ಆರೋಗ್ಯ ಸೇವಾರತ್ನ ಪ್ರಶಸ್ತಿ ಪ್ರದಾನ
ಧಾರವಾಡ,ಜೂ16 : ಸಂಕಷ್ಟ, ಬಿಕ್ಕಟ್ಟುಗಳನ್ನು ಎದುರಿಸಿ ವೈದ್ಯಕೀಯ ವೃತ್ತಿ ಮಾಡುವದುಒಂದುಕಷ್ಟದಾಯಕ ಕೆಲಸ. ಆತ್ಮ ಸಾಕ್ಷಿ ಹೊರಗಿಟ್ಟು ವೈದ್ಯರಾಗಿ ಸೇವೆ ಸಲ್ಲಿಸಬಹುದು. ಆದರೆ ಹಾಗೆ ಮಾಡಲು ಬರುವುದಿಲ್ಲ ಎಂದು ಹುಬ್ಬಳ್ಳಿಯ ವಿವೇಕಾನಂದಜನರಲ್‍ಆಸ್ಪತ್ರೆಯ ವಿಶ್ರಾಂತ ವೈದ್ಯಕೀಯ ಮುಖ್ಯಾಧಿಕಾರಿಡಾ.ರಮೇಶ ಬಾಬು ಹೇಳಿದರು.
ಅವರುಕರ್ನಾಟಕ ವಿದ್ಯಾವರ್ಧಕ ಸಂಘವು ಶ್ರೀಮತಿ ಅನ್ನಪೂರ್ಣಮ್ಮ ಸಿದ್ಧಲಿಂಗಶಾಸ್ತ್ರಿ ಹಿರೇಮಠದತ್ತಿ ಅಂಗವಾಗಿ ಏರ್ಪಡಿಸಿದ್ದ ಆರೋಗ್ಯ ಸೇವಾರತ್ನ 2024 ಪ್ರಶಸ್ತಿ' ಪ್ರಧಾನ ಸಮಾರಂಭದಲ್ಲಿಆರೋಗ್ಯ ಸೇವಾರತ್ನ’ ಪ್ರಶಸ್ತಿ ಸ್ವೀಕರಿಸಿ, ಮಾತನಾಡುತ್ತಿದ್ದರು.
ಧಾರವಾಡಎಸ್.ಡಿ.ಎಂ.ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯೆಡಾ.ರತ್ನಮಾಲಾದೇಸಾಯಿ ಮಾತನಾಡಿ, ಒಳ್ಳೆಯ ವೈದ್ಯನಿಗೆ ಆಳವಾದ ಜ್ಞಾನವಿರಬೇಕು.ರೋಗಿಗಳ ಬಗ್ಗೆ ಕಾಳಜಿ ಇರಬೇಕು, ವ್ಯವಹಾರಿಕಅಥವಾ ವ್ಯಾಪಾರಿ ಮನೋಭಾವನೆಯಿಂದ ರೋಗಿಗಳನ್ನು ಕಾಣಬಾರದು.ಇಂತವರು ನಿಜವಾದ ವೈದ್ಯರು ಎನಿಸಿಕೊಳ್ಳುತ್ತಾರೆ.ಹಿಂದೆ ವೈದ್ಯರು ಹೇಳಿದ್ದನ್ನು ಕೇಳುವ ಪ್ರವೃತ್ತಿಇತ್ತು.ವೈದ್ಯರುಎಂದರೆತಂದೆಯ ಸಮಾನ ಎಂಬ ನಂಬಿಕೆ ಇತ್ತು.ವೈದ್ಯರಲ್ಲಿ ಸೇವಾಮನೋಭಾವವಿತ್ತು.ಇವತ್ತಿನ ಬಾಂಧವ್ಯ ವ್ಯಾಪಾರಿಕರಣದಒಪ್ಪಂದವಾಗಿರುವುದುಖೇದದ ಸಂಗತಿ.ದೇವರು ಕೆಲವರನ್ನು ಸಿಲೆಕ್ಟ್ ಮಾಡಿ ವೈದ್ಯರನ್ನಾಗಿ ಮಾಡಿಸಿ ಸೇವೆ ಮಾಡಲು ಕಳಿಸಿರುತ್ತಾನೆ. ಈ ಅವಕಾಶವನ್ನು ಬಳಸಿಕೊಂಡು ರೋಗಿಗಳ ಸೇವೆ ಮಾಡುವಂತಾಗಬೇಕು.
