ಕನಕದಾಸರು ಕನ್ನಡದ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ ಮಹಾಮಹಿಮರು: ತುಳಸಿರಾಮ ಸೂರ್ಯವಂಶಿ
ವಿಜಯಪುರ,ಜೂ.17: ಕನ್ನಡ ಸಾಹಿತ್ಯ ಪರಿಷತ್ತು ನಿರಂತರವಾಗಿ, ಅನೇಕ ಮಹಾಮಹಿಮರ ಜಯಂತಿಗಳನ್ನು, ಕವಿಗೋಷ್ಠಿಗಳನ್ನು ಹಾಗೂ ಯಶಸ್ವಿಯಾಗಿ ದತ್ತಿ ಗೋಷ್ಠಿಗಳನ್ನು ಅತ್ಯಂತ ಅರ್ಥಪೂರ್ಣವಾಗಿ ವಿನೂತನವಾದ ರೀತಿಯಲ್ಲಿ ಅನೇಕ ಚಟುವಟಿಕೆಗಳನ್ನು ಹಮ್ಮಿಕೊಂಡು ಬರುತ್ತಿರುವುದು ನಿಜಕ್ಕೂ ಸಂತೋಷದ ಸಂಗತಿ ಎಂದು ಹಿರಿಯ ನ್ಯಾಯವಾದಿ ತುಳಸಿರಾಮ ಸೂರ್ಯವಂಶಿ ಅಭಿಪ್ರಾಯಪಟ್ಟರು.
ಭಾನುವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕಾ ಹಾಗೂ ನಗರ ಘಟಕ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಜರುಗಿದ ದಿವಂಗತ ವೆಂಕಟೇಶ ನರಹರಿ ಕಟ್ಟಿಯವರ ಸ್ಮರಣೆಯಲ್ಲಿ ದತ್ತಿ ದಾನಿಗಳಾದ ವೇಣುಗೋಪಾಲ ವೆಂಕಟೇಶ ಕಟ್ಟಿಯವರ “ಸಂತ ಕನಕದಾಸರ ಹರಿಭಕ್ತಿಸಾರದ ಕುರಿತ ಚಿಂತನೆ” ಹಾಗೂ ದಿವಂಗತ ಗಂಗಾಧರ ಕೋರಳ್ಳಿಯವರ ಸ್ಮರಣೆಯಲ್ಲಿ ಕೋರಳ್ಳಿ ಕುಟುಂಬದವರ ಅಪೇಕ್ಷೆಯಂತೆ “ನೀಲಾಂಬಿಕೆ ಹಾಗೂ ಗಂಗಾಂಬಿಕೆಯರ ಸಂದೇಶಗಳು” ಕುರಿತು ನಡೆದ ದತ್ತಿನಿಧಿ ಕಾರ್ಯಕ್ರಮದ ಉದ್ಘಾಟನೆಯನ್ನು ಸಸಿಗೆ ನೀರುಣಿಸುವ ಮೂಲಕ ನೆರವೇರಿಸಿ ಅವರು ಮಾತನಾಡಿದರು. ನಿಜವಾಗಿಯೂ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಕೀರ್ತಿ ದಾಸ ಸಾಹಿತ್ಯಕ್ಕೆ ಸಲ್ಲುತ್ತದೆ. ಕನ್ನಡ ಸಾರಸ್ವತ ಲೋಕದಲ್ಲಿ ತಮ್ಮ ಕೀರ್ತನೆಗಳ ಮೂಲಕವೇ ಇಡೀ ದಾಸ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಮಹಾಮಹಿಮರಾಗಿ ಹೊರಹೊಮ್ಮುವ ಮೂಲಕ “ಕುಲಕುಲಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ! ಎಂಬ ಕೀರ್ತನೆಯ ಸಾಲುಗಳ ಅರ್ಥದ ಸಂದೇಶವನ್ನು ಸ್ಮರಿಸಿದರು.
