ಕಲಬುರಗಿ ಕೇಂದ್ರಿಯ ವಿ.ವಿ ಯಲ್ಲಿ ವೀರಶೈವ ಲಿಂಗಾಯತ ಅಧ್ಯಯನ ಪೀಠ ಸ್ಥಾಪನೆಗೆ ಶ್ರಮಿಸಿ:ಡಾ. ರಾಜಶೇಖರ ಶಿವಾಚಾರ್ಯರು
ಬೀದರ:ಜೂ.16:ಕಲ್ಯಾಣ ಕರ್ನಾಟಕ ಪ್ರದೇಶದ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಹಮ್ಮೆಯ ಕೇಂದ್ರವಾದ ಕಲಬುರಗಿಯ ಕೇಂದ್ರಿಯ ವಿಶ್ವವಿದ್ಯಾನಿಲಯದಲ್ಲಿ ವೀರಶೈವ ಲಿಂಗಾಯತ ಅಧ್ಯಯನ ಪೀಠ ಸ್ಥಾಪಿಸಲು ಆದ್ಯತೆಯನ್ನು ನೀಡಬೇಕೆಂದು ಬೇಮಳಖೇಡ, ಗೋರಟಾ ಬೀದರ ಮಠದ ಶ್ರೀ ಡಾ|| ರಾಜಶೇಖರ ಶಿವಾಚಾರ್ಯರು ಕರೆ ನೀಡಿದರು. ಅವರು ಇಂದು ಬೀದರಿನ ಜ್ಞಾನ ಶಿವಯೋಗಾಶ್ರಮದ ದರ್ಶನಾರ್ಥವಾಗಿ ಭೇಟಿ ನೀಡಿದ ಬೀದರ ಲೋಕಸಭಾ ಮತಕ್ಷೇತ್ರದ ನೂತನ ಸಂಸದರಾದ ಶ್ರೀ ಸಾಗರ ಈಶ್ವರ ಖಂಡ್ರೆ ಅವರನ್ನು ಸತ್ಕರಿಸಿ ಆಶೀರ್ವದಿಸಿ ಉಭಯ ಕುಶಲೋಪರಿಯಲ್ಲಿ ಈ ವಿಷಯವನ್ನು ಚರ್ಚಿಸುತ್ತ ಕಡ್ಡಾಯವಾಗಿ ಅಧ್ಯಯನ ಪೀಠ ಸ್ಥಾಪನೆಗೆ ಆದ್ಯತೆಯನ್ನು ನೀಡಬೇಕೆಂದು ಸಲಹೆಯನ್ನು ನೀಡಿದರು.
ಕಲಬುರಗಿಯ ಕೇಂದ್ರಿಯ ವಿಶ್ವವಿದ್ಯಾಲಯ ಈ ಭಾಗದ ಉನ್ನತ ಶಿಕ್ಷಣ ವಿದ್ಯಾರ್ಥಿಗಳಿಗೆ ಒಂದು ವರದಾನವಾಗಿದ್ದು ಇದರ ಲಾಭವನನು ನಾವು ನಿರೀಕ್ಷೆ ಮಾಡಿದಷ್ಟು ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ವೀರಶೈವ ಲಿಂಗಾಯತ ಧರ್ಮ ಜಾಗತಿಕ ಅತ್ಯಂತ ಪುರಾತನ ಧರ್ಮವಾಗಿದ್ದು ಜಾಗತಿಕ ಪ್ರಾಚೀನ ಟಾಪ್ 5 ಧರ್ಮಗಳಲ್ಲಿ ಇದು ಒಂದಾಗಿದೆ. ದೇಶದ ಪುರಾತನ ಷಡ್‍ದರ್ಶನ ಸಿದ್ದಾಂತಗಳಲ್ಲಿ ಇದು ಶಕ್ತಿ ವಿಶಿಷ್ಟಾದ್ಯವೈ ಸಿದ್ಧಾಂತ ಹೆಸರಿನಿಂದ ಪ್ರಸಿದ್ಧವಾಗಿದ್ದು ಮನುಷ್ಯನ ಇಹ ಪರಗಳಲ್ಲಿ ವಿಜಯ ಸ್ವಾಧಿಸುವ ಅಪರೂಪದ ಸರಳಮಾರ್ಗವನ್ನು ಇದು ತೋರಿಸುತ್ತದೆ ತನ್ನ ಸರಳ ಸಾತ್ವಿಕ ಮಾರ್ಗದರ್ಶನದಿಂದ ಮಾನವ ಮಹಾದೇವನನ್ನಾಗಿ ಮಾಡುವುದಲ್ಲದೇ ಇದರಲ್ಲಿ ಲಿಂಗ, ವರ್ಣ, ವರ್ಗ ಭೇದಗಳು ಇಲ್ಲ. ಅತ್ಯಂತ ವೈಜ್ಞಾನಿಕ ವಾದಧರ್ಮ ಇದಾಗಿದೆ. ಲಿಂಗಧಾರಣ ಈ ಧರ್ಮದ ಮೂಲ ಜೀವಾಳವಾಗಿದೆ. ಯಾರು ಬೇಕಾದರೂ ಲಿಂಗಧಾರಣೆ ಮಾಡಿಕೊಂಡು ಜೀವನ ಗೆಲ್ಲಬಹುದೆಂಬುದು ಈ ಧರ್ಮದ ಧ್ಯೇಯವಾಕ್ಯವಿದೆ.
