ಚೋರನೂರು ಗ್ರಾಮಕ್ಕೆ ವಿದ್ಯುತ್ ಪೂರೈಕೆಗೆ ಒತ್ತಾಯ
ಸಂಜೆವಾಣಿ ವಾರ್ತೆ
ಸಂಡೂರು: ಜೂ; 16: ನಿತ್ಯ ವಿದ್ಯುತ್ ಕೊರತೆ, ಒಂದಲ್ಲ ಒಂದು ಕಾರಣಕ್ಕೆ ವಿದ್ಯುತ್ ಕಡಿತವಾಗಿದ್ದು ರಾತ್ರಿ ಸಮಯದಲ್ಲಿ ಗ್ರಾಮದಲ್ಲಿ ಕಳ್ಳತನ ಇತರ ಸಮಸ್ಯೆಗಳು ಹೆಚ್ಚಾಗಲು ಕಾರಣವಾಗುತ್ತಿದೆ, ರೈತರು ಕೃಷಿ ಚಟುವಟಿಕೆ ಮಾಡದಂತಹ ದುಸ್ಥಿತಿ ಉಂಟಾಗಿದೆ ಅದ್ದರಿಂದ ತಕ್ಷಣ ಪ್ರತ್ಯೇಕ ಫೀಡರ್ ವ್ಯವಸ್ಥೆ ಮಾಡುವ ಮೂಲಕ ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಗ್ರಾಮ ಪಂಚಾಯತಿ ಅಧ್ಯಕ್ಷ ಅಂಜಿನಮ್ಮ ಒತ್ತಾಯಿಸಿದರು.
ಅವರು ತಾಲೂಕಿನ ವಿದ್ಯುತ್ ವಿತರಣಾ ಕೇಂದ್ರದ ಮುಂಬಾಗದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರು, ಗ್ರಾಮ ಪಂಚಾಯಿತಿ ಅಧ್ಯಕ್ಷರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು ಈ ಸಂದರ್ಭದಲ್ಲಿ ಅವರು ಮಾತನಾಡಿ ಪದೇ ಪದೇ ವಿದ್ಯುತ್ ಕಡಿತದಿಂದ ಮನೆಯಲ್ಲಿ ರೆಪ್ರೀಜಿರೇಟರ್‍ಗಳು, ಟಿ.ವಿಗಳು, ವಿದ್ಯಾರ್ಥಿಗಳು ಬಳಸುವ ಕಂಪ್ಯೂಟರ್‍ಗಳು, ರೈತರಿಗೆ ಬೇಕಾಗುವ ಕೃಷಿ ಕೇಂದ್ರದ ಕಂಪ್ಯೂಟರ್‍ಗಳು ಕೆಲಸ ಮಾಡುತ್ತಿಲ್ಲ, ಅಲ್ಲದೆ ಸಂಪರ್ಕ ಕಡಿತ ವೆಂಬ ಬೋರ್ಡನ್ನು ನೋಡಿ ರೈತರು ಬೀಜ ಗೊಬ್ಬರಕ್ಕಾಗಿ ಕಾದು ಕುಳಿತು ಹಾಗೆಯೇ ಮನೆಗಳಿಗೆ ಹೋಗಬೇಕಾಗಿದೆ, ಅದರಲ್ಲೂ ಪಹಣೆ ಬೇಕು ಎಂದರೆ ದಿನಗಟ್ಟಲೇ ಕಾಯಬೇಕಾದ ಸ್ಥಿತಿ ಕಾರಣ ಕರೆಂಟ್ ಇಲ್ಲವೆನ್ನುವ ಫಲಕ ಅದ್ದರಿಂದ ತಕ್ಷಣ ಸರಿಯಾಧ ರೀತಿಯಲ್ಲಿ ವ್ಯವಸ್ಥೆ ಮಡುವ ಮೂಲಕ ಪ್ರತ್ಯೇಕ ಫೀಡರ್ ಹಾಕಿ ನಿರಂತರ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಈ. ಶಿವಣ್ಣ, ಟಿ.ವೆಂಕಟೇಶ್, ಹೆಚ್.ಎಂ. ಸುರೇಶ್, ಸಿ.ಅರ್. ವಸಂತಕುಮಾರ್, ರುದ್ರೇಶ್ ಕುಮಾಋ, ಶ್ರೀನಿವಾಸ ಮುಂತಾದವರು ಪ್ರತ್ಯೇಕ ಫೀಡರ್‍ಗಾಗಿ ಪ್ರತಿಭಟನೆ ನಡೆಸಿ ಗ್ರಾಮಕ್ಕೆ ವಿಶೇಷ ಲೈನ್ ಮನ್ ನೇಮಿಸಬೇಕು, ಫೀಡರ್ ವ್ಯವಸ್ಥೆ ಮಾಡಬೇಕು, ಈ ಬೇಡಿಕೆ ಈಡೇರದೇ ಇದ್ದಲ್ಲಿ 15 ದಿನಗಳ ನಂತರ ತಾಲೂಕು ಕೇಂದ್ರದಲ್ಲಿ ತೀವ್ರವಾದ ಹೋರಾಟವನ್ನು ಮಾಡುತ್ತೇವೆ ಎಂದು ಎಚ್ಚರಿಸಿ ಉಮೇಶ್ ಕುಮಾರ ಅವರಿಗೆ ಮನವಿ ಪತ್ರ ಸಲ್ಲಿಸಿದರು.
One attachment • Scanned by Gmail