ರಸ್ತೆ ಅಪಘಾತದಲ್ಲಿ ಜಿಲ್ಲಾಧಿಕಾರಿ ಕಚೇರಿ ಕ್ಲರ್ಕ್ ಸೇರಿ ಇಬ್ಬರ ಸಾವು
ಜೇವರ್ಗಿ,ಜೂ.16-ಜೇವರ್ಗಿ-ವಿಜಯಪುರ ರಸ್ತೆಯ ನೆಲೋಗಿ ಕಮಾನ್ ಹತ್ತಿರ ಲಾರಿ ಮತ್ತು ಕಾರು ನಡುವೆ ಡಿಕ್ಕಿ ಸಂಭವಿಸಿ ಯಾದಗಿರಿ ಜಿಲ್ಲಾಧಿಕಾರಿ ಕಚೇರಿಯ ಕ್ಲರ್ಕ್ ಮತ್ತು ಖಾಸಗಿ ಕಂಪ್ಯೂಟರ್ ಆಪರೇಟರ್ ಸೇರಿ ಇಬ್ಬರು ಮೃತಪಟ್ಟಿದ್ದಾರೆ.
ಮೃತರನ್ನು ಯಾದಗಿರಿ ಜಿಲ್ಲಾಧಿಕಾರಿ ಕಾರ್ಯಾಲಯದಲ್ಲಿ ಫಸ್ಟ್ ಗ್ರೇಡ್ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದ ಕಾಂತಯ್ಯ ತಂದೆ ಶಿವಾನಂದ ಮಠ (37) ಮತ್ತು ಖಾಸಗಿ ಕಂಪ್ಯೂಟರ್ ಆಪರೇಟರ್ ಲೋಕೇಶ್ ಬಸವರಾಜ ಹಾಸನ್ ಎಂದು ಗುರುತಿಸಲಾಗಿದೆ.
ಸುದ್ದಿ ತಿಳಿದು ಎಎಸ್‍ಪಿ ಬಿಂದುರಾಣಿ, ಸಿಪಿಐ ರಾಜಾಸಾಬ್, ಗಜಾನನ್ ಬಿರಾದಾರ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.