ಪ್ರಕೃತಿಯನ್ನು ತಾಯಿಯಂತೆ ಪೂಜಿಸಿ: ಶ್ರೀ ಬಸವಲಿಂಗ ಸ್ವಾಮಿಗಳು
ವಿಜಯಪುರ,ಜೂ.17 :ನಗರದ ಸ್ಪೂರ್ತಿ ಫೌಂಡೇಶನ್ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಪರಿಸರ ದಿನಾಚರಣೆಯ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮವನ್ನು ಹುಂಡೇಕಾರ್ ಲೇಔಟ್, ಫರೆಕ್ ನಗರ, ಹಾಗೂ ಶುಭವಾಸ್ತು ಕಾಲೋನಿಯಲ್ಲಿ ಹಮ್ಮಿಕೊಳ್ಳಲಾಯಿತು.
ಸಾನ್ನಿಧ್ಯ ವಹಿಸಿದ್ದ ವಿಜಯಪುರ ಜ್ಞಾನ ಯೋಗಾಶ್ರಮದ ಅಧ್ಯಕ್ಷ ಗುರುಗಳಾದ ಪರಮಪೂಜ್ಯ ಶ್ರೀ ಬಸವಲಿಂಗ ಮಹಾಸ್ವಾಮಿಗಳು ಮಾತನಾಡಿ, ಪ್ರಕೃತಿಯನ್ನು ತಾಯಿಯೆಂದು ಪೂಜಿಸಿ, ದೇವರೆಂದು ಗೌರವಿಸಿ, ಮಗುವೆಂದು ರಕ್ಷಿಸಿ ಎಂದರು.
ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ನಡೆದಾಡಿದ ನೆಲವನ್ನು ಹಚ್ಚಹಸಿರನ್ನಾಗಿಸುವ ಧ್ಯೇಯದೊಂದಿಗೆ 150ಕ್ಕೂ ಹೆಚ್ಚು ಗಿಡಗಳನ್ನು ಬೆಳೆಸುವ ಮೂಲಕ ಪರಿಸರದ ಸಂರಕ್ಷಣೆಯತ್ತ ಹೆಜ್ಜೆ ಇಡಲಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಶಾಸಕ ವಿಠ್ಠಲ ಕಟಕದೊಂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇನ್ನೋರ್ವ ಅತಿಥಿಗಳಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಅವರ ಸಂಪರ್ಕಾಧಿಕಾರಿ ಡಾ. ಮಹಾಂತೇಧ ಬಿರದಾರ ಮಾತನಾಡಿ, ಪ್ರಕೃತಿ ಪ್ರತಿಯೊಬ್ಬ ಮನುಷ್ಯನ ಆಸೆಗಳನ್ನು ಪೂರೈಸುತ್ತದೆ ಹೊರತು ದುರಾಸೆಯನ್ನಲ್ಲ.
ಇಂದಿನ ದಿನಗಳಲ್ಲಿ ಬಹಳಷ್ಟು ಜನರು ಸ್ವಾರ್ಥಕ್ಕಾಗಿ ಕಾರ್ಯಗಳನ್ನು ಮಾಡಿದ್ದಾರೆ. ಆದರೆ ಈ ಸಂಸ್ಥೆಯವರು ನಿಸ್ವಾರ್ಥ ಸೇವೆಯನ್ನು ಮಾಡುವುದ ಬಹಳ ಶ್ಲಾಘನೀಯ. ಸಿದ್ದೇಶ್ವರ ಶ್ರೀಗಳು ಪರಿಸರ ಪ್ರೇಮಿಯಾಗಿದ್ದರು. ಅವರ ಕಾಲದಲ್ಲಿ ಬದುಕಿ ಬಾಳಿದವರು ನಾವುಗಳಾದ ಇಂದಿನ ಪರಿಸರದ ಬಗ್ಗೆ ಕಾಳಜಿ ವಹಿಸುವುದು ತುಂಬಾ ಮುಖ್ಯ ಎಂದು ತಿಳಿಸಿದರು. ಇದೇ ವೇಳೆ ಸ್ಪೂರ್ತಿ ಫೌಂಡೇಶನ್ ಮಾಡುವ ಸಾಮಾಜಿಕ ಕಾರ್ಯಕ್ರಮಗಳಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಸ್ಪೂರ್ತಿ ಫೌಂಡೇಶನ್ ಕಾರ್ಯದರ್ಶಿ ಪದ್ಮಜಾ ಬಿದರಿ ಅವರು ಸ್ಪೂರ್ತಿ ಫೌಂಡೇಶನ್ ಸಾಗಿಬಂದ ಹಾದಿ ಮತ್ತು ಸಮಾಜಮುಖಿ ಕಾರ್ಯಕ್ರಮಗಳನ್ನು ಸವಿವರವಾಗಿ ವಿವರಿಸಿದರು.
