ಸನಾತನ ಹಿಂದೂ ಸಂಸ್ಕøತಿ ಕಾಪಾಡಲು ವಿವಾಹ ಅತಿ ಅವಶ್ಯ:ಶಂಕರಭಟ್ ಜೋಶಿ
ಸಂಜೆವಾಣಿ ವಾರ್ತೆ,
ವಿಜಯಪುರ,ಜೂ.16:ಸನಾತನ ಹಿಂದೂಧರ್ಮ ಭಾರತೀಯ ಸಂಸ್ಕೃತಿ ಕಾಪಾಡಲು ಹಾಗೂ ಸಂತತಿ ಬೆಳೆಯಲು ಬ್ರಾಹ್ಮಣರು ಸೇರಿದಂತೆ ಸಮಸ್ತ ಹಿಂದೂ ಸಮಾಜ ವಿವಾಹ ಆಗುವದು ಅತೀ ಅವಶ್ಯ ಎಂದು ಆನಂದವನ ಅಗಡಿಯ ವೇ.ಬ್ರ.ಶಂಕರಭಟ್ಟ ಜೋಶಿ (ಕಮಡೊಳ್ಳಿ) ಹೇಳಿದರು.
ಶನಿವಾರ ನಗರದ ಹೊರವಲಯದ ಶ್ರೀ ಶಿವಚಿದಂಬರೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ವಿಜಯಪುರದಿಂದ ಶ್ರೀಕ್ಷೇತ್ರ ಕೆಂಗೇರಿ ಮುರುಗೋಡಕ್ಕೆ ಸತತ 25 ವರ್ಷಗಳ ಪಾದಯಾತ್ರೆ ಸಂಪನ್ನಗೊಂಡ ಪ್ರಯುಕ್ತ ಪಾದಯಾತ್ರಿಕರಿಗೆ ಸೇವೆ ಸಲ್ಲಿಸಿದ ಭಕ್ತಾದಿಗಳಿಗೆ ಸನ್ಮಾನ ಸಮಾರಂಭ ನಿಮಿತ್ಯ ವಿಶೇಷವಾಗಿ ಹಮ್ಮಿಕೊಂಡಿದ್ದ ಸ್ವಯಂವರ ಪಾರ್ವತಿ ಹೋಮದ ನೇತೃತ್ವವನ್ನು ವಹಿಸಿ ಆಶೀರ್ವಚನ ನೀಡಿದರು.
ಬ್ರಾಹ್ಮಣ ಸಮಾಜದಲ್ಲಿನ ಗಂಡು-ಹೆಣ್ಣುಗಳ ವಿವಾಹದಲ್ಲಿ ಸಮಸ್ತ ಬ್ರಾಹ್ಮಣ ಸಮಾಜದ ಸಮತೋಲನ ಕಾಪಾಡಿಕೊಳ್ಳುವದರ ಜೊತೆಗೆ ವರ ಹಾಗೂ ಕನ್ಯಾಗಳ ಪಿತೃಗಳ ಪೆÇೀಷಕರು ಹೊಂದಿಕೊಂಡು ಹೋಗಬೇಕೆಂದು ಕರೆ ನೀಡಿದರು. ಬ್ರಾಹ್ಮಣರಲ್ಲಿ ವಿಚ್ಚೇದನ ಪ್ರಮೇಯ ಬರಬಾರದು. ಇತ್ತೀಚಿನ ದಿನಗಳಲ್ಲಿ ವಿಚ್ಚೇದನ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಅದರಲ್ಲೂ ವಿಶೇಷವಾಗಿ ಬ್ರಾಹ್ಮಣರÀಲ್ಲೂ ವಿಚ್ಚೇದನ ಪ್ರಕರಣ ಕಂಡು ಬರುತ್ತಿವೆ. ಅದು ಆಗಬಾರದು. ವಿಪ್ರರಲ್ಲಿ ವಿವಾಹ ವಿಚ್ಚೇದನ ಪ್ರಮೇಯ ಎಂದಿಗೂ ಬರಬಾರದು. ಸಂಸಾರ ಎಂದರೆ ಸಾಕಷ್ಟು ತೊಂದರೆಗಳು ಅಡಚಣೆಗಳು ನೋವುಗಳು ಇರುವದು ಸಹಜ. ಅವೆಲ್ಲವನ್ನು ಸುಧಾರಿಸಿಕೊಂಡು ಸಂಸಾರ ನೌಕೆ ನಡೆಸುಕೊಂಡು ಹೋಗಬೇಕೆಂದು ತಿಳಿಸಿದರು.
ಭಾರತೀಯ ಸಂಸ್ಕೃತಿ ಉಳಿಸುವಲ್ಲಿ ಮಾತೆಯರ ಪಾತ್ರ ಬಹಳ ಮುಖ್ಯವಾಗಿದೆ. ಅವರು ದೃಢ ನಿಶ್ಚಯಗೊಂಡಾಗ ಅದು ಸಾಧ್ಯವಾಗುತ್ತದೆ. ಹಾಗೆಯೇ ಪಾರ್ವತಿ ಕಲ್ಯಾಣ ಸ್ವಯಂವರದಲ್ಲಿ ಪಾರ್ವತಿ ಪರಮೇಶ್ವರನನ್ನು ಪಡೆದಳು. ಸ್ಕಂದ ಪುರಾಣದ ಪ್ರಕಾರ ಸಂಸಾರವೆಂಬ ನೌಕೆಯನ್ನು ಸರಾಗವಾಗಿ ನಡೆಸಲು ಉದಾರವಾದ ಪತ್ನಿಯನ್ನು ನಮಗೆ ದಯಪಾಲಿಸಲು ಎಂಬುವುದು ಉಲ್ಲೇಖವಿದೆ ಎಂದು ಪ್ರತಿಪಾದಿಸಿದರು.
