ಚಕ್ರ ಎಸೆತ ಸ್ಪರ್ದೆಯಲ್ಲಿ ಸಂತ ಫ್ರಾನ್ಸಿಸ್ ಶಾಲೆಗೆ ಚಾಂಪಿಯನ್‍ಶಿಪ್
ಸಂಜೆವಾಣಿ ವಾರ್ತೆ
ಚಾಮರಾಜನಗರ ಜೂ.17-ಇತ್ತೀಚೆಗೆ ಉಡುಪಿಯಲ್ಲಿ ನಡೆದ 2024ನೇ ಸಾಲಿನ ರಾಜ್ಯ ಮಟ್ಟದ ಚಕ್ರ ಎಸೆತ ಸ್ಪರ್ದೆಯಲ್ಲಿ ನಗರದ ಸಂತ ಫ್ರಾನ್ಸಿಸ್ ಐಸಿಎಸ್‍ಸಿ ಶಾಲೆಗೆ ಚಾಂಪಿಯನ್‍ಶಿಪ್ ದೊರೆತಿದೆ.
ಕರ್ನಾಟಕ ರಾಜ್ಯ ಸೀನಿಯರ್ ಮತ್ತು 18 ವರ್ಷದೊಳಗಿನ ರಾಜ್ಯ ಮಟ್ಟದ ಸ್ಪರ್ದೆಯನ್ನು ಉಡುಪಿಯ ಅಜ್ಜರ ಕಾಡು ಸ್ಟೇಡಿಯಂನಲ್ಲಿ ಆಯೋಜಿಸಲಾಗಿತ್ತು, ಇಲ್ಲಿ ನಡೆದ ಚಕ್ರ ಎಸೆತ (ಡಿಸ್ಕರ್) ಸ್ಪರ್ದೆಯಲ್ಲಿ ಚಾಮರಾಜನಗರದ ಸಂತ ಫ್ರಾನ್ಸಿಸ್ ಶಾಲೆಯ ವಿದ್ಯಾರ್ಥಿ ಭಾಗವಹಿಸುವ ಮೂಲಕ ಈ ಭಾರಿಯು ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡು ಜಿಲ್ಲೆಗೆ ಕೀರ್ತಿ ತಂದಿದ್ದಾರೆ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪದಕಗಳನ್ನು ಗಳಿಸುವಲ್ಲಿ ಮುಂಚೂಣಿಯಲ್ಲಿದೆ.
ಕೋಚ್ ಶಿವು ಅವರು ವಿದ್ಯಾರ್ಥಿಗಳಿಗೆ ನೀಡಿದ ಸತತ ಅಭ್ಯಾಸದಿಂದ ವಿದ್ಯಾರ್ಥಿನಿ ಎಚ್.ಡಿ. ಭೂಮಿಕ 34.70 ದೂರ ಕ್ರಮಿಸುವ ಮೂಲಕ ಜಿಲ್ಲೆ ಹಾಗೂ ರಾಜ್ಯವನ್ನು ಪ್ರತಿನಿಧಿಸಿರುತ್ತಾಳೆ, ವಿದ್ಯಾರ್ಥಿನಿಯ ಸಾಧನೆಗೆ ಸಂತ ಫ್ರಾನ್ಸಿಸ್ ಐಸಿಎಸ್‍ಸಿ ಶಾಲೆಯ ಪ್ರಾಂಶುಪಾಲ ಪ್ರಭಾಕರ್ ಹರ್ಷ ವ್ಯಕ್ತಪಡಿಸಿದ್ದು ಹಾಗೂ ಶಾಲೆಯ ಶಿಕ್ಷಕೇತರ ಸಿಬ್ಬಂದಿಗಳು ಶುಭ ಕೋರಿದ್ದಾರೆ.