ನಾವೆಲ್ಲರೂ ಸಹ ಇಂದು ನಮ್ಮ ಜೀವನದಲ್ಲಿ ಈ ಮೇಲಿನ ತತ್ವವನ್ನು ಅಳವಡಿಸಿಕೊಂಡರೆ ಯಾವುದೇ ಕಾನೂನು ಕಟ್ಟಳೆಯ ಅವಶ್ಯಕತೆಯೇ ಇರುವುದಿಲ್ಲ ಎನ್ನುತ್ತಾ, ಕನಕದಾಸರ ಹರಿಭಕ್ತಿಸಾರ ಕೃತಿಯ ಚಿಂತನೆಯನ್ನು ಏರ್ಪಡಿಸುವ ಮೂಲಕ ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತುವ ನಿಟ್ಟಿನಲ್ಲಿ ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡ ಈ ಕಾರ್ಯ ನಿಜಕ್ಕೂ ಶ್ಲಾಘನೀಯವಾದದ್ದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ರಾಂತ ಪ್ರಾಚಾರ್ಯ ಪೆÇ್ರ. ಎಂ.ಎಸ್ ಗವನ್ನವರ ಮಾತನಾಡುತ್ತಾ, ಕನಕದಾಸರು ವ್ಯಾಸರಾಯರ ಪರಮ ಶಿಷ್ಯರಾಗಿ ಆಯ್ಕೆಯಾದದ್ದು ಅವರಲ್ಲಿರುವ ಅಗಾಧ ಪ್ರತಿಭೆಯಿಂದಲೇ. ಕೃಷ್ಣನ ಅನನ್ಯ ಭಕ್ತಿಯಿಂದ ಇಡೀ ಮನುಕುಲವನ್ನು ಉದ್ಧರಿಸಿದ ಶ್ರೇಯಸ್ಸು ಕನಕದಾಸರಿಗೆ ಸಲ್ಲುತ್ತದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ತನ್ನ ಎಲ್ಲಾ ಚಟುವಟಿಕೆಗಳನ್ನು ಅತ್ಯಂತ ಕ್ರಿಯಾಶೀಲವಾಗಿ ನಡೆಸಿಕೊಂಡು ಬರುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿ ಎಂದು ಹೇಳಿದರು.
“ಸಂತ ಕನಕದಾಸರ ಹರಿಭಕ್ತಿಸಾರ”ಕುರಿತು ಉಪನ್ಯಾಸ ನೀಡಿದ ವೇಣುಗೋಪಾಲ ವೆಂಕಟೇಶ ಕಟ್ಟಿಯವರು “ಕನಕದಾಸರ ಹರಿಭಕ್ತಿಸಾರ” ಕೃತಿಯಲ್ಲಿನ ಅನೇಕ ಪದ್ಯದ ಸಾಲುಗಳನ್ನು ರಾಗಬದ್ಧವಾಗಿ ಹಾಡಿ ಸಾರಾಂಶವನ್ನು ಅರ್ಥೈಸುತ್ತ ಈ ಕಾವ್ಯವನ್ನು ಓದುವವರಿಗೆ ಕೋಟಿ ಕನ್ಯಾದಾನದ ಫಲ ಲಭಿಸುವುದು ಕಟ್ಟಿಟ್ಟ ಬುತ್ತಿ. ಹರಿಯ ಅನುಗ್ರಹವೊಂದಿದ್ದರೆ, ಜಗತ್ತಿನಲ್ಲಿ ಯಾವುದೂ ಅಸಾಧ್ಯವಲ್ಲ ಎಂದರು.
“ನೀಲಾಂಬಿಕೆ ಹಾಗೂ ಗಂಗಾಂಬಿಕೆಯರ ಜೀವನ ಹಾಗೂ ಅವರ ಸಂದೇಶಗಳು” ಕುರಿತು ಉಪನ್ಯಾಸ ನೀಡಿದ ತಿಕೋಟಾ ಕಸಾಪ ಗೌರವ ಕಾರ್ಯದರ್ಶಿ ಶಿಲ್ಪಾ ಹಂಜಿ ಅವರು ಮಾತನಾಡುತ್ತ, 12ನೇ ಶತಮಾನದ ಕ್ರಾಂತಿಕಾರಿ ವಚನಕಾರರು, ವಿಶ್ವಗುರು, ಜಗಜ್ಯೋತಿ ಬಸವಣ್ಣನವರ ಆದರ್ಶ ಧರ್ಮಪತ್ನಿಯರಾಗಿ ಅವರ ಇಡೀ ಬದುಕಿಗೆ ಸಾರ್ಥಕತೆಯನ್ನು ಕಲ್ಪಿಸಿದ ಶ್ರೇಯಸ್ಸು ನೀಲಾಂಬಿಕೆ ಹಾಗೂ ಗಂಗಾಂಬಿಕೆಯರಿಗೆ ಸಲ್ಲುತ್ತದೆ. ನೀಲಾಂಬಿಕೆ “ಸಂಗಯ್ಯ” ಎಂಬ ಅಂಕಿತದೊಂದಿಗೆ ರಚಿಸಿದ ಅನೇಕ ವಚನಗಳ ಸಾರವನ್ನು ವೇದಿಕೆಯಲ್ಲಿ ಉಪನ್ಯಾಸದ ಮೂಲಕ ಹಂಚಿಕೊಳ್ಳುತ್ತಾ, “ಸದುವಿನಯವೇ ಸದಾಶಿವನ ಒಲುಮೆಯಯ್ಯಾ” ಎಂಬುದರ ಸಾರವನ್ನು ನೆರೆದಿದ್ದ ಕನ್ನಡ ಮನಸ್ಸುಗಳಿಗೆ ಉಣಬಡಿಸಿದರು.
