ಜಿಲ್ಲೆಗೊಂದು ಹಾಸ್ಟೆಲ್ ನಿರ್ಮಾಣಕ್ಕೆ ಚಿಂತನೆ:ಖಂಡ್ರೆ
ಕಲಬುರಗಿ: ಜೂ.17:ರಾಜ್ಯದಎಲ್ಲ ಜಿಲ್ಲೆಗಳಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗಾಗಿ ಪ್ರತ್ಯೇಕ ಹಾಸ್ಟೆಲ್ ನಿರ್ಮಿಸಲು ನಿರ್ಧರಿಸಲಾಗಿದೆಎಂದು ಮಹಾಸಭಾರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಅರಣ್ಯ, ಪರಿಸರ ಮತ್ತುಜೀವಿಶಾಸ್ತ್ರಖಾತೆ ಸಚಿವಈಶ್ವರಖಂಡ್ರೆ ಹೇಳಿದರು.
ಭಾನುವಾರಇಲ್ಲಿನಧರಿಯಾಪುರಕೋಟನೂರ ಬಡಾವಣೆಯಲ್ಲಿಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ನಿರ್ಮಿಸಲಾಗಿರುವ ಬಾಲಕಿಯರ ಹಾಸ್ಟೆಲ್ ಉದ್ಘಾಟಿಸಿ ಅವರು ಮಾತನಾಡಿದರು.ಈಗಾಗಲೇ ಕಲ್ಯಾಣಕರ್ನಾಟಕ ಭಾಗದಎಲ್ಲ ಜಿಲ್ಲೆಗಳಲ್ಲಿ 200 ವಿದ್ಯಾರ್ಥಿನಿ ಸಾಮಥ್ರ್ಯದ ಹಾಸ್ಟೆಲ್ ನಿರ್ಮಾಣದಚಿಂತನೆ ನಡೆದಿದೆ.20 ಜಿಲ್ಲೆಗಳಲ್ಲಿ ವಿದ್ಯಾರ್ಥಿಹಾಸ್ಟೆಲ್‍ಗಳ ನಿರ್ಮಾಣಕ್ಕೆಒತ್ತು ನೀಡಲಾಗುತ್ತಿದೆ.ಇದರಜೊತೆಗೆ, ಇಡೀರಾಜ್ಯದಲ್ಲಿಇಂತಹ ಹಾಸ್ಟೆಲ್‍ಗಳನ್ನು ಬಾಲಕ ಮತ್ತು ಬಾಲಕಿಯರಿಗಾಗಿ ನಿರ್ಮಿಸಲಾಗುವುದು.ಬೀದರ್ ನಗರದಲ್ಲಿ ವಿದ್ಯಾರ್ಥಿನಿಗಳಿಗಾಗಿ ಹಾಸ್ಟೆಲ್ ನಿರ್ಮಿಸಲು ಸ್ಥಳ ಗುರುತಿಸುವ ಪ್ರಕ್ರಿಯೆ ಚಾಲನೆಯಲ್ಲಿದೆಎಂದರು.
ಕಲಬುರಗಿ ನಗರದಲ್ಲಿಆರಂಭಿಸಲಾಗಿರುವ ವಿದ್ಯಾರ್ಥಿನಿಯರ ನೂತನ ಹಾಸ್ಟೆಲ್‍ನಲ್ಲಿಉಚಿತವಾಗಿದಾಸೋಹ ವ್ಯವಸ್ಥೆಇರಲಿದೆ.ಇದಕ್ಕಾಗಿ ಬೆಂಗಳೂರಿನ ಸಂಸ್ಥೆಯೊಂದುಉಚಿತಊಟದ ವ್ಯವಸ್ಥೆಕಲ್ಪಿಸಲು ಮುಂದೆ ಬಂದಿದ್ದು, ಈ ನಿಟ್ಟಿನಲ್ಲಿ ಮಾತುಕತೆ ಪೂರ್ಣಗೊಂಡುಅಂತಿಮ ನಿರ್ಧಾರಕ್ಕೆ ಬರುವವರೆಗೆಸ್ಥಳೀಯ ದಾನಿಗಳಿಂದ ದಾಸೋಹ ವ್ಯವಸ್ಥೆ ಮಾಡಲಾಗುತ್ತಿದೆಎಂದರು.
