ಮೊಬೈಲ್ ದುರ್ಬಳಕೆ ಸೈಬರ್ ಅಪರಾಧಗಳ ಮೂಲ
ಧಾರವಾಡ,ಜೂ16: ಮಕ್ಕಳ ಮುಂದೆ ಮೊಬೈಲ್ ಬಳಸದೇ ಪುಸ್ತಕ ಹಿಡಿಯಿರಿ, ಪಾಲಕರು ಏನು ಮಾಡುತ್ತಾರೋ ಮಕ್ಕಳು ಅದನ್ನೇ ಮಾಡುವರು. ಮಕ್ಕಳು ಪಾಲಕರ ಪ್ರತಿಬಿಂಬ ಎಂಬುದನ್ನು ಮರೆಯಬಾರದು.ಇಂದುಯುವಕರುದಾರಿತಪ್ಪುತ್ತಿರುವುದೇ ಪಾಲಕರ ನಡೆ-ನುಡಿಯಿಂದಎಂದುಧಾರವಾಡಕೇಂದ್ರಕಾರಾಗ್ರಹದಆಂತರಿಕ ಭದ್ರತಾಅಧಿಕಾರಿ ಶಿವರಾಜ ಪಾಟೀಲ ನುಡಿದರು.
ಅವರುಕರ್ನಾಟಕ ವಿದ್ಯಾವರ್ಧಕ ಸಂಘದ ಮಹಿಳಾ ಮಂಟಪವು ಆಯೋಜಿಸಿದ್ದ ಸೈಬರ್‍ಅಪರಾಧ ಮಾಹಿತಿ ನೀಡುವಉಪನ್ಯಾಸಕಾರ್ಯಕ್ರಮದಅತಿಥಿಯಾಗಿ ಮಾತನಾಡುತ್ತಿದ್ದರು.
ಅವರು ಮುಂದುವರೆದು ಮಾತನಾಡುತ್ತಾ ಸೈಬರ್‍ಕ್ರೈಮ್‍ಗೆ ಒಳಗಾಗುವವರು ಹಳ್ಳಿಯ ರೈತಾಪಿ, ಕೂಲಿಕಾರರುಅಲ್ಲ, ಒಳ್ಳೆಯ ಶಿಕ್ಷಣ ಪಡೆದವರೇ ಹೆಚ್ಚು ಸೈಬರ್ ಕ್ರೈಮ್‍ಗಳಿಗೆ ಬಲಿಯಾಗುತ್ತಿರುವುದು ವಿಪರ್ಯಾಸವಾಗಿದೆ.ಇಂದು ತಾಳ್ಮೆಯಿಂದ ಯಾವುದು ಸರಿಯಾವುದುತಪ್ಪುಎಂದುಯೋಚನೆ ಮಾಡುವುದನ್ನು ಬಿಟ್ಟು, ಆಸೆಗೆ ಬಿದ್ದುಇಂಥಅಪರಾಧ ಮಾಡುವವರಜಾಲದಲ್ಲಿ ಸಿಲುಕುವುದು ಸಾಮಾನ್ಯವಾಗಿದೆ.ಯುವಕರು, ವಿದ್ಯಾರ್ಥಿಗಳು ಈ ಸೈಬರ್‍ಕ್ರೈಮ್‍ದ ಆಳ ಅಗಲವನ್ನು ಸರಿಯಾಗಿ ತಿಳಿದುಕೊಳ್ಳುವುದಕ್ಕಾಗಿ ಇಂಥ ಮಾಹಿತಿ ನೀಡುವ ಉಪನ್ಯಾಸಗಳು ಹೆಚ್ಚು ಹೆಚ್ಚು ನಡೆಯುವಂತಾಗಬೇಕುಎಂದರು.