ಇಂತಹ ಜಾಗತಿಕ ಪುರಾತನ ಧರ್ಮ ಬಗೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಉನ್ನತ ಶೈಕ್ಷಣಿಕ ಸಂಸ್ಥೆಗಳಲ್ಲಿ ಈ ಧರ್ಮ ಕುರಿತು ಅಧ್ಯಯನ ಮಾಡುವ ವ್ಯವಸ್ಥೆಯನ್ನು ಇಲ್ಲದಿರುವುದು ನೋವಿನ ಸಂಗತಿಯಾಗಿದೆ. ಬೀದರ ಲೋಕ ಸಭಾ ಮತದಾರರ ಶ್ರೀ ರಕ್ಷೆಯಿಂದ ನೀವು ಗೆದ್ದು ಬಂದಿರುವುದು ನಿಮ್ಮ ಕಾರ್ಯ ಕಾಲಾವಧಿಯು ಸುವರ್ಣಾಕ್ಷರಗಳಿಂದ ಬರೆದಿಡುವಂತಾಬೇಕು. ಈ ನಿಟ್ಟಿನಲ್ಲಿ ಉನ್ನತ ಶೈಕ್ಷಣಿಕ ಕ್ಷೇತ್ರದಲ್ಲಿ ಸರ್ಕಾರ ಮಟ್ಟದಲ್ಲಿ ಪ್ರಾಚೀನ ವೀರಶೈವ ಲಿಂಗಾಯತ ಧರ್ಮವನ್ನು ಕುರಿತು ಅಧ್ಯಯನ, ಸಂಶೋಧನ ಮಾಡುವ ಅವಕಾಶಗಳು ಇಲ್ಲವಾಗಿದ್ದು. ಆದ್ದರಿಂದ ಕಲಬುರಗಿ ಕೇಂದ್ರಿಯ ವಿಶ್ವವಿದ್ಯಾಲಯದಲ್ಲಿ ವೀರಶೈವ ಲಿಂಗಾಯತ ಅಧ್ಯಯನ ಪೀಠವು ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಸ್ಥಾಪನೆಯಾದಲ್ಲಿ ಈ ಭಾಗದ ಅಸಂಖ್ಯಾತ ಉನ್ನತ ಶಿಕ್ಷಣ ವಿದ್ಯಾರ್ಥಿಗಳಿಗೆ ಮತ್ತು ವಿದ್ವಾಂಸರಿಗೆ ಅತ್ಯಮೂಲ್ಯವಾದ ಅನುಕೂಲ ಒದಗಿಸಿಕೊಟ್ಟಂತಾಗುತ್ತದೆ ಎಂದು ಶ್ರೀಗಳು ಸಂಸದ ಶ್ರೀ ಸಾಗರ ಈಶ್ವರ ಖಂಡ್ರೆ ಅವರಿಗೆ ಮನವರಿಕೆ ಮಾಡಿಕೊಟ್ಟರು. ಮಾನ್ಯ ಸಂಸದರಾದ ಸಾಗರ ಈಶ್ವರ ಖಂಡ್ರೆಯವರು ಖಂಡಿತವಾಗಿ ಈ ಕಾರ್ಯವನ್ನು ಶತಪ್ರಯತ್ನದಿಂದ ಮಾಡುವುದಾಗಿ ಹೇಳಿದರು.
ಶ್ರೀಶೈಲದ ಶ್ರೀ ಅಕ್ಕಮಹಾದೇವಿ ಚೈತನ್ಯ ಪೀಠದ ಪೂಜ್ಯಶ್ರೀ ಕರುಣಾದೇವಿ ಮಾತಾರವರಿಗೂ ಮತ್ತು ಶ್ರೀಗಳಿಗೆ ಶ್ರೀ ಸಾಗರ ಖಂಡ್ರೆರವರು ಶಾಲು ಹೊದಿಸಿ ಆರ್ಶಿವಾದ ಪಡೆದುಕೊಂಡರು.
ರಾಜ್ಯ ದಿಶಾ ಕಮಿಟಿಯ ಶಿವಯ್ಯ ಸ್ವಾಮಿ, ಕಂಟೆಪ್ಪಾ ಭಂಗೊರೆ, ಮಹಾಂತೇಶ ಡೊಂಗರಗಿ, ಬಸವರಾಜ ಹಾಲಹಳ್ಳಿ ಇದ್ದರು.