ಶಿರಡಿ ಸಾಯಿಬಾಬಾ, ಧ್ಯಾನಾಂಜನೇಯ ಸ್ವಾಮಿ ವಿಗ್ರಹಗಳ ಪ್ರತಿಷ್ಠಾಪನೆ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಜೂ.17:- ನಗರದ ಫಾರೆಸ್ಟ್ ನರ್ಸರಿ ಹತ್ತಿರ ವಿವೇಕ ನಗರದಲ್ಲಿ ಶ್ರೀ ಶಿರಡಿ ಸಾಯಿಬಾಬಾ ಧಾರ್ಮಿಕ ಮತ್ತು ಚಾರಿಟಬಲ್ ಟ್ರಸ್ಟ್ ವತಿಯಿಂದ ಸುಮಾರು 4 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಶಿರಡಿ ಸಾಯಿಬಾಬಾ ಮಂದಿರ ಇಂದು ಲೋಕಾರ್ಪಣೆ ಕೊಂಡಿತ್ತು.
ಮಂದಿರ ಉದ್ಘಾಟನೆ ಪ್ರಯುಕ್ತ ಕಳೆದ ಮೂರು ದಿನಗಳ ಕಾಲ ದೇವಸ್ಥಾನದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನಡೆದವು, ಮೂರು ದಿನಗಳ ಕಾಲವೂ ಭಕ್ತರಿಗೆ ಅನ್ನ ಸಂತರ್ಪಣೆಯನ್ನು ಮಾಡಲಾಯತು. ಅಂತಿಮ ದಿನವಾದ ಇಂದು 15 ಸಾವಿರಕ್ಕು ಹೆಚ್ಚು ಮಂದಿಗೆ ಸಹ ಪಂಕ್ತಿ ಬೋಜನವನ್ನು ಮಾಡಿದರು.
ಬೆಳಗ್ಗೆ ಮಹಾರಾಷ್ಟ್ರದ ಶ್ರೀ ಶಿರಡಿ ಸಾಯಿ ಬಾಬಾ ಮಂದಿರದ ಪ್ರಧಾನ ಅರ್ಚಕರಾದ ಶ್ರೀ ಪಂಡಿತ್ ಅಮಿತ್ ದೇಶ್‍ಮುಕ್ ಅವರು ಹೋಮ, ಹವನ ದೇವತಾ ಕಾರ್ಯಗಳನ್ನು ನೆರವ್ಭೆರಿಸಿದರು. ಬಳಿಕ ತಿ.ನರಸೀಪುರದ ತ್ರಿವೇಣಿ ಸಂಗಮದಿಂದ ಜಲವನ್ನು ತಂದು ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಸಾಯಿಬಾಬಾ ಮಂದಿರಕ್ಕೆ ಕೊಂಡ್ಯೊದು ಸಾಯಿಬಾಬಾರ ವಿಗ್ರಹ ಮತ್ತು ಧ್ಯಾನಾಂಜನೇಯ ಸ್ವಾಮಿ ಪ್ರಾಣ ಪ್ರತಿμÁ್ಠಪನೆ, ಮಂದಿರದ ಮಹಾಕುಂಭಾಭಿμÉೀಕ, ಮಹಾಮಂಗಳಾರತಿ ನಡೆಯಿತು.
ಶನಿವಾರ ಗಣಪತಿ ಹೋಮ, ನವಗ್ರಹ ಹೋಮ, ವಾಸ್ತು ಹೋಮ, ಪ್ರಾಯಶ್ಚಿತ ಹೋಮ ನಡೆದು, ಸಂಜೆ 4 ಕ್ಕೆ ಪ್ರಧಾನ, ಶಾಂತಿ-ಪುಷ್ಟಿ, ಕುಟೀರ ಹೋಮಗಳು, ಪೂಜೆ, ಆರತಿ ನಡೆದವು. ಸಂಜೆ ಹರಿಕಥಾ ವಿದುಷಿ ಡಾ.ಮಾಲಿನಿ ಅವರಿಂದ ಶ್ರೀ ಶಿರಡಿ ಸಾಯಿಬಾಬಾರ ವೈಭವದ ಕಥಾವಲೋಕನ ನಡೆಯಿತು.
ಶಾಸಕರುಗಳಾದ ಸಿ. ಪುಟ್ಟರಂಗಶೆಟ್ಟಿ ಮತ್ತು ಎ.ಆರ್. ಕೃಷ್ಣಮೂರ್ತಿ ಸೇರಿ ಮೂರು ದಿನಗಳಿಂದ ಸಾವಿರಾರು ಭಕ್ತರು ದೇವರ ದರ್ಶನ ಪಡೆದು ಪುನೀತರಾದರು.
ಕಾರ್ಯಕ್ರಮದಲ್ಲಿ ಶಿರಡಿ ಸಾಯಿಬಾಬಾ ಧಾರ್ಮಿಕ ಮತ್ತು ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಕೀಲ ಕೆ. ಬಾಲಸುಬ್ರಹ್ಮಣ್ಯಂ, ಕಾರ್ಯಾಧ್ಯಕ್ಷ ಎಸ್‍ಪಿಕೆ ಉಮೇಶ್, ಕಾರ್ಯದರ್ಶಿ ಆರ್. ರಾಜು ಎಸ್‍ಪಿಕೆ , ಟ್ರಸ್ಟ್‍ನ ಗೌರವಾಧ್ಯಕ್ಷ ಎಂ.ರಾಜು, ಸಹ ಕಾರ್ಯದರ್ಶಿ ಮುರುಗೇಶನ್, ಖಜಾಂಚಿ ಬಾಲರಾಜು, ಸದಸ್ಯರಾದ ವೇದಿ, ಶಕ್ತಿ, ಉತ್ತರಸ್ವಾಮಿ, ಲೊಕೇಶ್ ಎಸ್‍ಪಿಕೆ, ಸುಜನ್ ಟೈಲ್ಸ್ ರಾಮು ಮೊದಲಾದವರು ಇದ್ದರು.