದಾರೆ. ಈ ‘ಬಕುಲ ಪುಷ್ಪ’ಕ್ಕೆ ಅವರ ತಾಯಿಯ ಹೆಸರಾದ ಬಕುಲಾಬಾಯಿ ಹೆಸರು ಇಟ್ಟಿರುವದು ತಾಯಿಯಲ್ಲಿ ಇವರಿಗೆ ಪ್ರೀತಿ ವಾತ್ಸಾಲ್ಯದ ಭಾವನೆಯನ್ನು ತೋರಿಸುತ್ತದೆ. ದೇವರು ಎಲ್ಲಿಯೂ ಇಲ್ಲ ನಮ್ಮನ್ನು ಹೆತ್ತು-ಹೊತ್ತು ಬೆಳೆಸಿದ ತಾಯಿಯಲ್ಲಿ ದೇವರನ್ನು ಕಾಣಬೇಕು. ಆದ್ದರಿಂದ ತಂದೆ-ತಾಯಿಯನ್ನು ಗೌರವಿಸಿ, ಯಾರೂ ತಂದೆ ತಾಯಿಯನ್ನು ವೃದ್ದಾಶ್ರಮಕ್ಕೆ ಕಳುಹಿಸಬಾರದು. ಮನುಷ್ಯನ ಅಭಿಮಾನಿ ಹೇಗಿರಬೇಕೆಂದರೆ ಆಚಾರ-ವಿಚಾರ, ಉಚ್ಚಾರ ಸರಿ ಇದ್ದಾಗ ಮಾತ್ರ ನಾವು ಅಭಿನಂದನೆ ಸಲ್ಲಿಸುವ ವ್ಯಕ್ತಿಯ ಗುಣಲಕ್ಷಣಗಳನ್ನು ತೋರಿಸಿದಂತಾಗುತ್ತದೆ. ನೀವು ಚಿಕ್ಕವರಿದ್ದಾಗ ಹೇಗೆ ನಿಮ್ಮ ಆ ತಾಯಿ ಹೇಗೆ ಪ್ರೀತಿ, ವಾತ್ಸಲ್ಯದಿಂದ ನೋಡುತ್ತಿದ್ದರೂ ಅದೇ ರೀತಿ ನೀವು ಸಹ ನಿಮ್ಮ ತಂದೆ-ತಾಯಿಯನ್ನು ನೋಡಿಕೊಳ್ಳಬೇಕೆಂದು ತಮ್ಮ ಹಿತವಚನ ಹೇಳಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಸಚಿವÀ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ಒಂದು ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭಕ್ಕೆ ಇಷ್ಟೊಂದು ಜನ ಕೂಡಿರುವದು ಸಂತಸವನ್ನುಂಟು ಮಾಡುತ್ತದೆ. ಸಾಹಿತ್ಯಾಭಿರುಚಿ ಎಲ್ಲರಲ್ಲಿ ಇರಬೇಕು. ಸಾಹಿತ್ಯದ ಜ್ಞಾನದಿಂದ ನಾವು ನಮ್ಮ ಜೀವನದಲ್ಲಿ ಯಶಸ್ವಿ ಆಗಲು ಸಾಧ್ಯವಾಗುತ್ತದೆ. ಸಂಪತ್ತಿನಿಂದ ಜ್ಞಾನ ಸಂಪಾದಿಸಲು ಸಾಧ್ಯವಿಲ್ಲ. ನಮ್ಮಲ್ಲಿ ಜ್ಞಾನವೊಂದಿದ್ದರೆ ಈ ಜೀವನದಲ್ಲಿ ಏನೆಲ್ಲಾ ಪಡೆದುಕೊಳ್ಳಬಹುದು. ಅದೇ ರೀತಿ ಎನ್.ಆರ್. ಕುಲಕರ್ಣಿ ಅವರಂತೆ ಸಾಹಿತ್ಯಾಭಿರುಚಿಯೊಂದಿಗೆ ಒಳ್ಳೆಯ ಗುಣಗಳನ್ನು ಬೆಳೆಸುವ ನಿಟ್ಟಿನಲ್ಲಿ ಇಲ್ಲಿ ನೆರೆದ ಎಲ್ಲ ಪೋಷಕರು ತಮ್ಮ ಮಕ್ಕಳಿಗೆ ತಿಳಿ ಹೇಳಬೇಕು. ಇದು ಸಮಾಜ ಮುಖಿಯಾಗಿ ಬೆಳೆಯುವಲ್ಲಿ ಸಹಕಾರಿಯಾಗುತ್ತದೆ ಎಂದರು.
