ಉತ್ತಮ ಫಲಿತಾಂಶಕ್ಕೆ ಆಟದ ಜೊತೆಗೆ ಗುಣಮಟ್ಟದ ಶಿಕ್ಷಣ ನೀಡಿ: ಎಸ್ ಎಸ್ ಮಠಪತಿ
ಅಫಜಲಪುರ:ಜೂ.16: ಕಳೆದ ಶೈಕ್ಷಣಿಕ ಸಾಲಿನ ಫಲಿತಾಂಶಕ್ಕಿಂತ ಈ ವರ್ಷ ಹೆಚ್ಚು ಪ್ರತಿಶತ ಫಲಿತಾಂಶ ಬರುವಂತೆ ಮಕ್ಕಳಿಗೆ ಆಟದ ಜತೆಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಆಡಳಿತಾಧಿಕಾರಿಗಳಿಗೆ ಮುಖ್ಯ ಯೋಜನಾಧಿಕಾರಿ ಎಸ್. ಎಸ್ ಮಠಪತಿ ಹೇಳಿದರು.
ತಾಲ್ಲೂಕು ಪಂಚಾಯತ ಸಭಾಂಗಣದಲ್ಲಿ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಹೆಚ್ಚುಇನ ಕಾಳಚಿ ವಹಿಸಿ ಫಲಿತಾಂಶ ಕುಂಠಿತ ಬಗ್ಗೆ ತಿಳಿದು ಬಗೆಹರಿಸಲು ಸೂಚಿಸಿದರು. ಕುಡಿಯುವ ನೀರಿನ ಸಮಸ್ಯೆ ಬಗ್ಗೆ ತುರ್ತಾಗಿ ಕೆಲಸ ಮಾಡಬೇಕು. ಕಲುಷಿತ ನೀರಿನ ಬಗ್ಗೆ ಮಾಹಿತಿ ನೀಡಲು ತಿಳಿಸಿದರು. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ ಬೀದಿ ದೀಪಗಳನ್ನು ಅಳವಡಿಸಬೇಕು. ಮಳೆಗಾಲ ಇರುವ ಕಾರಣ ಹೆಚ್ಚು ರೋಗಗಳು ಹರಡುವ ಸಾಧ್ಯತೆ ಇರುತ್ತದೆ ಹೀಗಾಗಿ ಆರೋಗ್ಯ ಇಲಾಖೆಯವರು ಹೆಚ್ಚಿನ ಮುತುವರ್ಜಿ ವಹಿಸಿ ಕೆಲಸ ಮಾಡಬೇಕು. ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಅಭಿವೃದ್ಧಿ ಕಾಮಾಗಾರಿಗಳನ್ನು ಮಾಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ವೀರಣ್ಣ ಕವಲಗಿ, ಸಹಾಯಕ ನಿರ್ದೇಶಕ ರಮೇಶ ಪಾಟೀಲ, ತಾಲೂಕು ಯೋಜನೆ ಅಧಿಕಾರಿ ಡಾ. ರೇಣುಕಾ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ತಾಲೂಕು ಪಂಚಾಯತ ಸಿಬ್ಬಂದಿ ಇದ್ದರು.