ಮಾತೃ ಭಾಷೆಗೆ ಕಾವ್ಯ ಪರಂಪರೆ ದೊಡ್ಡದು: ಬಿ.ವ್ಹಿ. ಚಕ್ರವರ್ತಿ
ಕಲಬುರಗಿ:ಜೂ.16: ಪ್ರಾಚೀನ ಕಾಲದಿಂದ ಕಲೆ, ಸಾಹಿತ್ಯ ಮತ್ತು ಸಂಸ್ಕøತಿಗೆ ಹೆಸರಾದ ನಮ್ಮ ಕನ್ನಡ ಭಾಷೆಗೆ ದೊಡ್ಡ ಕಾವ್ಯ ಪರಂಪರೆಯಿದೆ ಎಂದು ಚಿಂತಕ ಬಿ.ವ್ಹಿ. ಚಕ್ರವರ್ತಿ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದ ಕನ್ನಡ ಭವನದಲ್ಲಿ ಭಾನುವಾರ ಏರ್ಪಡಿಸಿದ ಕಾವ್ಯ ಕಮ್ಮಟ-2024 ಗೆ ಚಾಲನೆ ನೀಡಿ ಮಾತನಾಡಿದ ಅವರು, ಕಾವ್ಯದ ಉಗಮ ಮತ್ತು ಅದರ ಸ್ವರೂಪಗಳನ್ನು ಆಯಾ ಕಾಲಕ್ಕನುಗುಣವಾಗಿ ಬೆಳೆದು ಬಂದಿದೆ. ಪ್ರಾಚೀನ ಕಾಲದ ಸಾಹಿತ್ಯ ಅವಲೋಕಿಸಿ ಹಳೆಗನ್ನಡ, ನಡುಗನ್ನಡ ಹಾಗೂ ಹೊಸಗನ್ನಡ ಕಾವ್ಯದ ವಸ್ತು ಮತ್ತು ಸಂದರ್ಭದ ಸಂಗತಿಗಳು ಬರಹಗಾರರು ಅರ್ಥೈಸಿಕೊಳ್ಳಬೇಕು. ಇಂಥ ಕಾವ್ಯ ಕಮ್ಮಟಗಳು ಹೆಚ್ಚೆಚ್ಚು ಏರ್ಪಡಿಸಿ ಜಿಲ್ಲೆಯ ಕಾವ್ಯಾಸಕ್ತರಿಗೆ ಅನುಕೂಲ ಮಾಡಿಕೊಡುತ್ತಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ಶ್ಲಾಘನೀಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಕವಿಯಾದವನಿಗೆ ಸಾಮಾಜಿಕ ಬದ್ಧತೆ ಮುಖ್ಯವಾಗಿದೆ ಮತ್ತು ನಮ್ಮ ಬದುಕು ಮತ್ತು ಪ್ರಸ್ತುತ ಸಮಾಜ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕಾವ್ಯ ಹೊರಬೇಕಾಗಿದೆ. ನಮ್ಮ ಪೂರ್ವಜರು ಬಳುವಳಿಯಾಗಿ ಬಿಟ್ಟು ಹೋದ ವಿವಿಧ ಜಾನಪದ ಕಲೆಗಳು ಮತ್ತು ಸಂಸ್ಕøತಿ ಇಂದಿನ ಪೀಳಿಗೆಗೆ ಮನ ಮುಟ್ಟುವಂತೆ ತಿಳಿಸಬೇಕಿದೆ ಎಂದ ಅವರು, ಸಮಾಜದಲ್ಲಿ ಸಾಮಾಜಿಕ ಜಾಗೃತಿ ಮೂಡಿಸುವಂಥ ವೈವಿಧ್ಯಮಯ ಕಾರ್ಯಕ್ರಮಗಳನ್ನು ಪರಿಷತ್ತು ನಿರಂತರವಾಗಿ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಜಿಪಂ ನ ಮಾಜಿ ಸದಸ್ಯ ರಾಮಲಿಂಗರೆಡ್ಡಿ ದೇಶಮುಖ ಕೋಡ್ಲಿ, ಜಿಲ್ಲಾ ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಬಿ.ಎಸ್. ದೇಸಾಯಿ, ನ್ಯಾಯವಾದಿ ಸುರೇಶ ಪಾಟೀಲ ಜೋಗೂರ ಮಾತನಾಡಿದರು. ಜಿಲ್ಲಾ ಕಸಾಪ ದ ಗೌರವ ಕಾರ್ಯದರ್ಶಿ ಧರ್ಮಣ್ಣ ಎಚ್ ಧನ್ನಿ, ಕೋಶಾಧ್ಯಕ್ಷ ಶರಣರಾಜ್ ಛಪ್ಪರಬಂದಿ, ರಮೇಶ ಡಿ ಬಡಿಗೇರ, ಸಿದ್ಧಲಿಂಗ ಜಿ ಬಾಳಿ, ರವೀಂದ್ರಕುಮಾರ ಭಂಟನಳ್ಳಿ, ರಾಜೇಂದ್ರ ಮಾಡಬೂಳ, ಧರ್ಮರಾಜ ಜವಳಿ, ರವಿಕುಮಾರ ಶಹಾಪುರಕರ್, ಬಾಬುರಾವ ಪಾಟೀಲ, ಎಂ ಎನ್ ಸುಗಂಧಿ ಉಪಸ್ಥಿತರಿದ್ದರು.