ಹಿರಿಯ ನ್ಯಾಯವಾದಿ ಕೆ.ಎಫ್. ಅಂಕಲಗಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಎನ್.ಆರ್. ಕುಲಕರ್ಣಿ ಅವರು ರಚಿಸಿದ ಬಕುಲ ಪುಷ್ಪ ಗ್ರಂಥದಲ್ಲಿ ಎನ್.ಆರ್. ಕುಲಕರ್ಣಿ ಅವರು ಬೆಳೆದು ಬಂದ ಪರಿ, ಅವರು ಅನುಭವಿಸಿದ ಕಷ್ಟ-ಸುಖಗಳನ್ನು ಕುರಿತು ಸವಿಸ್ತಾರವಾಗಿ ಬರೆದಿದ್ದು, ಈ ಗ್ರಂಥವನ್ನು ತಾವು ಪಡೆದುಕೊಂಡು ಇಂತಹ ಆದರ್ಶಮಯ ವ್ಯಕ್ತಿಯ ಕುರಿತು ತಿಳಿದುಕೊಳ್ಳಬಹುದು. ಅದೇ ರೀತಿ ಇನ್ನು ಹೆಚ್ಚಿನ ಪ್ರಮಾಣದಲ್ಲಿ ಇಂತಹ ಗ್ರಂಥಗಳು ಹೊರಬರಲಿ ಎಂದು ಹಾರೈಸಿದರು.
ವಿಶ್ರಾಂತ ಇಂಗ್ಲೀಷ ಪ್ರಾಧ್ಯಾಪಕ ಡಾ. ಆರ್.ಕೆ. ಕುಲಕರ್ಣಿ ಗ್ರಂಥ ಬಿಡುಗಡೆಗೊಳಿಸಿ ಮಾತನಾಡುತ್ತ, ಮಣ್ಣಿಲ್ಲದೇ ಮಡಿಕೆ ಇಲ್ಲ. ಅದೇ ರೀತಿ ನಾವು ಮಾಡುವ ಕೆಲಸದಲ್ಲಿ ನಮ್ಮಲ್ಲಿ ಆತ್ಮಸ್ಥೆರ್ಯ ಇದ್ದರೆ ಸಾಧನೆ ಮಾಡಬಹುದು. ಅದೇ ನಮ್ಮಲ್ಲಿ ಕಾರ್ಯಶಕ್ತಿಯನ್ನು ಮೈಗೂಢಿಸಿಕೊಳ್ಳಬೇಕು. ಎನ್.ಆರ್. ಕುಲಕರ್ಣಿಯವರು ತಾಂಬಾದಲ್ಲಿ ಜನಿಸಿ, ಬೊಮ್ಮನಹಳ್ಳಿ, ಜೇರಟಗಿಯಲ್ಲಿ ವಿದ್ಯಾಭ್ಯಾಸ ಕಲಿತು ನಂತರ ತಮ್ಮ ಶಿಕ್ಷಕ ವೃತ್ತಿಯನ್ನು ಗಡಿನಾಡ ಪ್ರದೇಶವಾದ ನಾಗಣಸೂರದಲ್ಲಿ ಸುಮಾರು 36 ವರ್ಷಗಳ ಕಾಲ ತಮ್ಮ ಸೇವೆಯನ್ನು ಕನ್ನಡ ಮಾತೆಗೆ ತಮ್ಮದೇ ಕೊಡುಗೆಯನ್ನು ನೀಡಿದ್ದಾರೆ. ಇಂತಹ ಮಹಾನ ವ್ಯಕ್ತಿಯ ಅಭಿನಂದನಾ ಗ್ರಂಥವಾಗಿ ಹೊರಹೊಮ್ಮಿರುವುದು ಹೆಮ್ಮೆಯಗಿದೆ ಎಂದು ತಿಳಿಸಿದರು.