ಹುಬ್ಬಳ್ಳಿ-ಧಾರವಾಡ ಸೈಬರ್‍ಅಪರಾಧ ವಿಭಾಗದ ಶಿವಾನಂದ ತಿಮ್ಮಾಪೂರ ಸೈಬರ್ ಅಪರಾಧ ಅಂದರೆ ಏನು? ಅದರ ಸ್ವರೂಪಗಳು ಎಂಥವಿರುತ್ತವೆ? ಎಂಥವರು ಇದಕ್ಕೆ ಬಲಿಯಾಗುತ್ತಾರೆ? ಹೇಗೆ ಬಲಿ ಹಾಕುತ್ತಾರೆ? ಎನ್ನುವ ಕುರಿತು ವಿಸ್ತøತÀವಾಗಿ ವಿದ್ಯಾರ್ಥಿಗಳಿಗೆ ಉದಾಹರಣೆಗಳೊಂದಿಗೆ ಎಳೆಎಳೆಯಾಗಿ ವಿದ್ಯಾರ್ಥಿಗಳಿಗೆ ಮನಮಟ್ಟುವಂತೆ ಹೇಳುತ್ತಾ, ಯಾವುದೇ ಯ್ಯಾಪಗಳನ್ನು, ಅರ್ಜಿಗಳನ್ನು, ಗೂಗಲ್ ದಿಂದ ಡೌನ್‍ಲೋಡ್ ಮಾಡುವಾಗ ಎಚ್ಚರಿಕೆಯಿಂದ ಇರಬೇಕು. ಇನಸ್ಟಾಗ್ರಾಮ್ ಬಳಸುವವರು ನಮಗೆ ಗೊತ್ತಿರದ ಫೋಟೊಗಳಿಗೆ ಲೈಕ್‍ಒತ್ತುವುದನ್ನು ನಿಲ್ಲಿಸಬೇಕು.ಒಂದು ಲೈಕ್ ಒತ್ತುವ ಮೂಲಕ ನಿಮ್ಮ ಪ್ರೊಫೈಲ್‍ದಲ್ಲಿಯ ಎಲ್ಲ ಮಾಹಿತಿ, ಫೋಟೊಗಳು ಅವರಿಗೆ ಲಭ್ಯವಾಗುತ್ತವೆ. ಅವನ್ನು ಇಟ್ಟುಕೊಂಡು ನಿಮ್ಮ ಸಲಿಗೆ ಬೆಳೆಸಿ ಮುಂದೊಂದು ದಿನ ನಿಮ್ಮನ್ನು ಬ್ಲ್ಯಾಕ್‍ಮೇಲ್ ಮಾಡಲು ಮುಂದಾಗುತ್ತಾರೆ, ಇಲ್ಲವೇ ನಿಮ್ಮ ಅಕೌಂಟ್ ಹಣಕ್ಕೆ ಕನ್ನ ಹಾಕುವುದನ್ನು ಮಾಡುತ್ತಾರೆ. ಮೊಬೈಲ್ ಎಷ್ಟು ಕಡಿಮೆ ಉಪಯೋಗ ಮಾಡುತ್ತಿರೋ ಅಷ್ಟು ವಿದ್ಯಾರ್ಥಿಗಳಿಗೆ ಒಳ್ಳೆಯದು.ಅದೇ ವೇಳೆಯನ್ನು ಪುಸ್ತಕ ಓದುವುದನ್ನು ಮಾಡಿದರೆ ನಿಮ್ಮಜ್ಞಾನದಕ್ಷಿತಿಜ ವಿಸ್ತಾರಗೊಳ್ಳುವುದು.