ಮುಖ್ಯ ಅತಿಥಿಗಳಾದ ಉದ್ಯಮಿ ಮಹಮ್ಮದ ಅಲಿ ಪಠಾಣ, ಕಸಾಪ ಸಹ ಕಾರ್ಯದರ್ಶಿÀ ರವಿ ಕಿತ್ತೂರ, ಕೊಲ್ಹಾರದ ಕವಯಿತ್ರಿ ರುದ್ರಮ್ಮ ಗಿಡ್ಡಪ್ಪಗೋಳ, ಮಸಬಿನಾಳದ ಸಾಹಿತ್ಯಾಸಕ್ತರಾದ ಬಸಲಿಂಗಯ್ಯ ಕೂಡಗಿಮಠ, ಮಸಬಿನಾಳದ ಸಮಾಜ ಸೇವಕÀ ಸಮೀರ ಸೈಯದ ಹಾಗೂ ಜಿಲ್ಲಾ ದತ್ತಿ ಸಂಚಾಲಕÀ ರಾಜೇಸಾಬ ಶಿವನಗುತ್ತಿ ಅವರು ಮಾತನಾಡಿದರು.
ಶಿಕ್ಷಕಿ ಶಿಲ್ಪಾ ಭಸ್ಮೆ ಸ್ವಾಗತಿಸಿದರು. ಗೌರವ ಕಾರ್ಯದರ್ಶಿಗಳಾದ ಪೆÇ್ರ. ಸುಭಾಷಚಂದ್ರ ಕನ್ನೂರ ಪ್ರಾಸ್ತಾವಿಕವಾಗಿ ಮಾತನಾಡಿದರು, ಮಮತಾ ಮುಳಸಾವಳಗಿ ನಿರೂಪಿಸಿದರು. ಉಪನ್ಯಾಸಕ ಅಸ್ಲಾಂ ಶೇಖ ವಂದಿಸಿದರು.
ಕಸಾಪ ಜಿಲ್ಲಾ ಅಧ್ಯಕ್ಷ ಹಾಸಿಂಪೀರ ವಾಲಿಕಾರ, ಗೌರವ ಕಾರ್ಯದರ್ಶಿ ಡಾ. ಮಾಧವ ಗುಡಿ. ದತ್ತಿ ಸಂಚಾಲಕ ರಾಜೇಸಾಬ ಶಿವನಗುತ್ತಿ, ತಿಕೋಟಾ ಕಸಾಪ ಅಧ್ಯಕ್ಷ ಸಿದ್ರಾಮಯ್ಯ ಲಕ್ಕುಂಡಿಮಠ, ಕಸಾಪ ಪದಾಧಿಕಾರಿಗಳಾದ ಅಭಿμÉೀಕ ಚಕ್ರವರ್ತಿ, ಬಿ.ಎಮ್. ಅಜೂರ. ಕೆ.ಎಸ್. ಹಣಮಾನಿ. ಟಿ.ಆರ್. ಹಾವಿನಾಳ. ರಾಧಾಮಣಿ ಕಟ್ಟಿ. ಮಹಮ್ಮದ ವಾಲೀಕಾರ. ಶಾಂತಾ ವಿಭೂತಿ. ಅಣ್ಣುಗೌಡ ಬಿರಾದಾರ. ಜಿ.ಎಸ್ ಬಳ್ಳೂರ. ಅರ್ಜುನ ಶಿರೂರ. ಶೋಭಾ ಬಡಿಗೇರ. ಡಾ. ಡಿ.ಆರ್. ಪಾಟೀಲ. ಸಿದ್ರಾಮಪ್ಪಾ ಜಂಗಮಶೆಟ್ಟಿ. ಗೊಲ್ಲಾಳಪ್ಪ ಬೈಚಬಾಳ. ರಾ.ಶಿ. ವಾಡೇದ, ಮಲ್ಲಿಕಾರ್ಜುನ ಹುಣಶ್ಯಾಳ, ಮಹಾದೇವ ಗಾಯಕವಾಡ, ರಿಯಾಜ ವಾಲಿಕಾರ, ತ್ರಿವೇಣಿ ವಾರದ, ಖಾದರ ವಾಲಿಕಾರ, ಸರೋಜಾ ಪಾಟೀಲ, ಪ್ರತಿಭಾ ಪಾಟೀಲ, ಅಶೋಕ ಜಾಧವ ಮುಂತಾದವರು ಉಪಸ್ಥಿತರಿದ್ದರು.