ದಿಂಡಿ ಪಾದಯಾತ್ರೆಯಿಂದ ಪುಣ್ಯ ಪ್ರಾಪ್ತಿ:
15-20 ವರ್ಷಗಳಿಂದ ಹುಬ್ಬಳ್ಳಿಯಿಂದ ಶ್ರೀಕ್ಷೇತ್ರ ಕೆಂಗೇರಿ ಮುರುಗೋಡಕ್ಕೆ ಪಾದಯಾತ್ರೆ ಬರುತ್ತಿದ್ದ ಭಕ್ತರೊಬ್ಬರಿಗೆ ಮಕ್ಕಳಿಲ್ಲದೆ ಬಳಲುತ್ತಿದ್ದರು. ಅವರು ಒಂದು ದಿನ ಶ್ರೀಚಿದಂಬರೇಶ್ವರನಲ್ಲಿ ಪ್ರಾರ್ಥಿಸಿ ಪಾದಯಾತ್ರಿಕರ ದಿಂಡಿಯನ್ನು ಮನೆಗೆ ಕರೆದುಕೊಂಡು ಬಂದು ಪಾದಪೂಜೆ ಮಾಡಿದ ತರುವಾಯ ಅವರಿಗೆ ಮೂರು ವರ್ಷಗಳ ನಂತರ ಗಂಡು ಮಗುವಿನ ಸಂತಾನವಾಯಿತೆಂದು ಶ್ರೀ ಶಿವಚಿದಂಬರೇಶ್ವರನ ಮಹಿಮೆಯನ್ನು ಬಣ್ಣಿಸಿದರು.
ನಂತರ ಸಂಜೆ ಪ.ಪೂ.ಶ್ರೀ ವಿಶ್ವನಾಥಚಕ್ರವರ್ತಿ ಗುರುಗಳು ಶ್ರೀಕ್ಷೇತ್ರ ಅಗಡಿ ಇವರಿಂದ ಪ್ರವಚನ ಜರುಗಿತು. ಸಂಜೆ.630 ಕ್ಕೆ ಸೂರಮಣಿ ಮಹೇಶ ಕುಲಕರ್ಣಿ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು. ಇದಕ್ಕೂ ಮೊದಲು ಲೋಕ ಕಲ್ಯಾಣಾರ್ಥವಾಗಿ ಅವಿವಾಹತರಿಗೆ ವಿವಾಹ ಕಂಕಣ ಭಾಗ್ಯದ ಸಂಕಲ್ಪದೊಂದಿಗೆ ಹಮ್ಮಿಕೊಂಡಿದ್ದ ಸ್ವಯಂವರ ಪಾರ್ವತಿ ಹೋಮ ಪುರ್ಣಾಹುತಿ ನಡೆಯಿತು.
ಈ ಸಂದರ್ಭದಲ್ಲಿ ಸಮಿತಿ ಉಪಾಧ್ಯಕ್ಷ ಮಾಧು ಜೋಶಿ, ರಾಘವೇಂದ್ರ ಜೋಶಿ, ಲಕ್ಷ್ಮಿಕಾಂತ ಕುಲಕರ್ಣಿ, ಶಂಕರಭಟ್ಟ ಅಗ್ನಿಹೋತ್ರಿ, ಪತ್ರಕರ್ತರಾದ ಮಾಧವರಾವ ಕುಲಕರ್ಣಿ, ಸೀತಾರಾಮ ಕುಲಕರ್ಣಿ, ವೆಂಕಟೇಶ ಜೋಶಿ ನಂದವಾಡಗಿ, ಅನೀಲ ಜೋಶಿ, ಮಂಜುನಾಥ ಜೋಶಿ, ವೆಂಕಟೇಶ ಜೋಶಿ, ನಾಗು ಜೋಶಿ. ಸುದೀಂಧ್ರ ಜೋಶಿ, ದೀಪಕ ಜೋಶಿ, ಮಾಲತೇಶ ಕುಲಕರ್ಣಿ, ವಿಜಯ ಜೋಶಿ, ಸಚಿನ ಜೋಶಿ, ಪ್ರಾಣೇಶ ಕುಲಕರ್ಣಿ, ವಿ.ಸಿ. ಕುಲಕರ್ಣಿ, ಪಣೀಂಧ್ರ ಜೋಶಿ, ಗಂಗೂಬಾಯಿ ಹುನಗುಂದ, ಹೇಮಾ ಜೋಶಿ, ಶೋಭಾ ಜೋಶಿ, ವನಮಾಲಾ ಕುಲಕರ್ಣಿ, ಮಾನಿಕ ಕುಲಕರ್ಣಿ ಹಾಗೂ ಸಂದೀಪ ಕುಲಕರ್ಣಿ, ಸಂಜು ಕುಲಕರ್ಣಿ ಸೇರಿದಂತೆ ಸಕಲ ಸದ್ಬಕ್ತರು ಪಾಲ್ಗೊಂಡಿದ್ದರು.