ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ
ಹೂವಿನ ಹಿಪ್ಪರಗಿ ಜೂ.16. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಬಕ್ರಿದ್ ಹಬ್ಬದ ನಿಮಿತ್ಯವಾಗಿ ಶಾಂತಿ ಸಭೆ ಮಾಡಲಾಯಿತು. ಶಾಂತಿ ಮತ್ತು ಸೌಹಾರ್ದತೆಯ ಪ್ರತೀಕವಾಗಿರುವ ಬಕ್ರೀದ್ ಹಬ್ಬವನ್ನು ಸರಳವಾಗಿ ಸಂಭ್ರಮದಿಂದ ಆಚರಿಸೋಣ ಎಂದು ಪೊಲೀಸ ಇಲಾಖೆ ದವರು ಹೇಳಿದರು.
ಬಕ್ರೀದ್ ಹಬ್ಬವನ್ನು ಸರಳವಾಗಿ ಆಚರಿಸಲು ನಮ್ಮ ಇಲಾಖೆಯಿಂದ ಸೂಕ್ತ ಭದ್ರತೆ ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಹೀಗಾಗಿ ಭದ್ರತೆಯ ಅವಶ್ಯಕತೆ ಇದ್ದಲ್ಲಿ ನಮ್ಮ ಗಮನಕ್ಕೆ ತನ್ನಿ ಹಾಗೂ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವುದಾಗಿ ತಿಳಿಸಿದರು ಇದು ಶಾಂತಿವಿತ ನಾಡು ಮತ್ತು ಬಸವ ನಾಡು ಈ ನಾಡಿನಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗುವುದಿಲ್ಲ ಎಂದು ಪಟ್ಟಣದ ಮತ್ತು ತಾಲೂಕಿನ ಎಲ್ಲಾ ಹಳ್ಳಿಗಳಿಂದ ಆಗಮಿಸಿದ ಮುಸ್ಲಿಂ ಸಮಾಜದ ನಾಯಕರು ಮತ್ತು ಯುವಕರು ಪೆÇಲೀಸ್ ಇಲಾಖೆಯವರಿಗೆ ಹೇಳಿದರು ಮತ್ತು ಭರವಸೆ ನೀಡಿದರು.ಶಾಂತಿ ಸಭೆಯ ಸಂದರ್ಭದಲ್ಲಿ. ಪೊಲೀಸ್ ಠಾಣಾಧಿಕಾರಿಗಳಾದ. ವಿಜಯ ಮುರಗುಂಡಿ. ಮತ್ತು. ರಾಜಶೇಖರ್ ಬೀಳಿಗಿ. ಯವರು. ಮತ್ತು ಪಶು ಅಧಿಕಾರಿಗಳು. ಮುಸ್ಲಿಂ ಸಮಾಜದ ಪಟ್ಟಣದ ಮುಖಂಡರು ಮತ್ತು ತಾಲೂಕಿನ ಎಲ್ಲಾ ಹಳ್ಳಿಯ ಸಮಾಜದ ಹಿರಿಯರು ಮತ್ತು ಯುವಕರು. ಸೇರಿದಂತೆ ಅನೇಕರು ಉಪಸ್ಥಿತರಿದ್ದರು