ಕನ್ನಡ ಕಾವ್ಯದ ಸ್ವರೂಪ ವೈವಿಧ್ಯ ಕುರಿತು ಮಾತನಾಡಿದ ಉಸ್ಮಾನಿಯಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಲಿಂಗಣ್ಣ ಗೋನಾಲ, ಹಳೆಗನ್ನಡ ಸಾಹಿತ್ಯದಿಂದ ಶರಣರು, ಸಂತರು ರಚಿಸಿದ ಆಯಾ ಕಾಲಘಟ್ಟದ ಸಾಹಿತ್ಯ ಪರಂಪರೆ ಇಂದಿನ ಆಧುನಿಕ ಸಾಹಿತ್ಯ ಕೃಷಿಯ ಮೇಲೆ ಪರಿಣಾಮ ಬೀರಿದೆ. ಜೀವನದ ಸಂಗತಿಗಳು, ವಾಸ್ತವ ಸನ್ನಿವೇಶಗಳನ್ನು ಸೆರೆ ಹಿಡಿದು ಭಾಷೆಯ ಸೊಗಡಿನಿಂದ ಕಾವ್ಯ ಹುಟ್ಟಬೇಕು. ಕನ್ನಡದ ಕವಿರಾಜಮಾರ್ಗ ಕೃತಿ, ಸಾಹಿತ್ಯ ಪರಂಪರೆ ಮತ್ತು ವೈವಿಧ್ಯತೆಗೆ ಶ್ರೇಷ್ಠ ಗ್ರಂಥವಾಗಿದೆ ಎಂದರು.
ವಿದ್ಯಾಸಾಗರ ದೇಶಮುಖ, ವಿಶ್ವನಾಥರೆಡ್ಡಿ ಕಾಮರೆಡ್ಡಿ ಗೋಟೂರ, ದೇವೀಂದ್ರ ಮೇಲಕೇರಿ ಧಂಗಾಪೂರ ಉಪಸ್ಥಿತರಿದ್ದರು.
ಕನ್ನಡ ಭಾಷೆ ಮತ್ತು ಶೈಲಿ ಕುರಿತು ಮಾತನಾಡಿದ ಸಾಹಿತಿ ಜಗನ್ನಾಥ ಎಲ್ ತರನಳ್ಳಿ, ಮನಮುಟ್ಟುವ ರೀತಿಯಲ್ಲಿ ಮನಸ್ಸಿನ ಮೇಲೆ ಪರಿಣಾಮ ಬೀರುವ ಶೈಲಿಯೇ ಕಾವ್ಯದ ಭಾಷೆ ಆಗಬಲ್ಲದು. ಪದಗಳ ಸಂಯೋಜನೆ ಮತ್ತು ಸುಂದರವಾಗಿ ಪೋಣಿಸಿ ಹೆಣೆಯುವ ರೀತಿ ಕಾವ್ಯ ಎನಿಸಿಕೊಳ್ಳುತ್ತದೆ. ಅಂಥ ಕಾವ್ಯದ ತುಡಿತ ನಮ್ಮದಾಗಬೇಕು ಎಂದು ಸಲಹೆ ನೀಡಿದರು.
