ಸಸಿ ನೆಟ್ಟ ನಿಮಗಾಗಿ ನಾವು ಸಂಸ್ಥೆ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜೂ.16: ನಗರದ ನಿಮಗಾಗಿ ನಾವು ಸಂಸ್ಥೆಯ ನಮ್ಮ ಪರಿಸರ  ಸಸಿ ನೆಡುವ ಮತ್ತು ವಿತರಿಸುವ ಕಾರ್ಯಕ್ರಮದಡಿ ಇಂದು ಇಲ್ಲಿನ ರಾಘವೇಂದ್ರ ಮತ್ತು ರಾಯಲ್ ಕಾಲೋನಿ ಸಸಿ ನೆಡಲಾಯ್ತು.
ಸತತ ಒಂಭತ್ತನೇ ವರ್ಷದ “ನಮ್ಮ ಪರಿಸರ” ಯೋಜನೆಯಡಿ  ಇದನ್ನು ಕೈಗೊಂಡಿದೆ. ಸಂಸ್ಥೆಯ ಅಧ್ಯಕ್ಷ ವಿನಯ್ ಈ ವೇಳೆ  ಮಾತಾಡಿ ನಮ್ಮ  ಸಂಸ್ಥೆಯಿಂದ ಮಳೆಗಾಲದಲ್ಲಿ   ಪ್ರತಿ ಭಾನುವಾರ ಸಸಿಗಳನ್ನು ನೆಡಲಿದ್ದೇವೆ ಜೊತೆಗೆ ಗಿಡ ಮರ ಬೆಳೆಸುವವರಿಗೆ  ಸಸಿಗಳನ್ನು ನೀಡಲಿದ್ದೇವೆ ಎಂದು ತಿಳಿಸಿದರು.
ಕಾರ್ಯನಿರ್ವಾಹಕರಾದ ನಾಗರಜ್ ಮಾತಾಡಿ, ಮನೆಮನೆಗೂ ಮರ ಅನ್ನುವ ರೀತಿಯಲ್ಲಿ ಸಂಸ್ಥೆಯು ಕೆಲಸ ಮಾಡುತ್ತಿದ್ದು ಎಲ್ಲರ ಸಹಕಾರ ಅತ್ಯಗತ್ಯ ಎಂದರು.
ಈ ಸಂಧರ್ಭದಲ್ಲಿ  ಸಂಜೀವಪ್ಪ ಪ್ರ.ದ.ಸ ಕಾರಗೃಹ ಇಲಾಖೆ ರವರು ನಿಮಗಾಗಿ ನಾವು ಸಂಸ್ಥೆಯ ಯೋಜನೆಯು ತುಂಬಾ ಅರ್ಥಪೂರ್ಣವಾಗಿದ್ದು ಈ ಮಳೆಗಾಲ ಪೂರ್ತಿ ಗಿಡ ನೆಡುವ ಇವರ ಬದ್ಧತೆ, ಆಸಕ್ತಿ ನಮಗೆಲ್ಲಾ ಮಾದರಿ ಎಂದರು.
ಪೂರ್ಣಿಮಾ ಜೆ.ಎಸ್ ಶಿಕ್ಷಕರು ಮಾತಾಡಿ ಸಮಾಜಮುಖಿ ಕೆಲಸಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡ ಸಂಸ್ಥೆಗೆ ಸಾರ್ವಜನಿಕರು ಹಾಗೂ ಸರ್ಕಾರವೂ ಬೆಂಬಲ ನೀಡಬೇಕೆಂದರು.
ಸಸಿನೆಡುವ ಕಾರ್ಯದಲ್ಲಿ  ಸತ್ಯಪ್ರಕಾಶ್ ಪ್ರಾಚಾರ್ಯರು ಹಾಗೂ ಸಂಸ್ಥೆಯ ಕಾರ್ಯನಿರ್ವಾಹಕರಾದ ಮೆಹಬೂಬ್ ಭಾಷ, ನಾಗರಾಜ್, ಅನಿಲ್, ವಿನಯ್, ಗೋಡೆ ಶಿವರಾಜ್, ಶಿವಪ್ರಸಾದ್ ,ಮಾರುತಿ ದಕ್ಷಿಣಮೂರ್ತಿ, ಬಾಲಸುಬ್ರಮಣ್ಯ,ಸುಧನ್ವ ಪಾಲ್ಗೊಂಡಿದ್ದರು.