ನಮ್ಮ ಸಮಸ್ಯೆಗಳಿಗೆ ನಮ್ಮ ಒತ್ತಡಗಳೇ ಕಾರಣ.  ಡಾ ಎಸ್.ಬಿ.ಹಂದ್ರಾಳ
ಸಂಜೆವಾಣಿ ವಾರ್ತೆ
ಹೊಸಪೇಟೆ ಜೂ16: ಯಾವುದೇ ಕಾರ್ಯ ಮಾಡುವಾಗ  ಸಂಕಲ್ಪದೊಂದಿಗೆ  ನಿತ್ಯವೂ ಕಾರ್ಯಾರಂಭ, ಪೂರ್ವದಲ್ಲಿ ಹತ್ತು ನಿಮಿಷದ ಉತ್ತಮ ಸಂಕಲ್ಪ  ಯಶಸ್ವಿಯಾಗುತೆ ಮಾಡುತ್ತದೆ ಎಂದು ಪತಂಜಲಿ ಯೋಗ ಸಮಿತಿ ರಾಜ್ಯ ಸಮಿತಿ ಸದಸ್ಯ ಡಾ.ಎಸ್.ಬಿ.ಹಂದ್ರಾಳ ಹೇಳಿದರು.
ಹೊಸಪೇಟೆಯ ಫ್ರೀಡಂ ಪಾರ್ಕ್ನಲ್ಲಿ ಭಾನುವಾರ ಪತಂಜಲಿ ಯೋಗ ಸಮಿತಿ ವಿಶ್ವ ಯೋಗ ದಿನಾಚರಣೆ ಪೂರ್ವದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಯೋಗ ತರಬೇತಿಯಲ್ಲಿ  ಮಧುಮೇಹ ಹಾಗೂ ಪರಿಹಾರೋಪಾಯಗಳ ಮಾಹಿತಿ ಹಾಗೂ ಮಾರ್ಗದರ್ಶನ ನೀಡಿದ ಸಧೃಡ ಮನಸ್ಸು ಹಾಗೂ ಆರೋಗ್ಯ ಕಾಪಾಡಲು ಸಂಕಲ್ಪಿತ ಕಾರ್ಯಾರಂಭಕ್ಕೆ ದೇಹವನ್ನು ಸಿದ್ದಗೊಳಿಸುವುದು ಸಹ ಅಷ್ಟೇ ಮುಖ್ಯವಾಗಿದ್ದು ದೇಹದ 13ಜೋಡುಗಳನ್ನು ಅಣಿಗೊಳಿಸಬೇಕು. ನಮ್ಮ ಅನೇಕ ಸಮಸ್ಯೆಗಳಿಗೆ ನಮ್ಮ ಒತ್ತಡದ ಬದುಕು ಮುಖ್ಯಕಾರಣವಾಗಿದೆ.
 ಮದುಮೇಹಕ್ಕೆ ಆಹಾರ ಪದ್ದತಿ ಬದಲಾವಣೆ ಪರಿಣಾಮಕಾರಿಯಾಗಲಿದೆ,  ಯಾವುದನ್ನು ಸಂಪೂರ್ಣ ಬಿಡುವುದು, ಯಾವುದನ್ನು ಅಳವಡಿಸಿಕೊಳ್ಳುವುದು ಪರಿಹಾರವಲ್ಲ ಎಲ್ಲವನ್ನು ಸಮತೋಲನದಲ್ಲಿ ನಿರ್ವಹಿಸುವುದು ಮುಖ್ಯವಾಗಿದೆ. ಹೆಚ್ಚು ಹೆಚ್ಚು ತರಕಾರಿಗಳ ಬಳಕೆ, ರಾತ್ರಿ ಬೇಗ ಮಲಗುವುದು ಬೇಗ ಎದ್ದೇಳುವುದು, ನಿಯಮಿತ ಹಾಗೂ ಸಮಯೋಚಿತ ಆಹಾರ ಸೇವನೆ, ದೈನಂದಿನ ಯೋಗ, ಧ್ಯಾನ, ಪ್ರಾಣಾಯಾಮ ಸಕಾರಾತ್ಮಕ ಚಿಂತನೆ, ಸಕಾರಾತ್ಮಕ ಚಟುವಟಿಕೆ, ಕರಕಲು ತಿಂಡಿಗಳು ಚಂಕ್ ಆಹಾರಗಳಿಂದ ದೂರ ಇರುವುದು ಮಧುಮೇಹ ಬಾರದಂತೆ ತೆರಯಲು ಬಂದಿದ್ದಲ್ಲಿ ನಿಯಂತ್ರಣದಲ್ಲಿಡಲು ಸಹಕಾರಿಯಾಗಲಿದೆ ಎಂದರು.