ನರಸಿಂಗರಾವ ಹೇಮನೂರ, ಎಸ್. ಬಿ. ಪಾಟೀಲ ತಡಕಲ್, ಸಾಹೇಬಗೌಡ ಎಂ ಕಡ್ಲಿ ಅವರಾದ,
ಕಾವ್ಯ ರಚನೆಯ ಹೊಸ ಸವಾಲುಗಳು ಕುರಿತು ಮಾತನಾಡಿದ ಪತ್ರಕರ್ತ-ಸಾಹಿತಿ ಡಾ. ಶಿವರಂಜನ್ ಸತ್ಯಂಪೇಟೆ, ಕವಿಯಾದವರು ಉತ್ತಮ ಓದಾಳಿಯಾಗಿರಬೇಕು. ಅನುಭವ ಹೊಂದಿರಬೇಕು. ನಾನೇಕೆ ಬರೆಯುತ್ತೇನೆ? ಯಾಕಾಗಿ ಬರೆಯುತ್ತೇನೆ? ಯಾರಿಗಾಗಿ ಬರೆಯುತ್ತೇನೆ ಎಂಬುದನ್ನು ಅರಿತು ಕಾವ್ಯ ರಚನೆಯಲ್ಲಿ ತೊಡಗಬೇಕು ಎಂದು ತಿಳಿಸಿಕೊಟ್ಟರು. ಕಾವ್ಯ ಸಂದೇಶ ಕೊಡುವಂತಿರಬೇಕು. ಜೀವಪರ, ಜನಪರವಾಗಿರಬೇಕು. ಕವಿಯಾದವ ಕಲಿಯೂ ಆಗಿರಬೇಕು ಎಂದರು.
ಹಾಸ್ಯ ಕಲಾವಿದ ಗುಂಡಣ್ಣ ಡಿಗ್ಗಿ¸ಉಪನ್ಯಾಸಕ ಪ್ರೊ. ಅಮರೇಶ ಹಾಲ್ವಿ, ಡಾ. ರೆಹಮಾನ್ ಪಟೇಲ್, ಜ್ಯೋತಿ ಕೋಟನೂರ, ದೇವಯ್ಯಾ ಗುತ್ತೇದಾರ ಉಪಸ್ಥಿತರಿದ್ದರು.
ಕಾವ್ಯಾಭಿವ್ಯಕ್ತಿಯ ವಿಭಿನ್ನ ಮಾದರಿಗಳು ಕುರಿತು ಮಾತನಾಡಿದ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯೆ ಡಾ. ಚಂದ್ರಕಲಾ ಬಿದರಿ, ಕಾವ್ಯ ಕಟ್ಟುವುದು ಒತ್ತಡದಿಂದ ಬರುವಂಥದಲ್ಲ. ಅದು ಸತತ ಪ್ರಯತ್ನ ಹಾಗೂ ಅಧ್ಯಯನದಿಂದ ಕಾವ್ಯ ಹುಟ್ಟುತ್ತದೆ. ಕಾವ್ಯ ಹುಟ್ಟಿ ಸಾವನ್ನಪ್ಪಬಹುದು. ಆದರೆ ಮನಸ್ಸಿನಲ್ಲಿ ಮೂಡಿದ ಕಾವ್ಯದ ಭಾವ ಅಲ್ಲಿಯೇ ಸಾವನ್ನಪ್ಪಬಹುದು. ಶಬ್ದ ಮತ್ತು ಅರ್ಥಗಳು ಕೂಡಿದಾಗ ಕಾವ್ಯ ರಚನೆಯಾಗಬಲ್ಲದು. ಹೆಚ್ಚೆಚ್ಚು ಓದಬೇಕು. ಬರೆದುದೆಲ್ಲ ಕಾವ್ಯವಾಗಲಾರದು. ಗಟ್ಟಿ ಸಾಹಿತ್ಯಕ್ಕೆ ಅಧ್ಯಯನಶೀಲರಾಗಬೇಕು ಎಂದು ತಿಳಿಸಿದರು.
ಗುರುಶಾಂತಪ್ಪ ಓಗಿ, ಬಸವರಾಜ ಹೆಳವರ, ಮಹೇಶ ಚಿಂತನಪಳ್ಳಿ ಉಪಸ್ಥಿತರಿದ್ದರು.
ಪ್ರಮುಖರಾದ ಗಣೇಶ ಚಿನ್ನಾಕಾರ, ಎಸ್ ಕೆ ಬಿರಾದಾರ, ಶರಣಬಸಪ್ಪ ಕೋಬಾಳ, ಸುರೇಶ ದೇಶಪಾಂಡೆ, ಮಂಜುನಾಥ ಕಂಬಾಳಿಮಠ, ನವಾಬ್ ಖಾನ್, ಸೈಯದ್ ನಜಿರುದ್ದೀನ್ ಮುತ್ತವಲಿ, ಮಧುಸೂಧನ್ ಚಿಂತನಪಳ್ಳಿ, ಶಾಮಸುಂದರ ಕುಲಕರ್ಣಿ, ಧರ್ಮರಾಜ ಜವಳಿ, ಸೋಮಶೇಖರಯ್ಯಾ ಹೊಸಮಠ, ಬಸಯ್ಯ ಸ್ವಾಮಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.