ಶಿಕ್ಷಣದ ಜೊತೆಗೆ ನಾಯಕತ್ವದ ಸಾಮಥ್ರ್ಯ ಬೆಳೆಸಿಕೊಳ್ಳಲು ಶಾಸಕ ಡಾ. ಸಿದ್ದಲಿಂಗಪ್ಪಾ ಪಾಟೀಲ ಕರೆ
ಚಿಟಗುಪ್ಪಾ :ಜೂ.17: ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಸಂಘಟನೆ ಹಾಗೂ ನಾಯಕತ್ವದ ಸಾಮಥ್ರ್ಯ ಬೆಳೆಸಿಕೊಳ್ಳ ಬೇಕು, ಇದು ದೇಶದ ಭವಿಷ್ಯ ರೂಪಿಸುತ್ತದೆ ಎಂದು ಹುಮನಾಬಾದ ಶಾಸಕರಾದ ಡಾ. ಸಿದ್ದಲಿಂಗಪ್ಪಾ ಪಾಟೀಲ ಅವರು ತಿಳಿಸಿದ್ದಾರೆ.
ಅವರು ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬೀದರ ವಿಶ್ವವಿದ್ಯಾಲಯ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು, ಚಿಟಗುಪ್ಪದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್.) ವಾರ್ಷಿಕ ವಿಶೇಷ ಶಿಬಿರವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ್ದರು.
ಕಾಲೇಜು ವಿವಿಧ ಕೋರ್ಸಗಳ ಮೂಲಕ ಉತ್ತಮ ಶಿಕಣ ನೀಡುತ್ತಿದೆ. ನ್ಯಾಕ್ ದಿಂದ 2017ರಲ್ಲಿ ‘ಬಿ’ ಮತ್ತು 2023ರಲ್ಲಿ ‘ಬಿ ಫ್ಲಸ್’ ಮಾನ್ಯತೆ ಪಡೆದಿರುವದೆ ಇದಕ್ಕೆ ಸಾಕ್ಷಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕಾಲೇಜಿನ ಸಭಾಂಗಣದ ಇನ್ನುಳಿದ ಕಾಮಗಾರಿಗೆ 2 ಕೋಟಿ ಮಂಜೂರಾಗಿದೆ ಜೊತೆಗೆ ಡಿಜಿಟಲ್ ಗ್ರÀಂಥಾಲಯ ಮತ್ತು ಅವಶ್ಯಕ ಮೂಲಭೂತ ಸೌಕರ್ಯಗಳನ್ನ ಒದಗಿಸಲಾಗುವದು ಎಂದು ತಿÀಳಿಸಿದರು. ಯುವಕರಿಗೆ ಗುಣಮಟ್ಟದ ಶಿಕ್ಷಣ ಮತ್ತು ಸರ್ವ ಜನತೆಗೆ ಉತ್ತಮ ಆರೋಗ್ಯದ ಸೇವೆ ಒದಗಿಸುವದೇ ತಮ್ಮ ಮೊದಲ ಆದ್ಯತೆವಾಗಿದೆ ಎಂದು. ಒಂದು ವಾರ ನಡೆಯುವÀ ಎನ್.ಎಸ್.ಎಸ್ ವಾರ್ಷಿಕ ವಿಶೇಷ ಶಿಬಿರ ನಿಮಿತ್ಯ ಸಸಿ ನೆಡುವ ಮೂಲಕ ಯಶಸ್ವಿಯಾಗಲಿ ಎಂದು ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಮುಖಂಡರಾದ ಮಲ್ಲಿಕಾರ್ಜುನ ಪಾಟೀಲ ಅವರು ಎನ್.ಎಸ್.ಎಸ್ ಶಿಬಿರಾರ್ಥಿಗಳು ಶ್ರಮದಾನದೊಂದಿಗೆ ಜೀವನ ಕೌಶಲ್ಯಗಳನ್ನು ಅರಿತುಕೊಳ್ಳಬೇಕು, ಜೊತೆಗೆ ಸಮಾಜದಲ್ಲಿ ಸ್ವಚ್ಚತೆ ಕುರಿತು ಅರಿವು ಮೂಡಿಸಬೇಕು ಎಂದು ಕರೆ ನೀಡಿದರು.
