ಮಾರ್ಟಳ್ಳಿ ಎಲ್ಲೆಂದರಲ್ಲಿ ಕಸದ ರಾಶಿ: ಸ್ವಚ್ಛತೆಯ ಬಗ್ಗೆ ನಿರ್ಲಕ್ಷ
ಸಂಜೆವಾಣಿ ವಾರ್ತೆ
ಹನೂರು ಜೂ 16 :- ತಾಲೂಕಿನ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನವಾಗಿದ್ದು ಕೇಂದ್ರ ಸ್ಥಾನದಲ್ಲೇ ಎಲ್ಲಂದರಲ್ಲಿ ಕಸದ ರಾಶಿ ಗುಡ್ಡೆ ಹಾಕಿ ಅನೈರ್ಮಲ್ಯ ತಾಂಡವಾಡುತ್ತಿದ್ದರು ಈ ಬಗ್ಗೆ ಗಮನಹರಿಸದ ಪಂಚಾಯತಿ ಆಡಳಿತ ವ್ಯವಸ್ಥೆಯು ಸ್ವಚ್ಛತೆ ಬಗ್ಗೆ ನಿರ್ಲಕ್ಷ ವಹಿಸಿರುವ ಬಗ್ಗೆ ಗ್ರಾಮಸ್ಥರು ಆರೋಪ ಮಾಡಿದ್ದಾರೆ.
ಮಾರ್ಟಳ್ಳಿ ಗ್ರಾಮದ ಮುಖ್ಯ ರಸ್ತೆಯಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದಿದ್ದು ಗಬ್ಬು ನಾರುತ್ತಿದೆ. ಇದರಿಂದ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತಿದ್ದು, ಜೊತೆಗೆ ಹಸುಗಳು ಇದನ್ನು ಚೆಲ್ಲಾಪಿಲ್ಲಿ ಮಾಡಿ ಇನ್ನಷ್ಟು ಗಲೀಜು ಮಾಡುತ್ತಿವೆ. ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದ ಅಕ್ಕ ಪಕ್ಕದಲ್ಲಿ ಆದರೆ ಬೇರೆ ಗ್ರಾಮಗಳ ಪರಿಸ್ಥಿತಿ ಹೇಗಿರಬಹುದು ಎಂಬುದು ಇಲ್ಲಿನ ವಾಸ್ತವ ಸ್ಥಿತಿಯಾಗಿದೆ.
ಮಾರ್ಟಳ್ಳಿಯಿಂದ ವಡಕ್ಕೆಹಳ್ಳ ಮಾರ್ಗ ರಸ್ತೆಯಲ್ಲಿ ಹಾಲಿನ ಡೈರಿ ಮುಂಬಾಗ ಕಸದ ರಾಶಿ ತುಂಬಿರುವುದು. ಇನ್ನೆಂದು ಕಡೆ ಮಾರ್ಟಳ್ಳಿಯಿಂದ ನಾಲ್ ರೋಡ್ ಮಾರ್ಗ ರಸ್ತೆಯಲ್ಲಿ ಕಸದ ರಾಶಿ ತುಂಬಿ ಗಬ್ಬು ನಾರುತಿದೆ.ಇದರಿಂದ ಜನರಿಗೆ ತೊಂದರೆ ಯಾಗುತ್ತಿದ್ದು ಕಸ ವಿಲೇವಾರಿ ಮಾಡಬೇಕು,ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ಸೂಕ್ತ ಕ್ರಮ ವಹಿಸಬೇಕೆಂದು ಗ್ರಾಮಸ್ಥರು ಆಗ್ರಸಿದ್ದಾರೆ.
ಮಾರ್ಟಳ್ಳಿ ಪಂಚಾಯಿತಿಗೆ ಕಸ ವಿಲೇವಾರಿ ವಾಹನ ಬಂದು ಮೂರು ವರ್ಷ ಕಳೆದರೂ ಇನ್ನೂ ಬಳಕೆಗೆ ಬಂದಿಲ್ಲ ಎಂಬುದು ಗಮನಾರ್ಹವಾಗಿದೆ. ಈ ಬಗ್ಗೆ ಗ್ರಾಮ ಪಂಚಾಯತಿ ಯವರು ಎಚ್ಚೆತ್ತು ಇನ್ನಾದರೂ ಎಲ್ಲಂದರೆ ಬಿದ್ದಿರುವ ಕಸದ ರಾಶಿ ಗುಡ್ಡೆ ತ್ಯಾಜ್ಯವನ್ನು ವಿಲೇವಾರಿ ಮಾಡುವ ಮೂಲಕ ಸ್ವಚ್ಛತೆಗೆ ಆದ್ಯತೆ ನೀಡಬೇಕಿದೆ.