ಇದೇ ಸಮಯದಲ್ಲಿ ಸ್ಪೂರ್ತಿ ಫೌಂಡೇಶನ್ ವತಿಯಿಂದ ಅಧ್ಯಕ್ಷ ಅರುಣ ಹುಂಡೇಕಾರ ಅವರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತೊರವಿ ಐಖಿ2 ಇವರಿಗೆ ಟಿವಿಯನ್ನು ದೇಣಿಗೆಯಾಗಿ ನೀಡಿದರು.
ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ವಲಯ ಅರಣ್ಯ ಅಧಿಕಾರಿ ಸಂತೋಷ ಅಜೂರ, ವಾರ್ಡಿನ ಸದಸ್ಯ ಬಸವರಾಜ ಕೋರೆ, ಸ್ಪೂರ್ತಿ ಫೌಂಡೇಶನ್ ಉಪಾಧ್ಯಕ್ಷ ಬಸವರಾಜ ಪಾಟೀಲ, ಸದಸ್ಯರಾದ ಡಾ.ಶೈಲಜಾ ಪಾಟೀಲ, ಡಾ. ವಿಜಯಕುಮಾರ ಪಾಟೀಲ, ಮುತ್ತು ಹಕ್ಕಾಪಕ್ಕಿ, ಡಾ.ಅಂಜಲಿ ಪಾಟೀಲ, ಸುಭಾಸ ಬಗಲಿ, ರಾಜು ಬಿರಾದಾರ ಹಾಗೂ ಬಡಾವಣೆಯ ನಿವಾಸಿಗಳಾದ ವಿಜಯಕುಮಾರ ಹುಂಡೇಕಾರ, ವಿವೇಕಾನಂದ ಹುಂಡೇಕಾರ, ಅರವಿಂದ ಹುಂಡೇಕಾರ, ರಾಜು ಹಿರೇಮಠ, ಕಾಶಿನಾಥ ಅಣೆಪ್ಪನವರ, ಕೋಟಿ ವೃಕ್ಷ ಅಭಿಯಾನದ ಸಂಚಾಲಕ ಮುರುಗೇಶ ಪಟ್ಟಣಶೆಟ್ಟಿ, ಅನಿಲ ಧಾರವಾಡಕರ, ಶ್ರೀಕಾಂತ ಹಡಲಗಿ, ಶಿವನಗೌಡ ಪಾಟೀಲ, ಡಾ. ಆನಂದ ಯಲಗೊಂಡ, ಸೋಮು ಮಾಟ್, ಸಂತೋಷ ಔರಸಂಗ, ಬಸವರಾಜ ದೇವರ, ಬಾಪು ಗಂಜಲಕೇಡ, ಶಿವಲಾಲ ಚವ್ಹಾಣ, ಶಾಹಿದ ಮಾಲಿಪಾಟೀಲ, ಅಮೋಘಸಿದ್ಧ ಹಾಗೂ ಸ್ಪೂರ್ತಿ ಫೌಂಡೇಶನ್ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮುತ್ತು ರಾಯನಗೌಡ್ರ ಸ್ವಾಗತಿಸಿದರು. ಚಂದ್ರಕಾಂತ ಹೊನಮಾನೆ ವಂದಿಸಿದರು.