ಆರ್.ಕೆ. ಕುಲಕರ್ಣಿ ಅವರು ಗ್ರಂಥಾವಲೋಕನ ಮಾತನಾಡಿ, ಎನ್.ಆರ್. ಎಂದರೆ ‘ಎನ್ನವರು’ ಎಂರ್ಥ ಅವರ ಹೆಸರಿಗೆ ತಕ್ಕಂತೆ ತನ್ನವರನ್ನು ತಮ್ಮ ಸುತ್ತಮುತ್ತಲಿರುವ ಎಲ್ಲ ಸಹೃಯಿಗಳನ್ನು ಎನ್ನವರು ಎನ್ನುವ ಭಾವನೆಯಿಂದಲೆ ಇಂತಹ ಗ್ರಂಥ ಹೊರ ಬರಲು ಸಾಧ್ಯವಾಗಿದೆ. ಈ ಗ್ರಂಥದಲ್ಲಿ ಸುಮರು 351ಕ್ಕೂ ಹೆಸರು ಪುಟಗಳಿದ್ದು, ಸುಮಾರು 6 ಭಾಗಗಳನ್ನಾಗಿ ವಿಂಗಡಿಸಲಾಗಿದೆ. ಇದರಲ್ಲಿ 16 ಕಾವ್ಯಕಾರಂಜಿ, ಗದ್ಯಗುಚ್ಚ, ಸಂಕೀರ್ಣ, ಲೇಖನಗಳನ್ನು ಒಳಗೊಂಡಿದ್ದು, ಈ ಗ್ರಂಥ ಒಳ-ಹೊರ ವಿನ್ಯಾಸ ಬಹಳ ಚೆನ್ನಾಗಿದ್ದು, ಈ ಗ್ರಂಥದಲ್ಲಿ ಎನ್.ಆರ್. ಕುಲಕರ್ಣಿ ಅವರು ಬೆಳೆದು ಬಂದ ಪರಿ, ಇವರಿಗೆ ಗಡಿಭಾಗದಲ್ಲಿ ಕನ್ನಡ ಬೆಳೆಸುವಲ್ಲಿ ಪಟ್ಟ ಶ್ರಮ, ಇನ್ನಿತರ ವಿಷಯಗಳ ಕುರಿತು ಸವಿಸ್ತಾರವಾಗಿ ತಿಳಿಸಲಾಗಿದೆ ಎಂದು ಗ್ರಂಥದ ಬಗ್ಗೆ ತಿಳಿಸಿದರು.
ವಿ.ಎಸ್. ಖಾಡೆ ಸ್ವಾಗತಿಸಿದರು. ಡಾ.ಜಿ.ಡಿ. ಕೊಟ್ನಾಳ ಹಾಗೂ ಎಸ್.ಬಿ. ಬಾಗೇವಾಡಿ ಪರಿಚಯಸಿದರು. ಪ್ರೊ. ಯು.ಆರ್. ಕುಂಟೋಜಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿದ್ಯಾವತಿ ಅಂಕಲಗಿ ನಿರೂಪಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ಶ್ರೀಮತಿ ಮಂದಾಕಿನಿ ಬಿರಾದಾರ ಇವರ ಸಂಗಡಿಗರಿಂದ ವಚನ ಗಾಯನ ನಡೆಯಿತು.
ಕಾರ್ಯಕ್ರಮದಲ್ಲಿ ಅಬಿನಂದನ ಗ್ರಂಥ ಸಂಪಾದಕ ಸಮಿತಿಯಿಂದ ಡಾ. ಅನುರಾಧಾ ಪ್ರವೀಣ ಜೋಶಿ, ಜಿ.ಆರ್. ಕುಲಕರ್ಣಿ, ಎಸ್.ಬಿ. ಬಾಗೇವಾಡಿ, ವಿದ್ಯಾವತಿ ಅಂಕಲಗಿ ಹಾಗೂ ಅಭಿನಂದನ ಸಮಿತಿಯಿಂದ ವಿ.ಎಸ್. ಖಾಡೆ, ಎಸ್.ಎಂ. ಕಣಬೂರ, ಜಿ.ಎಸ್.ಕುಲಕರ್ಣಿ, ಶಂಕರ ಬಸವಪ್ರಭು (ಸಕ್ರಿ), ಸಿದ್ದಲಿಂಗಪ್ಪ ಹದಿಮೂರ, ಮೋಹನ ಪಿ. ಕುಲಕರ್ಣಿ, ಶಿವಪುತ್ರಪ್ಪ ಕೃಷ್ಣಮೂರ್ತಿ, ರುಕ್ಮಾಂಗದ ಅ. ಗುಡಿ, ಶ್ರೀಶೈಲ ಜಿ. ಮದಭಾವಿ, ಪಂಡಿತರಾವ ಪಾಟೀಲ, ಸ್ಮøತಿ ಮುಕುಂದ ಕುಲಕರ್ಣಿ ಹಾಜರಿದ್ದರು.