ಧಂಗಾಪೂರದಲ್ಲಿ ಡಾ. ಅಂಬೇಡ್ಕರ್ ಪ್ರತಿಮೆ 23ಕ್ಕೆ ಲೋಕಾರ್ಪಣೆ
ಆಳಂದ: ಜೂ.16:ಬರುವ 23 ರಂದು ಡಾ. ಬಾಬಾಸಾಬ ಅಂಬೇಡ್ಕರ ಅವರ ಮೂರ್ತಿ ಲೋಕಾರ್ಪಣೆ ಕುರಿತು ಸಿದ್ಧತೆ ಕೈಗೊಳ್ಳಲಾಗುತ್ತಿದೆ ಎಂದು ಮುಖಂಡ ಶಿವಲಿಂಗ ಎಸ್. ತೇಲ್ಕರ ಹೇಳಿದರು.
ಸಮಾರಂಭಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಪ್ರೀಯಾಂಕಾ ಖರ್ಗೆ ಅವರಿಂದ ಮೂರ್ತಿ ಲೋಕಾರ್ಪಣೆ ಹಾಗೂ ಬೀದರ ಲೋಕಸಭಾ ಸದಸ್ಯ ಸಾಗರ ಖಂಡ್ರೆ ಅವರಿಂದ ಶಿಲಾನ್ಯಾಸ ಅನಾವರಣ ಕೈಗೊಳ್ಳುವರು. ಮುಖ್ಯಮಂತ್ರಿ ಸಲಹೆಗಾರ ಶಾಸಕ ಬಿ.ಆರ್.ಪಾಟೀಲ್ ಅವರ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಕೆಎಂಎಫ್ ಅಧ್ಯಕ್ಷ ಆರ್.ಕೆ.ಪಾಟೀಲ್, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಡಾ. ಡಿ.ಜಿ.ಸಾಗರ, ನ್ಯಾಯವಾದಿ ಬಸಣ್ಣಾ ಸಿಂಗೆ, ಸಾಹಿತಿ ಎಸ್.ಪಿ. ಸುಳ್ಳದ, ದಲಿತ ಸೇನೆಯ ರಾಜಾಧ್ಯಕ್ಷ ಹಣಮಂತ ಯಳಸಂಗಿ, ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷ ಡಾ. ಸಿದ್ರಾಮಪ್ಪ ಮಾಲಿಪಾಟೀಲ್, ಮುಖಂಡ ರವಿ ಮದನಕರ, ಬೂಸನೂರ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಗುರುಲಿಂಗ ಜಂಗಮ ಮಾಲಿಪಾಟೀಲ್, ಜಿ.ಪಂ ಮಾಜಿ ಸದಸ್ಯ ಸಿದ್ಧಣ್ಣಾ ಮಾಸ್ತರ ಶೇಗಜಿ, ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ಜಗನ್ನಾಥ ಶೇಗಜಿ, ಎನ್.ಎಸ್.ಎಲ್ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ದೇವರಾಜಲು , ಕೆಎಂಎಫ್ ನಿದೇಶಕ ಈರಣ್ಣಾ ಝಳಕಿ ಸೇರಿದಂತೆ ಪ್ರಮುಖರನ್ನು ಆಹ್ವಾನಿಸಲಾಗುತ್ತಿದೆ ಎಂದು ಅವರು ಹೇಳಿದರು.
ಪ್ರಮುಖ ಕೃಷ್ಣಾ ಮೇಲಕೇರಿ, ಕೃಷ್ಣಾ ಕಾಂಬಳೆ, ಶರಣಬಸಪ್ಪ ಕಾಂಬಳೆ, ಅಮೃತ ಮೇಲಕೇರಿ, ದೇವಿಂದ್ರ ಮೇಲಕೇರಿ, ಶಿವಕುಮಾರ ಮೇಲಕೇರಿ, ಕಾಶಿನಾಥ ವಾಗ್ಮಾರೆ, ಭೀಮರಾವ ಮೇಲಕೇರಿ, ವಿಘ್ನೇಶ ತೇಲ್ಕರ್, ವಿಜಯಕುಮಾರ ಕಾಂಬಳೆ ಸೇರಿದಂತೆ ಸಮಾಜದ ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.