ನಮ್ಮ ಆಲೋಚನೆಗಳೇ ನಮ್ಮ ರೋಗದ ಮೂಲವಾಗಿರುತ್ತದೆ. ನಾನು ಖುಷಿಯಿಂದ ಇದ್ದೇನೆ ಎಂದು ಭಾವಿಸುತ್ತಲೇ, ಜೀವನವನ್ನು ಸಕಾರತ್ಮವಾಗಿ ತೆಗೆದುಕೊಂಡಾಗ ಅದು ಸುಗಮವಾಗಿಬಿಡುತ್ತದೆ. ಮನೆ, ಕೆಲಸದ ಸ್ಥಳಗಳಲ್ಲಿನ ಒತ್ತಡಗಳು ಎಷ್ಟೇ ಇರಲಿ, ಅದು ನಮ್ಮ ಮನಸ್ಸನ್ನು ಬಾಧಿಸದಂತೆ ನೋಡಿಕೊಳ್ಳಿ, ಸದಾ ಸಂತೋಷದಿಂದಿರಿ, ನಿಮ್ಮ ಹತ್ತಿರಕ್ಕೆ ಯಾವುದೇ ರೋಗ ಸುಳಿಯದು ಅಥವಾ ಕಾಯಿಲೆ ಬಂದರೂ ಅದು ನಿಮ್ಮ ನಿಯಂತ್ರಣದಲ್ಲೇ ಇರುವುದು ನಿಶ್ಚಿತ’
 ಜೀವನಶೈಲಿಯ ಬದಲಾವಣೆ, ಆಹಾರ ಪದ್ಧತಿ, ಅತಿಯಾದ ತೂಕ, ಒತ್ತಡದ ಜೀವನ, ನಿದ್ರಾಹೀನತೆ, ಅಜೀರ್ಣತೆ, ಮಲಬದ್ಧತೆ ಮೊದಲಾದ ಕಾರಣಗಳಿಂದ ಮಧುಮೇಹ ಉಂಟಾಗುತ್ತದೆ,  ಇದನ್ನು ವಿವಿಧ ಯೋಗಾಸನಗಳು, ಮುದ್ರೆ ಸಹಿತ ಪ್ರಾಣಾಯಾಮಗಳು, ಸರಿಯಾದ ಆಹಾರ ಕ್ರಮ, ಶಿಸ್ತಿನ ಜೀವನ ವಿಧಾನದಿಂದ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು ಎಂದರು.
ಪತಂಜಲಿ ಯೋಗ ಸಮಿತಿಯ ಯುವ ರಾಜ್ಯ ಪ್ರಭಾರಿ ಕಿರಣ್‌ ಕುಮಾರ್, ಯೋಗ ಸಾಧಕರಾದ ರಾಜೇಶ್ ಕಾರ್ವಾ,
ಡಾ ಎಫ್.ಟಿ.ಹಳ್ಳಿಕೇರಿ, ಅನಂತ ಜೋಶಿ. ಪ್ರಕಾಶ ಕುಲಕರ್ಣಿ, ಶ್ರೀರಾಮ,ಪ್ರಮೀಳಮ್ಮ, ವಿವಿಧ ಕೇಂದ್ರಗಳ ಸಂಚಾಲಕರು ಯೋಗಬಂಧುಗಳು ಪಾಲ್ಗೊಂಡಿದ್ದರು.