ನ್ಯಾಯಾಂಗ, ವೇದಾಂತ ಶಾಸ್ತ್ರದ ದಾರ್ಶನಿಕರು ಮಹರ್ಷಿ ಶ್ರೀಯಾಜ್ಞವಲ್ಕ್ಯರು
ಕಲಬುರಗಿ:ಜೂ.16:ಶ್ರೀ ಯಾಜ್ಞವಲ್ಕ್ಯ ನ್ಯಾಯಾಂಗ ಶಾಸ್ತ್ರ, ವೇದಾಂತ ಶಾಸ್ತ್ರ, ಅನೇಕ ಉಪನಿಷತ್ತುಗಳು, ಗ್ರಂಥಗಳನ್ನು ನೀಡಿ ನಮ್ಮನ್ನು ಪುನೀತರನ್ನಾಗಿಸಿದ್ದಾರೆ. ಮುಖ್ಯವಾಗಿ ಬೃಹದಾರಣ್ಯಕ ಉಪನಿಷತ್ತು ಹಾಗೂ ಈಶಾವಾಸ್ಯ ಉಪನಿಷತ್ತು ಗಳ್ಳಲ್ಲಿ ನಮ್ಮ ಜೀವನದ ಕ್ರಮವನ್ನು ತಿಳಿಸಿದ್ದಾರೆ. ಭಗವಂತನ ವಿಷಯವಾದ ಧ್ಯಾನ ವಿಷಯ ಶಕ್ತಿಗಳಲ್ಲಿ ವಿರಕ್ತಿ ಇವೆಲ್ಲದರ ಬಗ್ಗೆ ತಿಳಿಸಿದ್ದಾರೆ. ಶ್ರೀ ವಿಜ್ಞಾನೇಶ್ವರರು ಶ್ರೀ ಯಾಜ್ಞವಲ್ಕ್ಯ ಸ್ಮೃತಿ ಗೆ ಬಾಷ್ಯ ಬರೆದಿದ್ದಾರೆ. ಯಾಜ್ಞವಲ್ಕ್ಯರಂತಹ ಗುರುಗಳನ್ನು ಪಡೆದ ನಾವೆಲ್ಲರೂ ಧನ್ಯರು ಎಂದು ಶ್ರೀ ಮಾತನಾಡಿದರು.
ಪ್ರತಿವರುಷದಂತೆ ಕ್ರೋಧಿನಾಮ ಸಂವತ್ಸರದ ಜೇಷ್ಟಶುದ್ಧ ದಶಮಿ ದಿನಾಂಕ 16 ಜೂನ್ 2024, ಭಾನುವಾರದಂದು ಶ್ರೀ ಶ್ರೀ 1008 ಶ್ರೀ ವಿದ್ಯಾಕಣ್ವವಿರಾಜತೀರ್ಥ ಶ್ರೀಪಾಂದಂಗಳವರ ಅನುಗ್ರಹಾಜ್ಞೇಯದೊಂದಿಗೆ ಸಂಗಮೇಶ್ವರ ಬಡಾವಣೆಯ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಶ್ರೀಯೋಗೀಶ್ವರ ಯಾಜ್ಞವಲ್ಕ್ಯಗುರುಗಳ ಜಯಂತಿ ಎಂದು ನಡೆದ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದ ವೇದಮೂರ್ತಿ ಶ್ರೀ ಆಕಾಶರಾಜಾಚಾರ್ಯ ಶ್ರೀ ಯೋಗೀಶ್ವರ ಯಾಜ್ಞವಲ್ಕ್ಯರು ಸ್ಮೃತಿಕಾರರು,ಉಪನಿಷತ್ಕಾರರು,ಮಹಾನ್ ಯೋಗಕಾರರು,ಶುಕ್ಲಯಜುರ್ವೇದ ಪ್ರವಕ್ತಾರರು ಎಂದರು.
ಶ್ರೀಯಾಜ್ಞವಲ್ಕ್ಯ ಗುರುಗಳ ಜಯಂತಿ ಅಂಗವಾಗಿ ಬೆಳಿಗ್ಗೆ ಸುಪ್ರಭಾತ ನೈರ್ಮಲ್ಯ ವಿಸರ್ಜನೆ, ಶ್ರೀಯೋಗೀಶ್ವರ ಯಾಜ್ಞವಲ್ಕ್ಯ ಗುರುಗಳ ಸಾಮೂಹಿಕ ಅಷ್ಟೋತ್ತರ ಶತನಾಮ ಪಾರಾಯಣ ಹಾಗೂ ಶ್ರೀ ಸತ್ಯಪ್ರಮೋದತೀರ್ಥ ಪಾರಾಯಣ ಸಂಘದಿಂದ ಪಾರಾಯಣ, ಶ್ರೀ ಮೈತ್ರಿಯಿ ಭಜನಾ ಮಂಡಳಿಯಿಂದ ಪಲ್ಲಕ್ಕಿ ಉತ್ಸವ, ಗ್ರಾಮ ಪ್ರದಕ್ಷಣೆ, ಮಾತೇಯರಿಂದ ಕೋಲಾಟ, ಭಜನೆ ನಡೆಯಿತು, ವೇದಮೂರ್ತಿಗಳಾದ ಶ್ರೀ ಆಕಾಶರಾಜಾಚಾರ್ಯ ಶ್ರೀರಾಮಾಚಾರ್ಯ, ಅಭಯಾಚಾರ್ಯರ ವೈದಿಕತ್ವದಲ್ಲಿ ಪರ್ಜನ್ಯ ಹೋಮ ನೆರವೇರಿತು.