ಹೆರಿಗೆ ಮತ್ತು ಸ್ತೀ ಆರೋಗ್ಯತಜ್ಞಡಾ. ಸಂಜೀವಕುಲಕರ್ಣಿಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ವಿಜ್ಞಾನ, ತಂತ್ರಜ್ಞಾನತೀವ್ರವಾಗಿ ಬೆಳೆಯುತ್ತಿದ್ದುದರಿಂದ ವೈದ್ಯಕೀಯ ಲೋಕದಲ್ಲೂ ಬದಲಾವಣೆಆಗಿದೆ.ಇವತ್ತುಜನಸಂಖ್ಯೆಅಧಿಕವಾಗಿದೆ.ಮೊದಲಿನ ಮನುಷ್ಯ ಸಂಬಂಧಗಳು ಕಡಿಮೆಯಾಗುತ್ತಿವೆ. ವೈದ್ಯರ ರೋಗಿಗಳನ ಜೊತೆಗಿನ ಸ್ಪಂದನೆಕಡಿಮೆಯಾಗುತ್ತಿದೆ.ಈ ರೀತಿಯ ಸಂಬಂಧಗಳನ್ನು ವೈದ್ಯಕೀಯಕ್ಷೇತ್ರದಲ್ಲಿ ಪುನಃ ತಂದುಕೊಳ್ಳುವುದು ಹೇಗೆ ಎಂದು ವಿಚಾರ ಮಾಡಬೇಕಾದಅಗತ್ಯವಿದೆ. ಹೊಸ ತಲೆಮಾರಿನ ವೈದ್ಯರು ಯಂತ್ರೋಪಕರಣಗಳನ್ನು ಬಳಕೆ ಮಾಡುತ್ತಿರುವುದರಿಂದ ಸಂಕೀರ್ಣ ಮನೋಭಾವ ಬೆಳೆಯುತ್ತಿದೆ. ನಂಬಿಕೆ, ವಿಶ್ವಾಸ, ಪ್ರೀತಿ, ಕಾಳಜಿ ವೈದ್ಯರು ಮತ್ತು ರೋಗಿಗಳ ಮಧ್ಯದಲ್ಲಿಕಡಿಮೆಯಾಗುತ್ತಿವೆ. ಈ ಕುರಿತುಗಂಭೀರಚರ್ಚೆ ನಡೆದು ವೈದ್ಯಕೀಯ ಲೋಕ ಆರೋಗ್ಯವಾಗಿ ಮುನ್ನಡೆಯುವಂತಾಗಲಿ ಎಂದರು.
ಹುಬ್ಬಳ್ಳಿಯ ವಿವೇಕಾನಂದಜನರಲ್‍ಆಸ್ಪತ್ರೆಯ ವಿಶ್ರಾಂತ ವೈದ್ಯಕೀಯ ಮುಖ್ಯಾಧಿಕಾರಿಡಾ. ರಮೇಶ ಬಾಬು ಅವರಿಗೆ `ಆರೋಗ್ಯ ಸೇವಾರತ್ನ ಪ್ರಶಸ್ತಿ’ ನೀಡಿಗೌರವಿಸಲಾಯಿತು.
ಶಂಕರ ಕುಂಬಿ ಸ್ವಾಗತಿಸಿದರು.ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಡಾ. ಜಿನದತ್ತ ಹಡಗಲಿ ನಿರೂಪಿಸಿದರು. ವೀರಣ್ಣಒಡ್ಡೀನ ವಂದಿಸಿದರು.
ಕಾರ್ಯಕ್ರಮದಲ್ಲಿ ಸತೀಶ ತುರಮರಿ,ಡಾ. ಶೈಲಜಾಅಮರಶೆಟ್ಟಿ, ಕೆ.ಎಚ್. ನಾಯಕ, ಮಹಾಂತೇಶ ನರೇಗಲ್, ಡಾ. ಪಾರ್ವತಿ ಹಾಲಭಾವಿ, ಪ್ರಮೀಳಾ ಜಕ್ಕಣ್ಣವರ, ಕೆ ಸರೋಜಿನಿ ದೇವಮಾನೆ, ಬಿ.ಜಿ. ಸಂತೋಜಿ, ಯಕ್ಕೇರಪ್ಪ ನಡುವಿನಮನಿ ಸೇರಿದಂತೆ ಮುಂತಾದವರಿದ್ದರು.