ವೀರಶೈವ ಲಿಂಗಾಯತ ಸಮುದಾಯದಎಲ್ಲ ಪಂಗಡಗಳನ್ನು ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿ ಪಟ್ಟಿಗೆ ಸೇರ್ಪಡೆ ಮಾಡಲುಎಲ್ಲರೂಒಗ್ಗೂಡಿ ಹೋರಾಡುವ ಮೂಲಕ ತಾರ್ಕಿಕಅಂತ್ಯಕ್ಕೆಕೊಂಡೊಯ್ಯುವಯತ್ನ ಮಾಡಬೇಕಿದೆಎಂದುಇದೇ ವೇಳೆ ಒತ್ತಿ ಹೇಳಿದರು.
ಇದಕ್ಕೂ ಮುನ್ನ ವೈದ್ಯಕೀಯ ಶಿಕ್ಷಣ ಸಚಿವಡಾ.ಶರಣಪ್ರಕಾಶ್ ಪಾಟೀಲ್ ಮಾತನಾಡಿ, ವೀರಶೈವ ಲಿಂಗಾಯತ ವಿದ್ಯಾರ್ಥಿಗಳಿಗಾಗಿ 500 ವಿದ್ಯಾರ್ಥಿ ಸಾಮಥ್ರ್ಯದ ಹಾಸ್ಟೆಲ್ ನಿರ್ಮಾಣಕ್ಕೆಚಿಂತನೆ ನಡೆದಿದೆ.ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಿ ಅನುದಾನಕ್ಕಾಗಿಕೋರಲಾಗುವುದುಎಂದು ನುಡಿದರು.
ಮುಖ್ಯಮಂತ್ರಿಗಳ ಸಲಹೆಗಾರ ಬಿ.ಆರ್.ಪಾಟೀಲ್ ಮಾತನಾಡಿ, ವೀರಶೈವ ಲಿಂಗಾಯತ ವಿದ್ಯಾರ್ಥಿಗಳಿಗಾಗಿ 500 ವಿದ್ಯಾರ್ಥಿ ಸಾಮಥ್ರ್ಯದ ಹಾಸ್ಟೆಲ್ ನಿರ್ಮಾಣಕ್ಕೆಕೋರಿ ಪಕ್ಷಾತೀತವಾಗಿ ಮುಖ್ಯಮಂತ್ರಿಗಳ ಬಳಿ ನಿಯೋಗಕೊಂಡೊಯ್ದುಅನುದಾನಕ್ಕಾಗಿ ಬೇಡಿಕೆ ಸಲ್ಲಿಸಲಾಗುವುದುಎಂದು ತಿಳಿಸಿದರು.
ಹಳೆ ಮೈಸೂರು ಭಾಗದಲ್ಲಿತಾಯಿ-ತಂದೆ ಹೆಸರಿನಲ್ಲಿದಾನ ಮಾಡುವವರು ಹೇರಳವಾಗಿದ್ದಾರೆ. ಆದರೆ, ನಮ್ಮ ಭಾಗದಲ್ಲಿಅಂತಹ ಪ್ರವೃತ್ತಿ ಬಹಳ ಕಡಿಮೆ.ಸಮಾಜಕಟ್ಟುವ ಕೆಲಸ ಬಂದಾಗಎಲ್ಲರೂ ಸಂಘಟಿತರಾಗಿ ಪ್ರಯತ್ನಿಸುವುದು ಒಳ್ಳೆಯದು ಎಂದುಅಭಿಪ್ರಾಯಪಟ್ಟರು.
ಸಣ್ಣಕೈಗಾರಿಕಾ ಸಚಿವ ಹಾಗೂ ಯಾದಗಿರಿಜಿಲ್ಲಾಉಸ್ತುವಾರಿ ಸಚಿವ ಶರಣಬಸಪ್ಪದರ್ಶನಾಪುರ ಮಾತನಾಡಿ, ನಮ್ಮ ಶಕ್ತಿ ಮತ್ತು ಸ್ವಂತ ಬುದ್ಧಿಬಲದಿಂದಾಗಿಇಲ್ಲಿಯವರೆಗೆ ಬೆಳೆದು ನಿಂತಿದ್ದೇವೆ. ವಿನಾಕಾರಣ ಪ್ರತ್ಯೇಕಗೊಳ್ಳುವುದಕ್ಕಿಂತಲೂ ಸಂಘಟಿತರಾಗಿ ಸಮುದಾಯದ ಏಳಿಗೆಗೆ ಯತ್ನಿಸಲುಒಂದಾಗಬೇಕಿದೆಎಂದು ಕಿವಿಮಾತು ಹೇಳಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾಜಿಲ್ಲಾಧ್ಯಕ್ಷ ಶರಣಕುಮಾರ್ ಮೋದಿ ಹಾಗೂ ನೂತನ ಹಾಸ್ಟೆಲ್ ನಿರ್ಮಾಣದಗುತ್ತಿಗೆದಾರ ಅನಿಲ್ ಕುಮಾರ್ ಪಾಂಡೆಅವರನ್ನು ಸಮಾರಂಭದಲ್ಲಿಸನ್ಮಾನಿಸಲಾಯಿತು.