ನಂತರ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸಮಿತಿ ವತಿಯಿಂದ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಡಾ. ಭುರ್ಲಿ ಪ್ರಹ್ಲಾದ ಮಾತನಾಡಿ ಗುರುಗಳ ಜಯಂತಿಯಂದು ಪ್ರತಿಭಾವಂತ ಮಕ್ಕಳಿಗೆ ಸನ್ಮಾನಿಸಿರುವುದು ಅತ್ಯಂತ ಶ್ರೇಷ್ಠ ಹಾಗೂ ಗುರುಗಳ ಅನುಗ್ರಹ ಮಕ್ಕಳಿಗೆ ಸಂಪೂರ್ಣವಾಗಿ ದೊರೆಯಲಿ ಎಂದು ಹರಸಿದರು.
ವಿದ್ಯಾರ್ಥಿಗಳು ದಿನಪತ್ರಿಕೆಯನ್ನು ಓದುವುದು ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು ಮೊಬೈಲ್ ಹಾಗೂ ಟಿವಿಯಿಂದ ದೂರ ಇರಬೇಕು ಎಂದ ಸಲಹೆ ನೀಡಿದರು.
ಸಮಿತಿ ಅಧ್ಯಕ್ಷರಾದ ಶ್ರೀಮಲ್ಹಾರಾವ ಕುಲಕರ್ಣಿ ಗಾರಂಪಳ್ಳಿ ಮಾತನಾಡಿ ಶ್ರೀಯಾಜ್ಞವಲ್ಕ್ಯರದ್ದು ಬಹುಮುಖಿ ವೈವಿಧ್ಯಮಯ ವ್ಯಕ್ತಿತ್ವ, ಶುಕ್ಲ ಯಜುರ್ವೇದ, ಸ್ಮೃತಿ, ಉಪನಿಷತ್ತು ಹಾಗೂ ಯೋಗದ ಕುರಿತು ಕೃತಿಗಳನ್ನು ರಚಿಸಿದ್ದಾರೆ, ಮಹಿಳೆಯರಿಗೆ ಯೋಗಶಾಸ್ತ್ರದ ಬಗ್ಗೆ ಹಾಸನಗಳನ್ನು ತಿಳಿಸಿಕೊಟ್ಟೆ ಮೊದಲ ಋಷಿ ಎನಿಸಿಕೊಂಡಿದ್ದಾರೆ. ಶ್ರೀ ಶ್ರೀಯಾಜ್ಞವಲ್ಕ್ಯರ ಜಯಂತಿಯಂದು ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಪ್ರೋತ್ಸಾಹಿಸಲಾಗುತ್ತಿದೆ ಎಂದು ಹೇಳಿದರು.
ಕಾರ್ಯದರ್ಶಿಗಳಾದ ರಾಘವೇಂದ್ರ ವಕೀಲ್, ಅಪ್ಪಾರಾವ್ ಕುಲಕರ್ಣಿ ಮಂದಾರವಾಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ, ಶೇಷ ವಸ್ತ್ರ ನೀಡಿ ಸನ್ಮಾನಿಸಿದರು.
ಸಮಿತಿಯ ಹಿರಿಯರಾದ ಶ್ರೀ ಚಂದ್ರಕಾಂತ್ ಗದಾರ್, ಶ್ರೀರಾಮಾಚಾರ್ಯ ಅಗ್ನಿಹೋತ್ರಿ, ಶಾಮಾಚಾರ್ಯ ಬೈಚಬಾಳ್, ಅಶೋಕ್ ಮಳ್ಳಿ, ಭೀಮರಾವ್ ಕುಲಕರ್ಣಿ, ವೆಂಕಟೇಶ್ ಕುಲಕರ್ಣಿ, ಭೀಮಸೇನರಾವ್ ಸಿಂಧಗೇರಿ, ತಿರುಮಲರಾವ ದೊಟಿಹಾಳ, ಪ್ರಾಣೇಚಾರ್ಯ ಬೈಚಬಾಳ್, ವಾಸುದೇವರಾವ್ ಕುಳಗೇರಿ, ಪ್ರಲ್ಲಾದ್ ದೇವರು, ದಯಾಘನ್ ಧಾರ್ವಾಡ್ಕರ್, ಶಾಮರಾವ್ ಕುಲಕರ್ಣಿ, ಗುಂಡೂರಾವ್ ಕುಲಕರ್ಣಿ, ಮಂಜುನಾಥ್ ಕುಲಕರ್ಣಿ, ಶ್ರೀಧರ್ ಕುಲಕರ್ಣಿ, ವಿನುತ ಜೋಶಿ, ಮಾರ್ಥಾಂಡ ಹೇಮನೂರ್, ವಾಸುದೇವರಾವ ಸಿಂಧಗೇರಿ, ಭಾರತೀಶ್ ಕುಲಕರ್ಣಿ, ಅಶ್ವಥ್ ಜೋಶಿ, ದತ್ತಾತ್ರೆಯ ಸಬ್ನವಿಸ್, ಮಂದಾರ ಸರಾಫ್, ಅವಧೂತ ಕುಲಕರ್ಣಿ ಇದ್ದರು.