ಕೂಡಿ ಬಾಳಿದರೆ ಬದುಕು ಹಸನು: ಮೌಲಾನಾ ನುರುಲ್ ಹಕ್
ಔರಾದ್:ಜೂ.16: ಮನುಷ್ಯನ ಧರ್ಮ, ಜಾತಿ, ಮತ, ಲಿಂಗ, ಬಣ್ಣ ಆಕಾರಗಳಿಂದ ಬೇರೆ ಬೇರೆಯಾದರೂ ಆತನೊಳಗಿನ ಜೀವಸೆಲೆ ಒಂದೇ ಆಗಿದೆ. ಭಾರತ ಸರ್ವಶ್ರೇಷ್ಠವಾದ ನೆಲ, ವೈವಿಧ್ಯಮಯ ಸಂಸ್ಕøತಿಯ ಬಿಡು. ಹಲವು ಧರ್ಮ ಜಾತಿ ಭಿನ್ನತೆಯ ಏಕತೆಯನ್ನು ಭಾವೈಕತೆಯನ್ನು ಮೆರೆಯುವ ರಾಷ್ಟ್ರವಾಗಿದೆ. ಪರಸ್ಪರ ಪ್ರೀತಿ- ಸ್ನೇಹ ಬಂದುತ್ವದಿಂದ ಮನುಷ್ಯನ ಬದುಕು, ಸುಂದರವಾಗಲು ಸಾಧ್ಯವಿದೆ ಎಂದು ಮೌಲಾನಾ ನುರುಲ್ ಹಕ್ ಸಹಾಬ ಕಾಸ್ಮಿ ಹೇಳಿದರು.
ತಾಲ್ಲೂಕಿನ ಭಂಡಾರಕುಮಟ ಗ್ರಾಮದಲ್ಲಿ ಶುಕ್ರವಾರ ನೂತನವಾಗಿ ಕಟ್ಟಿದ ಜಾಮಾ ಮಸಜೀದನ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮಕ್ಕಳಲ್ಲಿ ಸರ್ವಧರ್ಮ ಸಮಭಾವವನ್ನು ಹುಟ್ಟಿಸಿದರೆ ಅವರು ಭವಿಷ್ಯದ ಶ್ರೇಷ್ಠ ನಾಗರಿಕರಾಗುವುದಕ್ಕೆ ಸಾಧ್ಯ ಎಂದು ಹೇಳಿದರು.
ಹಿರಿಯ ಮುಖಂಡ ಗ್ರಾಪಂ ಸದಸ್ಯ ತೆಜೆರಾವ ಮುಳೆ ಮಾತನಾಡಿ ನಿಸರ್ಗಕ್ಕೆ ಇಲ್ಲದ ಬೇದಭಾವ ಮನುಷ್ಯನ ಮನಸ್ಸಿನಲ್ಲಿ ಹುಟ್ಟಿಸಿದರಲ್ಲ. ಅದು ಒಂದು ತಪ್ಪು ಕಲ್ಪನೆಯಾಗಿದೆ. ನಿಜವಾದ ಧರ್ಮ ಎಂದರೇ ಎಲ್ಲರೂ ಕೂಡಿ ಬದುಕುವುದು ಎಂದು ತಿಳಿಸಿದರು.
ಮೌಲಾನಾ ಇಬ್ರಾಹಿಂ, ಮಾತನಾಡಿ, ಇಂದು ಭೂಮಿಯ ಮೇಲೆ ಐದು ಬಾರಿ ಅಜಾನ್ ಮೂಳುಗುತ್ತದೆ ಅಲ್ಲಾಹು ಅಕ್ಬರ್ ಅಂತ ಹೇಳಲಾಗುತ್ತದೆ ಅಕ್ಬರ್ ಅಂದರೆ ಭೂಮಿ ಮೇಲೆ ಆಳ್ವಿಕೆ ಮಾಡಿದ ರಾಜ ಅಕ್ಬರ್ ಅಲ್ಲ ಇದರ ಅರ್ಥ ದೇವ ನೊಬ್ಬ ಎಂದಾಗುತ್ತದೆ ಇದರ ಅಪಾರ್ಥ ತಿಳಿಯಬಾರದು ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಹೈದರಾಬಾದನ ದಾನಿ ಜನಾಬ ರಷಿದ್ ಸಾಬ್, ಜಿಪಂ ಮಾಜಿ ಸದಸ್ಯ ಅಶೋಕರಾವ್ ಮುಳೆ, ನಾರಾಯಣರಾವ್ ಪಾಟೀಲ, ಗಣಪತರಾವ ಪಾಟೀಲ, ವಸಂತ ಜಬ್ಬಡವಾರ್, ಮಹಾದಯ್ಯ ಸ್ವಾಮಿ, ದೇವಿದಾಸ್ ಮೇತ್ರೆ, ಗ್ರಾಪಂ ಸದಸ್ಯರಾದ ಜೀಯಾಉಲ್ ಹಕ್, ಮಹೇಬೂಬಸಾಬ್ ತೋರಣೆ, ಜಾಮಾ ಮಸಜೀದನ ಅಧ್ಯಕ್ಷ ಮೊಹಮ್ಮದ್ ಹನೀಫ ಸಾಬ್, ಕಾರ್ಯದರ್ಶಿ ಈಸಾಖನ್ ಪಟೇಲ್, ಐಜಿಎಮ್ ಕಂಪ್ಯೂಟರನ ನಿರ್ದೇಶಕ ಇರ್ಫಾನ್ ಖಾನ್, ಹಶನಸಾಬ್, ಮಹಮ್ಮದ್ ಇಸಾ, ಮುಸಾ ಮೇಕಾನೀಕ್, ನಬಿಖಾನ್ ಪಟೇಲ್ ಸೇರಿದಂತೆ ಇತರರು ಇದ್ದರು.