ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಜನಮಂಗಲ ಕಾರ್ಯಕ್ರಮ
ಸಂಜೆವಾಣಿ ವಾರ್ತೆ
ಸಿರುಗುಪ್ಪ, ಜೂ.16: ನಗರದ ದಿವ್ಯಜ್ಯೋತಿ ವೃದ್ಧಾಶ್ರಮದಲ್ಲಿ ಅಸಹಾಯಕ ವಯೋ ವೃದ್ಧರು ಆಶ್ರಯ ಪಡೆದಿದ್ದು ಪ್ರತಿದಿನದ  ನಿತ್ಯ ಕರ್ಮಗಳನ್ನು ಪೂರೈಸಿಕೊಳ್ಳಲು ಅತ್ಯಾವಶ್ಯಕವಾಗಿರುವ ವೀಲ್ ಚೆರ್, ವೀಲ್ ಚೆರ್ ವಿಥ್ ಕಾಬೋರ್ಡ್, ಯು ಶೇಪ್ ವಾಕರ್, ವಾಕಿಂಗ್ ಸ್ಟಿಕ್  ಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಮಂಗಲ ಕಾರ್ಯಕ್ರಮದಡಿಯಲ್ಲಿ     50.000 ಮೌಲ್ಯದ ಪರಿಕರಗಳ ವೃದ್ಧರಿಗೆ ವಿತರಣೆ ಮಾಡಯಿತು.
ಯೋಜನೆಯ ಜಿಲ್ಲಾ ನಿರ್ದೇಶಕರಾದ ರೋಹಿತಾಕ್ಷರವರು ಮಾತನಾಡಿ ಜನಮಂಗಲ ಕಾರ್ಯಕ್ರಮ  ಪ್ರಾರಂಭಗೊಂಡ ದೇಯೋದ್ದೇಶ  ಪರಮಪೂಜ್ಯ ಡಾ llಡಿ ವೀರೇಂದ್ರ ಹೆಗ್ಗಡೆರವರು ಅಸಹಾಯಕರ ನೆರವಿಗಾಗಿ ದೂರದೃಷ್ಟಿಕೋನ ವಿಚಾರದಲ್ಲಿ ವೃದ್ಧಾಶ್ರಮದ ಸದಸ್ಯರ ಕಾಳಜಿ ಅರಿತು ಮಂಜುರಾತಿ ಮಾಡಿದ್ದು ಈ ದಿನ ವಿತರಣೆಯಾದ ಸಲಕರಣೆಗಳು ವೃದ್ಧಾಶ್ರಮದ ಸದಸ್ಯರಿಗೆ  ಉಪಯೋಗವಾಗಲಿ ಮಂಜುನಾಥ ಸ್ವಾಮಿ ಅವರಿಗೆ ಸದಾಕಾಲ ಉತ್ತಮ ಆರೋಗ್ಯ ಮತ್ತು ನೋವುಗಳು ಬದಿಸದಂತೆ ಕಾಪಾಡಲಿ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ  ಆಗಮಿಸಿದ 
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಲಮಂಗಲ, ಮಧ್ಯವರ್ಜನ ಶಿಬಿರ, ಸ್ವಾಸ ಸಂಕಲ್ಪ ಕಾರ್ಯಕ್ರಮದಂತಹ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿರುವುದು ಶ್ಲಾಘನೀಯವಾಗಿದೆ ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಜಿಲ್ಲಾ ಮಾಜಿ ಅಧ್ಯಕ್ಷ ಶಿವಶಂಕರ ರೆಡ್ಡಿ ತಿಳಿಸಿದರು.
ಕಾರ್ಯಕ್ರಮದಲ್ಲಿ ದಿವ್ಯಜ್ಯೋತಿ ವೃದ್ಧಾಶ್ರಮದ ವ್ಯವಸ್ಥಾಪಕ ಅಯ್ಯಪ್ಪ, ಮುತ್ಯಾಲಯ್ಯ ಶೆಟ್ಟಿ, ತಾಲೂಕಿನ ಯೋಜನಾಧಿಕಾರಿಗಳಾದ ಸುಧೀರ್ ಹಂಗಳೂರು,  ಮೇಲ್ವಿಚಾರಕರಾದ ಶಿವಪ್ಪ, ಚಂದ್ರಕಲಾ ಸೇವಾ ಪ್ರತಿನಿಧಿ ಅಂಬಿಕಾ ಹಾಗೂ ವೃದ್ಧಾಶ್ರಮದ  ಸದಸ್ಯರು ಇದ್ದರು.