ಎನ್.ಎಸ್.ಎಸ್ ಅಧಿಕಾರಿ ಡಾ. ವೀರಶೆಟ್ಟಿ ಮೈಲೂರಕರ್ ಮಾತನಾಡಿ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರವು ‘ವಿಜ್ಞಾನ ಮತ್ತು ವೈಜ್ಞಾನಿಕ ಮನೋಭಾವನೆ ಯುವಕರ ಪಾತ್ರ’ ಸಂದೇಶ ಸಾರುತ್ತಿದೆ. ಶಿಬಿರಾರ್ಥಿಗಳಿಗೆ ವ್ಯಕ್ತಿ ಮತ್ತು ಸಮಷ್ಠಿಯ ಭಾಂದವ್ಯದ ಅರಿವು, ಪರಿಸರ ಸಂರಕ್ಷಣೆ, ಸಂವಹನ ಕೌಶಲ್ಯ ಹಾಗೂ ವ್ಯಕ್ತಿತ್ವ ವಿಕಸನ, ರಾಷ್ಟ್ರೀಯ ಭಾವೈಕ್ಯತೆ ಮತ್ತು ಭಾತೃತ್ವ ಕುರಿತು ವಿಶೇಷ ಉಪನ್ಯಾಸಗಳ ಮೂಲಕ ಅರಿವು ಮೂಡಿಸಲಾಗುವದು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯರಾದ ಡಾ. ಸುರೇಂದರ್ ಸಿಂಗ್ ಅವರು ಎನ್.ಎಸ್.ಎಸ್ ಶಿಬಿರದಲ್ಲಿ 100 ಶಿಬಿರಾರ್ಥಿಗಳು ಭಾಗವಹಿಸುತ್ತಿದ್ದಾರೆ. ಬಸ್ ನಿಲ್ದಾಣ ಹಾಗೂ ಸರಕಾರಿ ಆಸ್ಪತ್ರೆ ಗಳಲ್ಲಿ ಸ್ವಚ್ಚತ ಶ್ರಮದಾನ ಹಮ್ಮಿಕೊಳ್ಳಲಾಗುವದು ಎಂದರು. ರೇವಣಪ್ಪಾ ಹೂಗಾರ, ಅನೀಲ ಜೋಶಿ, ನಾಗಭೂಷಣ ಸಂಗನ್, ಡಾ. ಶಿವಕುಮಾರ ಬಿರಾದರ ಅತಿಥಿಗಳಾಗಿ ಭಾಗವಹಿಸಿದರು.
ಮುಖಂಡರಾದ ಪ್ರವೀಣ ರಾಜಾಪುರ, ರಾಜಗೋಪಾಲ ಐನಾಪುರ, ಗೋಪಾಲಕೃಷ್ಣ ಮೋಹಲೆ, ಇಸ್ಮಾಯಿಲ ರಾಠೋಡಿ, ಸಚಿನ ಮಠಪತಿ, ಅಮೀತ ತೊಗಲೂರ, ರಾಜಕುಮಾರ ಗುತ್ತೆದಾರ, ಹಿರಿಯ ಪ್ರಾಧ್ಯಾಪಕರಾದÀ ಡಾ. ಕೆ.ಶಿವಕುಮಾರ, ಡಾ, ಜಯದೇವಿ ಗಾಯಕವಾಡ, ಡಾ. ರವೀಂದ್ರಕುಮಾರ ಟಿಳೆಕರ್, ಮೀನಾಕ್ಷಿ, ಡಾ ಶೇಷರಾವ, ಡಾ.ಯೇಸುಮಿತ್ರ, ಜಬಿವುಲ್ಲಾ, ರಮೇಶಕುಮಾರ ಬಿರಾದರ, ಸೇರಿದಂತೆ ಅತಿಥಿ ಉಪನ್ಯಾಸಕರು, ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ಡಾ. ಚಿತ್ರಶೇಖರ ಚಿರಳ್ಳಿ ನಿರೂಪಿಸಿದರು. ಶಾಂತಕುಮಾರ ಪಾಟೀಲ ವಂದಿಸಿದರು.