ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದ ಯುವಕರು
ಗುಳೇದಗುಡ್ಡ,ಜೂ.16: ಮಾಹೇಶ್ವರಿ ಸಮಾಜದ 5157ನೇ ವರ್ಷದ ಉತ್ಪತ್ತಿ ದಿವಸದ ಅಂಗವಾಗಿ ಕರ್ನಾಟಕ ಗೋವಾ ಪ್ರಾಂತೀಯ ಯುವ ಸಂಘಟನೆ ಮತ್ತು ಸ್ಥಳೀಯ ಮಾಹೇಶ್ವರಿ ಯುವ ಸಂಘಟನೆಯು ಬಾದಾಮಿಯ ಶ್ರೀ ಬನಶಂಕರಿ ಬ್ಲಡ್ ಬ್ಯಾಂಕ್ ಸಹಯೋಗದೊಂದಿಗೆ ಶನಿವಾರ ಪಟ್ಟಣದ ಹೊಸ ಬಾಲಾಜಿ ಪಂಚಾಯತ್ ಭವನದಲ್ಲಿ ಹಮ್ಮಿಕೊಂಡಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಮಾಹೇಶ್ವರಿ ಸಮಾಜದ ಅಖಿಲ ಭಾರತೀಯ ಕಾರ್ಯಕಾರಣಿ ಸದಸ್ಯ ಕಮಲಕಿಶೋರ ಮಾಲಪಾಣಿ ಶಿಬಿರವನ್ನು ಉದ್ಘಾಟಿಸಿದರು.
ಶಿಬಿರದಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ಜನರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು. ಈ ಸಂದರ್ಭದಲ್ಲಿ ಸಂಘಟನೆಯ ಅಧ್ಯಕ್ಷ ದೀಪಕ ದೂತ, ಕಾರ್ಯದರ್ಶಿ ಭರತಕುಮಾರ ದೂತ, ಸಂಘದ ಬಾಗಲಕೊಟ, ಬಿಜಾಪೂರ ಸಂಯುಕ್ತ ಜಿಲ್ಲಾ ಕಾರ್ಯದರ್ಶಿ ಅನೂಪ ತಾಪಡಿಯಾ, ಬನಶಂಕರಿ ಬ್ಲಡ್ ಬ್ಯಾಂಕ್‍ನ ಮುಖ್ಯಸ್ಥ ಕಲ್ಲಪ್ಪ ಅಮೀನಬಾವಿ, ಭರತಕುಮಾರ ಧರಕ, ಗೋಪಾಲದಾಸ ಮಾಲಪಾಣಿ, ಕಮಲಕಿಶೋರ ಮಾಲಪಾಣಿ, ಕಮಲಕಿಶೋರ ತಾಪಡಿಯಾ, ಸಂತೋಷ ಮಂತ್ರಿ, ಸುಮನಬಾಯಿ ದೂತ, ಲತಾ ತಾಪಡಿಯಾ, ಶರಿಯೂ ಜಾಜು, ಕಿಶೋರ ಸೋನಿ, ಲಖನ್ ಉಪಾಧ್ಯ, ಡಾ. ಶ್ರೀಕಾಂತ ಸೋನಿ ಮತ್ತಿತರರು ಇದ್ದರು.