ಮನೆಯಲ್ಲಿ ಕುಳಿತು ಹಣ ಗಳಿಸಿರಿ, ಪಾರ್ಟ್‍ಟೈಮ್‍ಜಾಬ್ ಮಾಡಿ ಸಾವಿರ ಸಾವಿರ ಹಣ ಪಡೆಯಿರಿ.. ಹೀಗೆ ಹಲವು ರೀತಿಯಜಾಹಿರಾತು ನಂಬಿ ಮೋಸಹೋಗುವುದು ಸಾಮಾನ್ಯವಾಗಿದೆ.ದೊಡ್ಡದೊಡ್ಡ ವೈದ್ಯರೂಕೋಟಿಕೋಟಿ ಹಣ ಕಳೆದುಕೊಂಡಿದ್ದಾರೆ. ಯಾವುದು ಸರಿಯಾವುದುತಪ್ಪುಎಂದು ವಿವೇಕ ಬಳಸದೇ ಇದ್ದುದಕ್ಕೆಇಂದು ಸೈಬರ್‍ಅಪರಾದ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ.ಅದಕ್ಕಾಗಿ ವಿದ್ಯಾರ್ಥಿಗಳು ತಮ್ಮತಮ್ಮ ಮನೆಯಲ್ಲಿ ಪಾಲಕರಿಗೆ ತಿಳಿಹೇಳಿ.ಇಲ್ಲಿ ಪಡೆದ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.ಸೈಬರ್‍ಜಾಲದಲ್ಲಿ ಬೀಳದಂತೆ ಒಂದುಅಭಿಯಾಣವನ್ನು ಮಾಡುವುದುಅವಶ್ಯವಿದೆ.ಆ ನಿಟ್ಟಿನಲ್ಲಿ ಪ್ರತಿಕಾಲೇಜಿನ ವಿದ್ಯಾರ್ಥಿಗಳು ಒಂದುತಂಡ ಮಾಡಿಕೊಂಡುಕಾರ್ಯಪ್ರವೃತ್ತರಾಗಬೇಕಿದೆ.ತಂತ್ರಜ್ಞಾನ ಹೆಚ್ಚಾದಂತೆ ಅಪರಾಧಗಳೂ ಹೆಚ್ಚಾಗುತ್ತಾ ನಡೆದಿದ್ದು, ಯುವಜನಾಂಗಎಚ್ಚರಿಕೆಯ ಹೆಜ್ಜೆಇಡಬೇಕಿದೆ.
ಪೆಡ್ಲೆಕ್ಸ್‍ಕೋರಿಯರ್ ಮನೆಗೆ ಬರುತ್ತದೆ.ಇದರ ಮೂಲಕ ನಿಮಗೆ ಡ್ರಗ್ಸ್ ಮನೆಯಲ್ಲಿ ಇರುತ್ತದೆ. ಈ ಮೂಲಕ ನಿಮ್ಮನ್ನು ಸಿಬಿಐದವರು ಎಂದು ಫೋನ್ ಮಾಡಿ ಬ್ಲ್ಯಾಕ್ ಮೇಲ್ ಮಾಡಲು ಶುರುಮಾಡುತ್ತಾರೆ. ಇಂಥ ಹಲವು ರೀತಿಯಲ್ಲಿ ಸೈಬರ್‍ಕ್ರೈಮ್ ನಡೆಯುತ್ತವೆ. ಇಂಥಕೋರಿಯರ್ ಗಳಿಂದ ಎಚ್ಚರಿಕೆಯಿಂದ ಇರಬೇಕು. ಕರ್ನಾಟಕ ಪೊಲೀಸ್ ಯ್ಯಾಪ್ ಡೌನಲೋಡ್ ಮಾಡಿಟ್ಟುಕೊಂಡಿರಿ.ನಿಮಗೆ ಯಾವುದೇ ವೆಬ್‍ಸೈಟ್, ಲಿಂಕ್‍ಗಳು ಬಂದರೆ ಅವು ನಿಜವಿದ್ದಾವೆಯೇ ಎಂದು ತಿಳಿದುಕೊಳ್ಳಬೇಕಾದರೆ ಕರ್ನಾಟಕ ಪೊಲೀಸ್ ಯ್ಯಾಪ್‍ಗೆ ಹೋಗಿ ಆ ಲಿಂಕ್‍ಗಳನ್ನು ಹಂಚಿಕೊಂಡರೆ ಸಾಕು, ಆ ಲಿಂಕಗಳ ಸತ್ಯಾಸತ್ಯತೆಯ ಕುರಿತು ಮಾಹಿತಿ ನೀಡಲಾಗುವುದು.