ಟಿಹೆಚ್ ಎಂ ಬಸವರಾಜ್ ಗೆ ಬಸವ ಪುರಸ್ಕಸರ ಪ್ರಶಸ್ತಿ ಪ್ರದಾನ
(ಸಂಜೆವಾಣಿ ವಾರ್ತೆ)
ಬೆಂಗಳೂರು, ಜೂ.16: ಇಲ್ಲಿನ  ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ  ನಿನ್ನೆ ಬಸವ ಪರಿಷತ್  ಹಮ್ಮಿಕೊಂಡಿದ್ದ  2024 ರ ಬಸವ ಪುರಸ್ಕಾರ  ಪ್ರಶಸ್ತಿ ಸಮಾರಂಭದಲ್ಲಿ  ಬಳ್ಳಾರಿಯ ಕರ್ನಾಟಕ ಇತಿಹಾಸ ಅಕಾಡೆಮಿಯ ಜಿಲ್ಲಾಧ್ಯಕ್ಷ ಟಿ. ಹೆಚ್.ಎಂ.  ಬಸವರಾಜ್ ಇವರಿಗೆ ಸಾಹಿತ್ಯ ಇತಿಹಾಸ ಮತ್ತು ಜಾನಪದ ಕ್ಷೇತ್ರದಲ್ಲಿ  ಮಾಡಿದ ಸೇವೆಯನ್ನು ಪರಿಗಣಿಸಿ
“ಬಸವ ಪುರಸ್ಕಾರ” ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ವಿಧಾನಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿಯವರು ಬಸವರಾಜ್ ಇವರಿಗೆ ಪ್ರಶಸ್ತಿಯ ಫಲಕ ನೀಡಿ ಗೌರವಿಸಿದ್ದಾರೆ.
ಲಿಂಗಸುಗೂರು ತಾಲೂಕು ಅಂಕಲಿ ಮಠದ ಶ್ರೀ ವೀರಭದ್ರ ಮಹಾಸ್ವಾಮಿ,  ಇಸ್ರೋ ವಿಜ್ಞಾನಿ ಬಿ. ಎಚ್. ಎಮ್. ದ್ವಾರಕೇಶ್, ಹೃದಯ ತಜ್ಞ ಡಾ. ಮಹಾಂತೇಶ್ ಚರಂತಿಮಠ್, ಉದ್ಯಮಿಗಳಾದ ಧನರಾಜ್, ಎಸ್ ಪಿ ದಯಾನಂದ, ಬಸವ ಪರಿಷತ್ ಅಧ್ಯಕ್ಷೆ ಎಂ. ಪಿ.ಉಮಾದೇವಿ, ಎಂಪಿ ಅರುಣ ಪ್ರಧಾನ ಕಾರ್ಯದರ್ಶಿ ಮಹಾಂತೇಶ್ ಹಿರೇಮಠ್ ಮುಂತಾದವರು ಉಪಸ್ಥಿತರಿದ್ದರು