ಕಾನೂನು ಸುವ್ಯವಸ್ಥೆ ಕಾಪಾಡಿ:ನಾಯಕ
ಸೈದಾಪುರ:ಜೂ.16:ಇತರರಿಗೆ ತೊಂದರೆ ಆಗದಂತೆ ಕಾನೂನು ಸುವ್ಯವಸ್ಥೆಯೊಂದಿಗೆ ಹಬ್ಬವನ್ನು ಆಚರಿಸಿ ಎಂದು ಅರಕ್ಷಕ ನಿರೀಕ್ಷಕರಾದ ವಿನಾಯಕ ನಾಯಕ ಅಭಿಪ್ರಾಯಪಟ್ಟರು.
ಇಲ್ಲಿನ ಪೊಲೀಸ್ ಠಾಣೆಯಲ್ಲಿ ಬಕ್ರೀದ ಹಬ್ಬದ ಪ್ರಯುಕ್ತ ಆಯೋಜಿಸಲಾದ ಶಾಂತಿ ಸಭೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಶಾಂತಿಯಿಂದ ಉತ್ತಮ ಸಮಾಜ ಕಂಡುಕೊಳ್ಳಲು ಸಾಧ್ಯವಿದೆ. ಈ ದಿಸೆಯಲ್ಲಿ ನಾವು ಪ್ರಯತ್ನ ಮಾಡೋಣ. ಇದಕ್ಕಾಗಿ ನಮ್ಮ ಪೊಲೀಸ್ ಇಲಾಖೆ ದಿನದ 24 ತಾಸು ನಿಮಗೆ ಸೇವೆ ನೀಡುತ್ತದೆ. ನಾಗರಿಕರ ರಕ್ಷಣೆ ನಮ್ಮ ಜವಬ್ದಾರಿಯಾಗಿದ್ದೂ ಇದಕ್ಕೆ ತೊಂದರೆಯಾದಾಗ ಕಾನೂನು ಮೂಲಕ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು. ಪಿಎಸ್‍ಐ ಅಲ್ಲಾಬಕ್ಷ, ಗ್ರಾಮಸ್ಥರು, ಮುಖಂಡರು, ಸಿಬ್ಬಂದಿ ವರ್ಗ ಸೇರಿದಂತೆ ಇತರರಿದ್ದರು.