ಮಕ್ಕಳನ್ನು ಅಕ್ಷರವಂತರನ್ನಾಗಿ ಮಾಡಲು ಕರೆ
ನವಲಗುಂದ,ಜೂ16 : ಮುಸ್ಲಿಂ ಬಾಂಧವರು ಶೈಕ್ಷಣಿಕವಾಗಿ ಹಿಂದಿದ್ದು, ಪಾಲಕರು ತಮ್ಮ ಮಕ್ಕಳನ್ನು ಶಾಲೆ ಬಿಡಿಸದೆ ನಿತ್ಯ ಕಳುಹಿಸಿ ಅಕ್ಷರವಂತರನ್ನಾಗಿ ಮಾಡಿ ದೇಶದ ಅಭಿವೃದ್ಧಿಗೆ ಕಾರಣರಾಗಬೇಕು ಎಂದು ವಿಜಯಪುರ ಜಿಲ್ಲಾ ಮುಸ್ಲಿಂ ಮುಖಂಡ ಹಾಗೂ ಯುವ ಉದ್ದೇಮಿ ಶಾಹಿದ್ ಹೊರ್ತಿ ಹೇಳಿದರು.
ಅವರು ಪಟ್ಟಣದ ಉಮ್ಮತಿ ಫೌಂಡೇಶನ್ ಕಚೇರಿಗೆ ಭೇಟಿ ನೀಡಿದ ವೇಳೆ ಮಾತನಾಡಿದ ಅವರು ಈ ಭಾಗದ ಮುಸ್ಲಿಂ ಜನಾಂಗದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ತಾವು ಬದ್ಧ, ಉಮ್ಮತಿ ಫೌಂಡೇಶನ್ ಸಂಸ್ಥೆಯು ಮಕ್ಕಳಿಗೆ ಶಿಕ್ಷಣ ಕೊಡಿಸಲು ಶ್ರಮಿಸುತ್ತಿರುವುದು ಬಹಳ ಸಂತೋಷದ ಸಂಗತಿ, ಶಿಕ್ಷಣ ಹಾಗೂ ಸಮುದಾಯದ ಅಭಿವೃದ್ಧಿಗಾಗಿ ಸದಾ ನಿಮ್ಮ ಜೊತೆ ನಾನಿದ್ದು, ಅಗತ್ಯ ಸಹಕಾರ ನೀಡಲು ಸಿದ್ಧ ಎಂದರು.
ಉಮ್ಮತಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಜಮೀರ್ ಕಾಗದಗಾರ ಮಾತನಾಡಿ ಮುಂಬರುವ ದಿನಗಳಲ್ಲಿ ಸಮಾಜ ಹಿತಚಿಂತಕರಾದ ಶಾಹಿದ್ ಹೊರ್ತಿ ನೇತೃತ್ವದಲ್ಲಿ ಒಂದು ಸಭೆ ಆಯೋಜಿಸಿ ಶೈಕ್ಷಣಿಕವಾಗಿ ವಿವಿಧ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದು ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಕೆಲಸ ಪ್ರಾರಂಭ ಮಾಡಲಾಗುವುದು ಎಂದರು.
ಇದೆ ವೇಳೆ ಶಾಹಿದ್ ಹೊರ್ತಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂಧರ್ಭದಲ್ಲಿ ಗದಗ ಜಿಲ್ಲಾ ಮುಸ್ಲಿಂ ಮುಖಂಡರಾದ ಕೆ ಐ ಶೇಖ ಸ್ಥಳೀಯ ಸಂಚಾಲಕರಾದ ಅಬ್ದುಲ್ ಖಾದಿರ ಕುನ್ನಿಭಾವಿ, ಅಂಜುಮನ ಉಪಾಧ್ಯಕ್ಷ ದಾವಲಸಾಬ ಮಸೂತಿ, ಸಂಜೀವಕುಮಾರ, ಕೇದಾರನಾಥ್, ಡಾ. ಅಬ್ದುಲರಝಾಕ ನದಾಫ್, ಸುಭಾನ್ ಬೆಪಾರಿ ಇತರರು ಉಪಸ್ಥಿತರಿದ್ದರು.