ಮೊಬೈಲ್ ಕಳೆದುಕೊಂಡಿದ್ದರೆ ಸಿಇಐರ್ ಪೋರ್ಟಲ್ ಗೆ ಹೋಗಿ ಮೊಬೈಲ್ ಮಾಹಿತಿ ನೀಡಿದರೆ ನಿಮಗೆ ಪೊಲೀಸ್ ಇಲಾಖೆ ನಿಮ್ಮ ಮೊಬೈಲ್ ಹುಡಿಕಿಕೊಡುವುದು.ಹೀಗೆ ಹಲವು ರೀತಿಯಲ್ಲಿ ಸೈಬರ್ ಕ್ರೈಮ್‍ಗಳನ್ನು ತಡೆಯುವ ಪ್ರಯತ್ನ ಇಲಾಖೆ ಮಾಡುತ್ತಿದೆ.ಪೊಲೀಸ್ ಇಲಾಖೆ ಒಂದೇ ಮಾಡಿದರೆ ಸಾಲದುಜನರೂಎಚ್ಚರಗೊಂಡು ಸೈಬರ್‍ಕ್ರೈಮ್‍ತಡೆಯುವಕಾರ್ಯದಲ್ಲಿಕೈಜೋಡಿಸಬೇಕುಎಂದು ಶಿವಾನಂದ ತಿಮ್ಮಾಪೂರ ಹೇಳಿದರು.ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಹಲವಾರು ಮಾಹಿತಿಯನ್ನು ನೀಡಿದರು.
ಕರ್ನಾಟಕ ವಿದ್ಯಾವರ್ಧಕ ಸಂಘದಉಪಾಧ್ಯಕ್ಷೆ ಮಾಲತಿ ಪಟ್ಟಣಶೆಟ್ಟಿಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿದರು.ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಮಹಿಳಾ ಮಂಟಪದ ಸಂಚಾಲಕಿ ಡಾ.ಶೈಲಜಾಅಮರಶೆಟ್ಟಿ ಸ್ವಾಗತಿಸಿದರು.ಜ್ಯೋತಿ ಭಾವಿಕಟ್ಟಿ ವಂದಿಸಿದರು. ಡಾ. ವಿ. ಶಾರದಾ ಅತಿಥಿಗಳನ್ನು ಪರಿಚಯಿಸಿದರು.ಸವಿತಾಕುಸುಗಲ್ಲ ನಿರೂಪಿಸಿದರು.ಕರ್ನಾಟಕಕಾಲೇಜಿನ ವಿದ್ಯಾರ್ಥಿನಿ ಕಾವೇರಿ ಪ್ರಾರ್ಥಿಸಿದರು.
ಧಾರವಾಡದ ವಿವಿಧ ಕಾಲೇಜುಗಳಿಂದ ಸುಮಾರು 200 ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಅನೇಕ ಪ್ರಶ್ನೆಗಳ ಮೂಲಕ ಸಂವಾದಕಾರ್ಯಕ್ರವನ್ನು ಅರ್ಥಪೂರ್ಣಗೊಳಿಸಿದರು. ವಿವಿಧ ಕಾಲೇಜುಗಳ ಪ್ರಾಧ್ಯಾಪಕರು ಹಾಗೂ ಮಹಿಳಾ ಮಂಟಪದ ಸಲಹಾ ಸಮಿತಿ ಸದಸ್ಯರು, ಪ್ರೊ. ಎಂ.ಆರ್. ಈಶಣ್ಣ, ನಿರ್ಮಲಾಚಿಗಟೇರಿ, ಮಹಾಂತೇಶ ನರೇಗಲ್ಲ, ಬೆಟಗೇರಿ, ಪ್ರಮೀಳಾ ಜಕ್ಕಣ್ಣವರ ಸೇರಿದಂತೆ ಮುಂತಾದವರಿದ್ದರು.