ಚಿಣಮಗೇರಿ ಮಠದ ವೀರ ಮಹಾಂತ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿಚಿ.ದೊಡ್ಡಪ್ಪಅಪ್ಪ, ಶಾಸಕರಾದ ಎಂ.ವೈ.ಪಾಟೀಲ್, ಅಲ್ಲಮಪ್ರಭು ಪಾಟೀಲ್, ಶರಣಗೌಡ ಪಾಟೀಲ್‍ಕಂದಕೂರ್, ವಿಧಾನ ಪರಿಷತ್ ಸದಸ್ಯ ಶಶಿಲ್ ಜಿ.ನಮೋಶಿ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ರಾಜಕುಮಾರ್ ಪಾಟೀಲ್‍ತೇಲ್ಕೂರ್, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜದೇಶಮುಖ, ಮಹಾಸಭಾಜಿಲ್ಲಾಧ್ಯಕ್ಷ ಶರಣಕುಮಾರ್ ಮೋದಿ, ಮಹಾಸಭಾ ಮಹಿಳಾ ಘಟಕದಅಧ್ಯಕ್ಷೆಡಾ.ಸುಧಾ ಹಾಲಕಾಯಿ ಸೇರಿದಂತೆಇನ್ನಿತರರು ಉಪಸ್ಥಿತರಿದ್ದರು.
‘ಅಲ್ಪಸಂಖ್ಯಾತ ವರ್ಗಕ್ಕೆ ಸೇರ್ಪಡೆ ಒಳ್ಳೆಯದು’
ಪ್ರತ್ಯೇಕ ವೀರಶೈವ ಲಿಂಗಾಯತಧರ್ಮಕ್ಕಾಗಿಯತ್ನಿಸುವುದಕ್ಕಿಂತಲೂ ನಮ್ಮ ಸಮುದಾಯವನ್ನುಅಲ್ಪಸಂಖ್ಯಾತರ ವರ್ಗಕ್ಕೆ ಸೇರ್ಪಡೆ ಮಾಡುವ ನಿಟ್ಟಿನಲ್ಲಿಯತ್ನಿಸುವುದು ಒಳ್ಳೆಯದು ಎಂದು ಮುಖ್ಯಮಂತ್ರಿಗಳ ಸಲಹೆಗಾರ ಬಿ.ಆರ್.ಪಾಟೀಲ್ ಸಲಹೆ ನೀಡಿದರು.
ಈ ನಿಟ್ಟಿನಲ್ಲಿ ಪ್ರಖರವಾದ ಹೋರಾಟ ನಡೆಸುವುದಕ್ಕಿಂತಲೂ ಡಿಪ್ಲೊಮೆಸಿ (ರಾಜತಾಂತ್ರಿಕ ಮಾರ್ಗ) ಧಾಟಿಆಯ್ಕೆ ಮಾಡಿಕೊಳ್ಳಬೇಕು.ಜೈನ ಸಮುದಾಯದವರುಯಾವುದೇ ಹೋರಾಟ ನಡೆಸದೆ, ಗದ್ದಲವಿಲ್ಲದೆತಮ್ಮ ಸಮುದಾಯವನ್ನುಅಲ್ಪಸಂಖ್ಯಾತ ವರ್ಗಕ್ಕೆ ಸೇರ್ಪಡೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದ ನಾವು ಸಹ ಕಲಿಯಬೇಕಿದೆಎಂದು ಪಾಟೀಲ್ ಕಿವಿಮಾತು ಹೇಳಿದರು.