ಭಾರತ ಗುರುವಿನ ಸ್ಥಾನದಲ್ಲಿದೆ:ವೇ.ವಸಂತ ಜೋಶಿ
ತಾಳಿಕೋಟೆ:ಜೂ.16: ಭಾರತ ದೇಶಕ್ಕೆ ಅನೇಕ ಅಕ್ರಮಣಕಾರರು ಆಗಮಿಸಿ ಈ ದೇಶದ ಒಗ್ಗಟ್ಟನ್ನು ನೋಡಿ ಮರಳಿ ತಮ್ಮ ಸ್ಥಾನಮಾನಕ್ಕೆ ಹೋಗಿದ್ದು ಇದಕ್ಕೆ ಕಾರಣ ಪೂರ್ವಕಾಲದಿಂದ ಗೌರವದೊಂದಿಗೆ ಮುನ್ನಡೆದ ಸನಾತನ ಧರ್ಮವೇ ಕಾರಣವಾಗಿದೆ ಎಂದು ಖ್ಯಾತ ಜೋತಿಷ್ಯ ಶಾಸ್ತ್ರ ಪರಿಣಿತರಾದ ವೇ.ವಸಂತ ಜೋಶಿ ಅವರು ನುಡಿದರು.
ಶನಿವಾರರಂದು ಸ್ಥಳೀಯ ನಗರೇಶ್ವರ ದೇವಸ್ಥಾನದಲ್ಲಿ ಆರ್ಯವೈಶ್ಯ ಸಮಾಜ ಬಾಂದವರ ವತಿಯಿಂದ ನರೇಂದ್ರ ಮೋದಿಜಿ ಅವರು ಪ್ರಧಾನಿ ಸ್ಥಾನ ಮಾನ ಪುನಃ ಗಿಟ್ಟಿಸಿಕೊಳ್ಳಬೇಕೆಂಬ ಆಸೆಹೊತ್ತು ಶ್ರೀಗುರು ರಾಘವೇಂದ್ರರರಿಗೆ ಹರಕೆಹೊತ್ತಿದ್ದನ್ನು ತೀರಿಸುವ ಕುರಿತು ಏರ್ಪಡಿಸಲಾದ ಶ್ರೀಗುರು ರಾಯರ ಅಷ್ಟೋತ್ತರ ಮಹಾ ಪೂಜಾ ಕಾರ್ಯಕ್ರಮದಲ್ಲಿ ದಿವ್ಯ ಸಾನಿದ್ಯ ವಹಿಸಿ ಮಾತನಾಡುತ್ತಿದ್ದ ಅವರು ನಮ್ಮ ಭಾರತ ದೇಶಕ್ಕೆ 1947ನೇ ಇಸ್ವೀಯ ಮೊದಲೇ ಸಾವಿರಾರು ವರ್ಷಗಳ ಹಿಂದೆಯೇ ನಮಗೆ ಸ್ವಾತಂತ್ರ್ಯ ದೊರೆತ್ತಿದ್ದ ಕಾರಣದಿಂದಲೇ ಮುನ್ನಡೆದಿದ್ದೇವೆ ಅನೇಕ ಸಾದು ಸಂತರು ಸತ್ಪುರುಷರು ಆಗಿ ಹೋಗಿದ್ದಾರೆ ಅಂತವರಿಗೆ ಮಹತ್ವ ಹಾಗೂ ಗೌರವಿಸುತ್ತಾ ಸಾಗಿಬಂದ ಕಾರಣದಿಂದಲೇ ಅಂತವರ ಗುಂಪಿಗೆ ಸೇರುವ ಪ್ರಧಾನಿ ನರೇಂದ್ರ ಮೋದಿ ಅವರು ಪುನರ್ ಆಯ್ಕೆಯಾಗಿ ತಮ್ಮ ಸ್ಥಾನಮಾನ ಹೊಂದಲು ಕಾರಣವಾಗಿದೆ ಎಂದರು. ಪ್ರಧಾನಿ ನರೇಂದ್ರ ಮೋದಿ ಅವರು ಅಪಾರ ಬುದ್ದಿವಂತರು ದೇಶದ ಬಗ್ಗೆ ಚಿಂತನೆ ನಡೆಸುತ್ತಾ ಸಾಗಿರುವ ಇವರು ಕೃಷ್ಣಾ ಅವತಾರಿ ಎಂದು ಬಣ್ಣಿಸಿದ ಜೋಶಿ ಅವರು ಮೋದಿ ಅವರೇ ಪ್ರಧಾನಿಯಾಗಬೇಕೆಂಬ ಉದ್ದೇಶಹೊತ್ತು ಮಹಾ ಪೂಜೆಗೆ ಮುಂದಾದ ಆರ್ಯವೈಶ್ಯ ಸಮಾಜ ಬಾಂದವರ ಭಕ್ತಿಯಲ್ಲಿ ಸತ್ಯಾಂಶ ಅಡಗಿದೆ ಎಂದರು.
