ದರ್ಶನ ಹಾಗೂ ಗುಂಪಿನ ಹೇಯ ಕೃತ್ಯ ಖಂಡಿಸಿ ಬೇಡ ಜಂಗಮ ಸಮಾಜ ಪ್ರತಿಭಟನೆ
ವಿಜಯಪುರ,ಜೂ.16: ದರ್ಶನ ಹಾಗೂ ಅವರ ಗುಂಪಿನ ಸದಸ್ಯರ ಕ್ರೂರ ಕೃತ್ಯವನ್ನು ಖಂಡಿಸಿ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ವಿಜಯಪುರ ಜಿಲ್ಲಾ ಬೇಡ ಜಂಗಮ ಸಮಾಜ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಸಂಜು ಹಿರೇಮಠ ಮಾತನಾಡಿ, ಚಿತ್ರದುರ್ಗದ ಶ್ರೀ ರೇಣುಕಸ್ವಾಮಿಯವರ ಹತ್ಯೆಯನ್ನು ವಿಜಯಪುರ ಜಿಲ್ಲಾ ಬೇಡಜಂಗಮ ಸಮಾಜ ಉಗ್ರವಾಗಿ ಖಂಡಿಸುತ್ತದೆ. ಶ್ರೀ ರೇಣುಕಸ್ವಾಮಿ ಹತ್ಯೆಗೈದವರಿಗೆ ಅತ್ಯಂತಕಠಿಣ ಶಿಕ್ಷೆಗೆ ಒಳಪಡಿಸಬೇಕು. ಈ ಕೃತ್ಯವೆಸಗಿರುವವರಿಗೂ ಹಾಗೂ ಕೃತ್ಯಕ್ಕೆ ಸಹಕಾರ ನೀಡಿದ ಎಲ್ಲ ವ್ಯಕ್ತಿಗಳಿಗೂ ಅತ್ಯಂತ ಕಠಿಣ ಶಿಕ್ಷೆಗೆ ಒಳಪಡಿಸುವಂತೆ ಸರ್ಕಾರವನ್ನು ಒತ್ತಾಯಿಸುತ್ತದೆ. ಯಾವುದೇ ಒತ್ತಡ ಅಥವಾ ಪ್ರಭಾವಕ್ಕೆ ಒಳಗಾಗದೇ, ಆರೋಪಿ ಸ್ಥಾನದಲ್ಲಿರುವವರನ್ನು ರಕ್ಷಿಸದೇ, ಸರ್ಕಾರವು ಶ್ರೀಸಾಮಾನ್ಯನ ಜೊತೆಗೆ ನಿಲ್ಲುತ್ತದೆ ಎಂಬುದನ್ನು ಈ ಘಟನೆಯಲ್ಲಿ ತೋರಿಸಬೇಕಾಗಿದೆ ಎಂದು ಹೇಳಿದರು.
ಜಂಗಮ ಸಮಾಜದ ಕಾರ್ಯದರ್ಶಿ ಎಸ್.ಕೆ. ಸಾವಳಗಿಮಠ, ಸದಾಶಿವ ಅರಿಕೇರಿಮಠ ಮಾತನಾಡಿ, ಸರ್ಕಾರವು ಈ ವಿಷಯದಲ್ಲಿ ನಿರ್ಲಕ್ಷ್ಯ ತೋರಿದಲ್ಲಿ ರಾಜ್ಯಾದ್ಯಂತ ಹೋರಾಟ ಮಾಡಲು ಬೇಡಜಂಗಮ ಸಮಾಜವು ತೀರ್ಮಾನಿಸಬೇಕಾಗುತ್ತದೆ. ಈ ಘಟನೆಯಿಂದ ಸರ್ಕಾರ ಪ್ರಭಾವಿ ವ್ಯಕ್ತಿಗಳ ಪರನಿಲ್ಲದೇ ಮೃತನ ಕುಟುಂಬದ ಜೊತೆ ನಿಲ್ಲುವುದು ಆದ್ಯ ಕರ್ತವ್ಯವಾಗಿದೆ. ಆ ಕುಟುಂಬ ನಿರ್ವಹಣೆಗೆ ಸರ್ಕಾರವು 1 ಕೋಟಿ ಹಣವನ್ನು ಹಾಗೂ ಮೃತಳ ಹೆಂಡತಿಗೆ ಸರ್ಕಾರಿ ಹುದ್ದೆಯನ್ನು ನೀಡುವಂತೆ ಸರ್ಕಾರವನ್ನುಒತ್ತಾಯಿಸುತ್ತದೆ ಎಂದರು.
ಬೇಡಜಂಗಮ ಸಮಾಜವು ರೇಣುಕಸ್ವಾಮಿಯವರ ಕುಟುಂಬದ ದುಃಖದಲ್ಲಿ ಭಾಗಿಯಾಗಿದ್ದು, ಅವರ ಕುಟುಂಬಕ್ಕೆ ನ್ಯಾಯ ದೊರಕಿಸಿ ಕೊಡಲು ಸದಾ ಸಿದ್ದವಾಗಿರುತ್ತದೆ ಎಂದರು.
ಸಮಾಜದ ಹಿರಿಯರಾದ ಬಸಯ್ಯ ಚಿನ್ನಕಾಳಿಮಠ, ಸಂಘದ ಕಾರ್ಯಾಧ್ಯಕ್ಷ ಎನ್.ಆರ್. ಹಿರೇಮಠ, ಗುರಯ್ಯ ಯಾದವಾಡ, ರಾಚಯ್ಯ ಚೌಕಿಮಠ, ಗುರುಸಿದ್ದಯ್ಯ ಹಿರೇಮಠ, ಮಲ್ಲಯ್ಯ ಹಿರೇಮಠ, ಬಿ.ಐ. ಹಿರೇಮಠ, ಡಾ. ನಂದಿಕೋಲುಮಠ, ಡಾ. ಪ್ರಸಾದ ವಸ್ತ್ರದ, ವಿಶ್ವನಾಥ ಹಿರೇಮಠ, ಅನೀಲ ಹಿರೇಮಠ, ಮಹಾಂತೇಶ ಹಿರೇಮಠ, ಶಾಂತಿವೀರ ಹಿರೇಮಠ, ರಾಜು ಹಿಪ್ಪರಗಿ, ಬಾಬು ಶಿರಣಗಾರ, ಬಸಯ್ಯ ಹಿರೇಮಠ ಹಾಗೂ ಸಮಾಜದ ಹಿರಿಯರು ಉಪಸ್ಥಿತರಿದ್ದರು.