ಸಿಮ್ ಹ್ಯಾಕ್ ಮಾಡಿ 90696ರೂ. ವಂಚನೆ
ಸಂಜೆವಾಣಿ ವಾರ್ತೆ
ಸಿರುಗುಪ್ಪ, ಜೂ.16:  ನಗರದ ಕೆಎಚ್‌ಬಿ ಕಾಲೋನಿಯ ನಿವಾಸಿ ತಿರುಮಲ ರಾಜಶೇಖರ್ ಅವರ ಮೊಬೈಲ್ ಸಿಮ್ ಹ್ಯಾಕ್ ಮಾಡಿ ಬ್ಯಾಂಕ್ ಖಾತೆಗಳಲ್ಲಿದ್ದ ರೂ.90696 ವಂಚಿಸಿರುವ ಪ್ರಕರಣ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ ಮೊಬೈಲ್ನಲ್ಲಿದ್ದ ಸಿಮ್ ಕೆಲಸ ಮಾಡುತ್ತಿಲ್ಲವೆಂದು ತಿರುಮಲ ರಾಜಶೇಖರ್ ಅವರು ಮೊಬೈಲ್ ಕಂಪನಿಗೆ ಕೇಳಿದಾಗ ಹೊಸ ಸಿಮ್ ನೀಡಿದ್ದಾರೆ ಆದರೆ ಅದು ಸಹ ಕೆಲವು ಗಂಟೆಗಳು ನಂತರ ಆಕ್ಟಿವ್ ಆಗುತ್ತದೆ ಎಂದು ತಿಳಿಸಿದ್ದಾರೆ ಆದರೆ ಎರಡು ದಿನಗಳ ಕಳೆದರೂ ಸಿಮ್ ಚಾಲನೆ ಆಗಿಲ್ಲ ಆಗ ಕಂಪನಿ ಸಿಬ್ಬಂದಿಯ ವಿಚಾರಿಸಿದಾಗ ಬೇರೆ ಮೊಬೈಲ್ ನಲ್ಲಿ ಹಾಕಿ ನೋಡಲು ತಿಳಿಸಿದ್ದಾರೆ ಆಗಲು ಸಹ ಸಿಮ್ ಆನ್ ಆಗದ ಕಾರಣ ಅನುಮಾನ ಬಂದಿದೆ ಬ್ಯಾಂಕುಗಳಲ್ಲಿನ ಖಾತೆಗಳ ಹಣ ಪರಿಶೀಲನೆ ಮಾಡಿದಾಗ ತಾಲೂಕಿನ ದೇಶನೂರು ಗ್ರಾಮದ ಇಂಡಿಯನ್ ಬ್ಯಾಂಕಿನ ಖಾತೆಯಿಂದ ರೂ.69,000 ಮತ್ತು ಸಿರುಗುಪ್ಪ ನಗರದ ಕೆನರಾ ಬ್ಯಾಂಕಿನ ಖಾತೆಯಿಂದ ರೂ.21696 ದೋಚಿರುವುದು ತಿಳಿದು ಬಂದಿದೆ.