ಇನ್ನೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಿಕ್ಷಕ ಅಶೋಕ ಹಂಚಲಿ ಅವರು ಮಾತನಾಡಿ ಭಾರತದ ಆತ್ಮ ಆದ್ಯಾತ್ಮವಾಗಿದೆ ಭಾರತ ಯುವ ಜನಾಂಗದ ಪಟುಗಳಂತೆ ಕಥೆಗಳನ್ನು ಹೊಂದಿದೆ ಇದು ದೇಶ ಹೆಮ್ಮೆ ಪಡುವ ದೇಶವಾಗಿದೆ ಎಂದರು. ಆದರೂ ನಾವು ಈ ದೇಶವನ್ನು ಕಟ್ಟುವದು ಇನ್ನೂ ಕಟ್ಟಬೇಕಾಗಿದೆ ಈ ಕುರಿತು ಹಿಂದಿನ ಹಿರಿಯರನ್ನು ಜ್ಞಾಪಿಸಿಕೊಂಡರೆ ನಮಗೆ ಒಳ್ಳೆಯ ಮಾರ್ಗ ಲಬಿಸಲಿದೆ ಎಂದರು. ಮಲಗಿದವರನ್ನು ಬಡಿದೆಬ್ಬಿಸಬೇಕಾಗಿದೆ ಅಂತಹ ಕಾರ್ಯಕ್ಕೆ ಮುಂದಾದವರು ಪ್ರಧಾನಿ ನರೇಂದ್ರ ಮೋದಿ ಅವರು ಆಗಿದ್ದಾರೆಂದರು. ಅವರು ಪ್ರಧಾನಿ ಪಟ್ಟಾಧಿಕಾರ ವಹಿಸುವ ಕುರಿತು ಶಕ್ತಿ ನೀಡಲಿ ಎಂಬ ಉದ್ದೇಶ ಹೊತ್ತ ಆರ್ಯ ವೈಶ್ಯ ಸಮಾಜ ಬಾಂದವರು ಶ್ರೀ ಗುರು ರಾಘವೇಂದ್ರ ದೇವನಿಗೆ ಬೇಡಿಕೊಂಡು ತಾವು ಪೂಜಾ ವಿದಿ ವಿಧಾನಗಳನ್ನು ನೇರವೇರಿಸುವದಾಗಿ ವಾಗ್ದಾನ ಮಾಡಿದ್ದನ್ನು ಇಂದು ತೀರಿಸಿರುವದು ಸಾಮಾನ್ಯ ಮಾತಲ್ಲವೆಂದರು. ನರೇಂದ್ರ ಮೋದಿ ಅವರ ಕುಟುಂಭ ಈ ಇಡೀ ಭಾರತ ದೇಶವಾಗಿದೆ ಇಡೀ ಜನಾಂಗವೇ ಅವರ ಬಧುಕಾಗಿದೆ ಎಂದು ಹೇಳುತ್ತಾ ಸಾಗಿದ ಮೋದಿಅವರನ್ನು ನಾವು ಪಡೆದವರು ಮಹಾ ಪುಣ್ಯವಂತರೆಂದು ಹೇಳಿದ ಶಿಕ್ಷಕ ಹಂಚಲಿ ಅವರು ಚಿನ್ನದ ನಾಣ್ಯಗಳಿಂದ ಪೂಜಾ ವಿದಿ ವಿಧಾನಗಳನ್ನು ನೆರವೇರಿಸಿದ ಆರ್ಯವೈಶ್ಯ ಸಮಾಜದ ಈ ಸೇವಾ ಕಾರ್ಯ ಕುರಿತು ಗುಣಗಾನ ಮಾಡಿದ ಅವರು ನೋದಿ ಅವರ ಸರ್ಕಾರ 5 ವರ್ಷ ಸುಸರ್ಜಿತವಾಗ ನಡೆಯಲಿ ಎಂಬ ಉದ್ದೇಶ ಎಲ್ಲರದ್ದಾಗಿದೆ ಎಂದರು.
