ಯೋಗಾಸಕ್ತರಿಗಾಗಿ ಸೈಕಲ್ ಜಾಥಾ

ಸಂಜೆವಾಣಿ ವಾರ್ತೆ
ದಾವಣಗೆರೆ. ಜೂ.೧೬; ಜಿಲ್ಲಾ ಆಯುಷ್ ಇಲಾಖೆ, ಜಿಲ್ಲಾ ಯೋಗ ಒಕ್ಕೂಟ  ಬೈಸಿಕಲ್‌ ಕ್ಲಬ್ (ರಿ.) ಸಹಯೋಗದಲ್ಲಿ 10 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಅಂಗವಾಗಿ ಸಾರ್ವಜನಿಕರಿಗೆ ಹಾಗೂ ಯೋಗಾಸಕ್ತರಿಗಾಗಿ ಸೈಕಲ್ ಜಾಥಾ ಕಾರ್ಯಕ್ರಮವನ್ನು ದಾವಣಗೆರೆಯ ಜಯದೇವ ವೃತ್ತದಿಂದ ಚಾಲನೆ ನೀಡಲಾಯಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಉಮಾ ಪ್ರಶಾಂತ್  ನೆರವೇರಿಸಿದರು.ಮುಖ್ಯ ಅತಿಥಿಗಳಾಗಿ  ಜಿಲ್ಲಾ ಆಯುಷ್ ಅಧಿಕಾರಿಗಳಾದ ಡಾ. ಯೋಗೇಂದ್ರ ಕುಮಾರ್ ಬಿ.ಯು.  ಡಾ. ಟಿ.ಎಂ.ರಾಜೇಂದ್ರ ಪ್ರಸಾದ್ ,  ಕೆ.ಎಸ್.ಮಹೇಶ್  ಉಪಸ್ಥಿತರಿದ್ದರು.ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಯೋಗ ಒಕ್ಕೂಟದ ಅಧ್ಯಕ್ಷ ಲ. ವಾಸುದೇವ ರಾಯ್ಕರ್ ವಹಿಸಿದ್ದರು.ಈ ವೇಳೆ ಇಂಧನ ಉಳಿಸಿ ಆರೋಗ್ಯ ಗಳಿಸಿ ಎಂಬ ಘೋಷ ವಾಕ್ಯಗಳ ಸಂದೇಶಗಳನ್ನು ಸಾರುತ್ತ ದಾವಣಗೆರೆ ಮುಖ್ಯ ರಸ್ತೆಗಳಲ್ಲಿ ಸಂಚರಿಸಿ ಯೋಗ ಜಾಗೃತಿ ಮೂಡಿಸಲಾಯಿತು.