ಮಳೆಗಾಲದಲ್ಲಿ  ಸೋರುವ ಜಗಳೂರು ತಾಲೂಕು ಆಸ್ಪತ್ರೆ ಮೇಲ್ಫಾವಣಿ ; ಬೇಕಾಗಿದೆ ತುರ್ತು ಚಿಕಿತ್ಸೆ

ಸಂಜೆವಾಣಿ ವಾರ್ತೆ
ಜಗಳೂರು.ಜೂ.೧೫; ಇಲ್ಲಿನ ತಾಲೂಕು ಆಸ್ಪತ್ರೆಗೆ  ವಿಜಯನಗರ, ಚಿತ್ರದುರ್ಗ,ಕೊಟ್ಟೂರು, ಚಳ್ಳಕೆರೆ ಗಡಿ ಭಾಗದ ಜನರಿಗೂ ಅತ್ಯವಶ್ಯಕವಾದ ಆಸ್ಪತ್ರೆಯಾಗಿದೆ ಪ್ರತಿನಿತ್ಯ ಸಾವಿರಕ್ಕೂ ಹೆಚ್ಚು ರೋಗಿಗಳು ಧಾವಿಸಿ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾರೆ.ಈ ಸಾರ್ವಜನಿಕ ಆಸ್ಪತ್ರೆಯು 100 ಹಾಸಿಗೆಗಳ ಕೂಡಿದೆ ಆದರೆ ಇಲ್ಲಿ ಹಲವು ವರ್ಷಗಳಿಂದ ವೈದ್ಯರ ಕೊರತೆ ಎದ್ದು ಕಾಣು ತ್ತಿದೆ ಪ್ರಸ್ತುತ ಈ ಆಸ್ಪತ್ರೆಯಲ್ಲಿ 14 ವೈದ್ಯರು ಇರಬೇಕಿತ್ತು ಆದರೆ ಎಂಟು ತಜ್ಞವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ ಅದರಲ್ಲಿ ಅರವಳಿಕೆ ತಜ್ಞರು.ಕಣ್ಣು ತಜ್ಞರು.ಕಿವಿ ಮೂಗು ಗಂಟಲು ತಜ್ಞರು .ಮಕ್ಕಳ ತಜ್ಞರು.ಮೂಳೆತಜ್ಞರು ದಂತ ವೈದ್ಯರು.ಜನ ರಲ್ ಸರ್ಜನ್.ಸ್ತ್ರೀರೋಗ ಪ್ರಸುತಿ ತಜ್ಞರು.ಕಾರ್ಯನಿರ್ವ ಹಿಸುತ್ತಿದ್ದಾರೆ ಇನ್ನುಳಿದಂತೆ ಎಲ್ಲದಕ್ಕೂ ಅತಿ ಮುಖ್ಯವಾಗಿ ಫಿಜಿ ಶಿಯನ್ (ಹೃದಯ ರೋಗ ತಜ್ಞರು).ಚರ್ಮರೋಗ. 4 ತುರ್ತು ವೈದ್ಯಾಧಿಕಾರಿಗಳು.ಸೇರಿದಂತೆ ರೇಡಿಯೋಲೋಜಿಸ್ಟ್.ವೈದ್ಯರ ಹುದ್ದೆಗಳು ಖಾಲಿ ಇವೆ ಎಂದು ಶಾಸಕ ಬಿ ದೇವೇಂದ್ರಪ್ಪ ಮತ್ತು ಡಿ.ಎಚ್.ಓ  ಮತ್ತು ಸರ್ಕಾರಕ್ಕೆ ಈಗಾಗಲೇ ಈ ವಿಷಯದ ಬಗ್ಗೆ ವರದಿ ಸಲ್ಲಿಸಲಾಗಿದೆ ಎಂದು ಆಸ್ಪತ್ರೆಯ ವೈದ್ಯಾಧಿಕಾರಿ ಷಣ್ಮುಖಪ್ಪ ಸಂಜೆವಾಣಿ ದಿನ ಪತ್ರಿಕೆಗೆ ತಿಳಿಸಿದ್ದಾರೆ