ಇನ್ನೋರ್ವ ಆರ್ಯ ವೈಶ್ಯ ಸಮಾಜದ ಹಿರಿಯರಾದ ಡಾ.ಎನ್.ಎಲ್.ಶೆಟ್ಟಿ ಅವರು ಮಾತನಾಡಿ ಲೋಕಸಭಾ ಚುನಾವಣೆ ನಡೆದಾಗಲೇ ಮೋದಿ ಅವರು ಆಯ್ಕೆಯಾಗಲಿ ಎಂಬ ಉದ್ದೇಶ ನಮ್ಮ ಸಮಾಜ ಬಾಂದವರದ್ದಾಗುತ್ತು ನಾವೇಲ್ಲರೂ ಒಗ್ಗೂಡಿ ಗುರು ರಾಘವೇಂದ್ರನಿಗೆ ಅಂದು ಸಹ ಮಹಾಪೂಜೆ ಗೈದು ಮೋದಿ ಅವರು ಪ್ರಧಾನಿಯಾಗಲಿ ಎಂಬ ಉದ್ದೇಶ ಹೊತ್ತು ನಮ್ಮ ಉದ್ದೇಶ ಇಡೇರಿದರೆ ತಾಳಿಕೋಟೆಯಲ್ಲಿಯ ಶ್ರೀ ಗುರು ರಾಘವೇಂದ್ರ ಮಠದ ಶ್ರೀ ರಾಘವೇಂದ್ರ ಸ್ವಾಮಿಗೆ ಅಷ್ಟೋತ್ತರ ಕಾರ್ಯಕ್ರಮ ನಡೆಸಿ ಭಕ್ತಿ ಸಮರ್ಪಿಸುತ್ತೇವೆಂಬ ಅಂದಿನ ಉದ್ದೇಶ ಹೊತ್ತಿದ್ದು ಈಗ ಕಾರ್ಯಗತವಾದ ಕಾರಣದಿಂದಲೇ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು
ವೇ.ನಿಂಗೂಜಿ ಅವರು ಆರ್ಯವೈಶ್ಯ ಸಮಾಜ ಬಾಂದವರ ಕಾರ್ಯವೈಖರ್ಯಗಳ ಕುರಿತು ಗುಣಗಾನ ಮಾಡಿದರು.
ಕಾರ್ಯಕ್ರಮದ ಮೊದಲಿಗೆ ಶ್ರೀ ನಗರೇಶ್ವರ ಮಹಾ ಮೂರ್ತಿಗೆ ರುದ್ರಾಭಿಷೇಕ, ಶ್ರೀ ಗುರು ರಾಘವೇಂದ್ರ ಮಹಾ ಸ್ವಾಮಿಜಿ ಅವರ ಉತ್ಸವ ಮೂರ್ತಿಗೆ ಮಹಾ ಭಿಷೇಕ ಗೈದು ಪುಷ್ಪಾರ್ಚನೆ, ಬಿಲ್ವಾರ್ಚನೆ, ಮಹಾ ಮಂಗಳಾರತಿ ಕಾರ್ಯಕ್ರಮ ನಡೆಸಿದರಲ್ಲದೆ ಈ ಮಹಾ ಮೂರ್ತಿಗಳ ಹತ್ತಿರವೇ ಪ್ರಧಾನಿ ನರೇಂದ್ರ ಮೋದಿ ಅವರ ಬೃಹತ್ ಆಕಾರದ ಪೊಟೊ ಇಟ್ಟು ಗೌರವಿಸಲಾಯಿತು.
ಈ ಮಹಾ ಪೂಜಾ ಕಾರ್ಯಕ್ರಮವನ್ನು ಶ್ರೀಧರ ಜೋಶಿ. ಗುಂಡು ಜೋಶಿ, ಅವಿನಾಶ ಜೋಶಿ, ವೇಂಕಟೇಶ ಗ್ರಾಂಪೊರೊಹಿತ, ಶ್ರೀಧರ ಗ್ರಾಂಪೊರೊಹಿತ, ಭೀಮಸೇನ ಜೋಶಿ, ಪ್ರಲ್ಹಾದಾಚಾರ್ಯ ಜೋಶಿ, ಶ್ರೀನಿವಾಸ ಜೋಶಿ, ರಾಜಶೇಖರ ಜೋಶಿ, ಅನಂತ ಕುಲಕರ್ಣಿ ಅವರು ನೇರವೇರಿಸಿದರು.
ಈ ಕಾರ್ಯಕ್ರಮದ ನೇತೃತ್ವವನ್ನು ಆರ್ಯವೈಶ್ಯ ಸಮಾಜದ ಹಿರಿಯರಾದ ಅಶೋಕ ಶೆಟ್ಟಿ, ದತ್ತಾತ್ರೇಯ ಹೆಬಸೂರ, ವಾಸುದೇವ ಹೆಬಸೂರ, ಸತ್ಯನಾರಾಯಣ ತಾಳಪಲ್ಲೆ, ರವಿ ತಾಳಪಲ್ಲೆ, ಯಂಕಣ್ಣ ತಾಳಪಲ್ಲೆ, ಕೃಷ್ಣಾ ಮಾನ್ವಿ, ಗೋವಿಂದ ಶೆಟ್ಟಿ, ಕಾಂತರಾಜ ಗೊಟಗುಣಕಿ, ಶ್ರೀಕಾಂತ ಶೆಟ್ಟಿ, ಕೃಷ್ಣಾ ಕನಕಗಿರಿ, ಜಗದೀಶ ಗೊಟಗುಣಕಿ, ಪ್ರಶಾಂತ ಜನಾದ್ರಿ, ಗುರುರಾಜ ತಾಳಪಲ್ಲೆ, ಬೀಮಣ್ಣ ಅಗಡಿ, ಮೊದಲಾದವರು ವಹಿಸಿದ್ದರು.
ಸಮಸ್ತ ಭಕ್ತಾಧಿಗಳಿಗೆ ಮಹಾ ಪ್ರಸಾದದೊಂದಿಗೆ ಪೂಜಾ ಕಾರ್ಯಕ್ರಮ ಮಂಗಲಗೊಂಡಿತು.